ನವದೆಹಲಿ: ಪ್ಯಾನ್ ನಂಬರ್ ಅನ್ನು ಆಧಾರ್‌ಗೆ ಜೋಡಿಸುವ ಕಾಲ ಮಿತಿಯನ್ನು ಜೂನ್ 30 ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರ, ದಾಖಲೆಗಳನ್ನು ಲಿಂಕ್ ಮಾಡದಿದ್ದರೆ ಆಗುವ ಪರಿಣಾಮಗಳನ್ನೂ ವಿವರಿಸಿದೆ.

– ಲಿಂಕ್ ಆಗದ ಪ್ಯಾನ್‌ಗಳಿಗೆ ಯಾವುದೇ ತೆರಿಗೆ ಮರುಪಾವತಿ ಸಿಗುವುದಿಲ್ಲ.

– ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಯ ವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ.

– ಟಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ/ಸಂಗ್ರಹಿಸಲಾಗುತ್ತದೆ.

– ₹1,000 ವಿಳಂಬ ಶುಲ್ಕ ಪಾವತಿಸಿದ 30 ದಿನಗಳಲ್ಲಿ ಪ್ಯಾನ್ ಮತ್ತೆ ಸಕ್ರಿಯಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಮೊದಲು ಆಧಾರ್ ಜತೆಗೆ ಪ್ಯಾನ್ ಜೋಡಿಸಲು ಮಾರ್ಚ್ 31 ಕಡೆಯ ದಿನವಾಗಿತ್ತು.

ಎರಡೂ ದಾಖಲೆಗಳನ್ನು ಲಿಂಕ್ ಮಾಡಲು 2022ರ ಮಾರ್ಚ್ 31ರವರೆಗೆ ಉಚಿತ ಅವಕಾಶ ನೀಡಲಾಗಿತ್ತು. 2022ರ ಏಪ್ರಿಲ್ 1ರಿಂದ ₹500 ಪಾವತಿಸಿ ಆಧಾರ್ ಲಿಂಕ್ ಮಾಡಬೇಕಾಗಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್ 31ರವರಗೆ ಲಿಂಕ್ ಮಾಡಬೇಕಾದರೆ ₹1,000 ಪಾವತಿಸಬೇಕು ಎಂದು ಹೇಳಲಾಗಿತ್ತು. ಒಂದು ವೇಳೆ ಈ ಗಡುವಿನ ಒಳಗೆ ಲಿಂಕ್ ಮಾಡದಿದ್ದರೇ ಆ ನಂತರ ಬರುವ ಅರ್ಜಿಗಳಿಗೆ ₹10 ಸಾವಿರ ದಂಡ ಹಾಕಲಾಗುವುದು ಎಂದು ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.