ನವದೆಹಲಿ: ದೇಶದಲ್ಲಿ ಉತ್ಪಾದನೆ ಮಾಡುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭದ ತೆರಿಗೆಯನ್ನು ಕೇಂದ್ರ ಸರ್ಕಾರವು ಅರ್ಧದಷ್ಟು ಇಳಿಸಿದೆ.

ಪ್ರತಿ ಟನ್ಗೆ ₹4,600 ಇದ್ದ ತೆರಿಗೆಯನ್ನು ₹2,100ಕ್ಕೆ ಇಳಿಸಲಾಗಿದೆ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್ಎಇಡಿ) ರೂಪದಲ್ಲಿ ವಿಧಿಸುವ ಈ ತೆರಿಗೆಯು ಶನಿವಾರದಿಂದಲೇ ಜಾರಿಗೆ ಬಂದಿದೆ.

ರಫ್ತು ಮಾಡುವ ಡೀಸೆಲ್, ಪೆಟ್ರೋಲ್ ಮತ್ತು ವಿಮಾನ ಇಂಧನದ (ಎಟಿಎಫ್) ಮೇಲಿನ ಈ ಸುಂಕವನ್ನು ಪರಿಷ್ಕರಿಸಿಲ್ಲ.

ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳಲ್ಲಿ ಇಂಧನ ಕಂಪನಿಗಳು ಗಳಿಸುವ ಹೆಚ್ಚಿನ ಆದಾಯದ ಮೇಲೆ ಈ ತೆರಿಗೆ ವಿಧಿಸಲಾಗುತ್ತದೆ. ಭಾರತದಲ್ಲಿ 2022ರ ಜುಲೈ 1ರಿಂದ ಈ ಪದ್ಧತಿ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರವು ಪ್ರತಿ 15 ದಿನಕ್ಕೊಮ್ಮೆ ಸರಾಸರಿ ತೈಲ ದರ ಆಧರಿಸಿ ಆಕಸ್ಮಿಕ ಲಾಭದ ತೆರಿಗೆ ಬೆಲೆಯನ್ನು ಪರಿಷ್ಕರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.