ಬೆಂಗಳೂರು: ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಮತ್ತು ಅದಕ್ಕೆ ಸಂಬಂಧಿತ ಸೇವೆಗಳ ಕ್ಷೇತ್ರದ ಸಿಐಐ–ಐಜಿಬಿಸಿ ಸಂಸ್ಥೆಯು (ಭಾರತೀಯ ಕೈಗಾರಿಕಾ ಒಕ್ಕೂಟ– ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್) ಬೆಂಗಳೂರಿನಲ್ಲಿ 22ನೇ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಮಾವೇಶವನ್ನು ನವೆಂಬರ್ 14ರಿಂದ 16ರ ವರೆಗೆ ಹಮ್ಮಿಕೊಂಡಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಈ ಸಮಾವೇಶ ನಡೆಯಲಿದೆ. ‘ಗ್ರೀನ್ ಹೋಮ್ಸ್- ಟುವರ್ಡ್ಸ್ ನೆಟ್ ಝೀರೊ’ ಘೋಷವಾಕ್ಯದಡಿ ಸಮಾವೇಶ ನಡೆಯಲಿದೆ.

ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ 2024 ಪರಿಸರಸ್ನೇಹಿ ನಿರ್ಮಾಣದಲ್ಲಿ ಏಷ್ಯಾದ ಅತಿದೊಡ್ಡ ಸಮಾವೇಶವಾಗಿದೆ. ಸುಸ್ಥಿರ ನಿರ್ಮಾಣ ಚಟುವಟಿಕೆ ಮತ್ತು ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಉದ್ಯಮದ ವೃತ್ತಿಪರರು, ವಾಸ್ತುಶಿಲ್ಪಿಗಳು, ಬಿಲ್ಡರ್ ಮತ್ತು ನೀತಿ ನಿರೂಪಕರಿಗೆ ಜ್ಞಾನ ವಿನಿಮಯ ಮಾಡಿಕೊಳ್ಳಲು ವೇದಿಕೆ ಕಲ್ಪಿಸುತ್ತಿದೆ.

‘ಭಾರತದಲ್ಲಿ ಪರಿಸರಸ್ನೇಹಿ ನಿರ್ಮಾಣಗಳನ್ನು ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಪ್ರೋತ್ಸಾಹಿಸುತ್ತ ಬಂದಿದೆ. ಪ್ರಸ್ತುತ 1,200 ಕೋಟಿ ಚದರ ಅಡಿಗೂ ಹೆಚ್ಚಿನ ಪರಿಸರಸ್ನೇಹಿ ಕಟ್ಟಡಗಳು ಮತ್ತು 14,500ಕ್ಕೂ ಹೆಚ್ಚು ಪ್ರಮಾಣಿತ ನಿರ್ಮಾಣ ಯೋಜನೆಗಳು ಐಜಿಬಿಸಿಯಡಿ ನೋಂದಣಿಗೊಂಡಿವೆ’ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಐಜಿಬಿಸಿ ಬೆಂಗಳೂರು ಘಟಕದ ಅಧ್ಯಕ್ಷ ಮತ್ತು ಆಲ್ಟ್ಟೆಕ್ ಫೌಂಡೇಷನ್ನ ಟ್ರಸ್ಟಿ ಡಾ.ಚಂದ್ರಶೇಖರ್ ಹರಿಹರನ್ ತಿಳಿಸಿದರು.

‘ಹವಾಮಾನ ಬದಲಾವಣೆ, ಸುಸ್ಥಿರ ಪರಿಕರಗಳು ಮತ್ತು ಶೂನ್ಯ ಇಂಗಾಲದಂಥ ಪ್ರಮುಖ ವಿಷಯಗಳನ್ನು ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದರು.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರಸ್ನೇಹಿ ನಿರ್ಮಾಣ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್, ಗ್ರೀನ್ ಬಿಲ್ಡಿಂಗ್ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲಿದೆ. ಸಮಾವೇಶದಲ್ಲಿ ಭಾಗವಹಿಸುವವರು ತಮ್ಮ ಮನೆ, ಕಚೇರಿ ಮತ್ತು ಕಟ್ಟಡಗಳಲ್ಲಿ ಬಳಸಬಹುದಾದ ಪರಿಸರಸ್ನೇಹಿ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಪಡೆಯಬಹುದು. ಈ ಸಮಾವೇಶದಲ್ಲಿ 1,000ಕ್ಕೂ ಹೆಚ್ಚು ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಸಿಐಐ ಗ್ರೀನ್ ಬಿಸಿನೆಸ್ ಸೆಂಟರ್ನ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಎಸ್. ವೆಂಕಟಗಿರಿ ಮಾತನಾಡಿ, ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಿಐಐನ ಪ್ರಮುಖ ವಾರ್ಷಿಕ ಸಮಾವೇಶವಾಗಿದೆ. 18 ವರ್ಷದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಈ ವರ್ಷದ ಸಮಾವೇಶವು ವಿಶ್ವದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನ ಏಷ್ಯಾ ಪೆಸಿಫಿಕ್ ನೆಟ್ವರ್ಕ್ ಮೀಟ್ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜೊತೆಗೆ ನಡೆಯುತ್ತಿದೆ. ಹಾಗಾಗಿ, 13 ರಾಷ್ಟ್ರಗಳೂ ಇದರಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು.

ಐಜಿಬಿಸಿ ಬೆಂಗಳೂರು ಶಾಖೆಯ ಸಹ ಅಧ್ಯಕ್ಷ ಮತ್ತು ಅರ್ಬನ್ ಫ್ರೇಮ್ ನಿರ್ದೇಶಕ ಅನೂಪ್ ನಾಯಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.