ಮ್ಯೂಚುವಲ್ ಫಂಡ್ ಹೂಡಿಕೆ ಎಂದಾಕ್ಷಣ ಅನೇಕರು ಆಲೋಚನೆ ಮಾಡದೆ, ಸ್ನೇಹಿತರು ಅಥವಾ ಪರಿಚಯದವರು ಹೇಳಿದ ಫಂಡ್ ಒಂದರಲ್ಲಿ ಹೂಡಿಕೆ ಮಾಡಿ ಸುಮ್ಮನಾಗುತ್ತಾರೆ. ಆದರೆ, ನಿಮ್ಮ ಅಗತ್ಯಕ್ಕೆ ಸರಿಹೊಂದುವ ಫಂಡ್ ಯಾವುದು ಎಂದು ತಿಳಿದುಕೊಂಡು ನಂತರ ಹೂಡಿಕೆ ಮಾಡುವುದು ಮುಖ್ಯ.

ಆಗ ಮಾತ್ರ ಮ್ಯೂಚುವಲ್ ಫಂಡ್ ಹೂಡಿಕೆ ಹಾದಿ ಸುಗಮವಾಗುತ್ತದೆ. ಇದು ಆಗಬೇಕು ಎಂದಾದರೆ ಡೆಟ್, ಈಕ್ವಿಟಿ ಮತ್ತು ಹೈಬ್ರೀಡ್ ಮ್ಯೂಚುವಲ್ ಫಂಡ್ಗಳ ಬಗ್ಗೆ ಒಂದಿಷ್ಟು ತಿಳಿದುಕೊಂಡಿರುವುದು ಅಗತ್ಯ.

ಡೆಟ್ ಮ್ಯೂಚುವಲ್ ಫಂಡ್: ಇಲ್ಲಿ ಹೂಡಿಕೆದಾರನ ಹಣಕ್ಕೆ ಹೆಚ್ಚು ರಿಸ್ಕ್ ಇರುವುದಿಲ್ಲ. ಆದರೆ ಹೂಡಿಕೆ ಮೊತ್ತದ ಮೇಲೆ ಸಿಗುವ ಲಾಭದ ಪ್ರಮಾಣ ಕಡಿಮೆ. ಹೂಡಿಕೆಯಲ್ಲಿ ಹೆಚ್ಚು ರಿಸ್ಕ್ ಬೇಡ ಎನ್ನುವವರು ಮತ್ತು ಅಲ್ಪಾವಧಿಗೆ ಹೂಡಿಕೆ ಮಾಡಬೇಕು ಎನ್ನುವವರು ಡೆಟ್ ಫಂಡ್ ಪರಿಗಣಿಸಬಹುದು. ಡೆಟ್ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆದಾರರಿಂದ ಸಂಗ್ರಹಿಸುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಿಲ್ಲ. ಸರ್ಕಾರಿ ಬಾಂಡ್ಗಳು, ಡಿಬೆಂಚರ್ಗಳು, ಕಾರ್ಪೊರೇಟ್ ಎಫ್.ಡಿ.ಗಳು, ಟ್ರೆಷರಿ ಬಿಲ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಡೆಟ್ ಫಂಡ್ನಲ್ಲಿ ಹೂಡಿಕೆ ಅವಧಿ ಆಧರಿಸಿ ಲಿಕ್ವಿಡ್ ಫಂಡ್, ಮನಿ ಮಾರ್ಕೆಟ್ ಫಂಡ್, ಡೈನಾಮಿಕ್ ಬಾಂಡ್ ಫಂಡ್, ಕಾರ್ಪೊರೇಟ್ ಬಾಂಡ್ ಫಂಡ್, ಬ್ಯಾಂಕಿಂಗ್ ಆ್ಯಂಡ್ ಪಿಎಸ್ಯು ಫಂಡ್, ಗಿಲ್ಟ್ ಫಂಡ್, ಕ್ರೆಡಿಟ್ ರಿಸ್ಕ್ ಫಂಡ್, ಫ್ಲೋಟರ್ ಫಂಡ್, ಓವರ್ ನೈಟ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಡುರೇಷನ್ ಫಂಡ್, ಲೋ ಡುರೇಷನ್ ಫಂಡ್, ಮೀಡಿಯಂ ಡುರೇಷನ್ ಫಂಡ್, ಮೀಡಿಯಂ ಟು ಲಾಂಗ್ ಡುರೇಷನ್ ಫಂಡ್, ಲಾಂಗ್ ಡುರೇಷನ್ ಫಂಡ್ ಆಯ್ಕೆಗಳಿವೆ.

ಈಕ್ವಿಟಿ ಮ್ಯೂಚುವಲ್ ಫಂಡ್: ಇಲ್ಲಿ ಹೂಡಿಕೆಗೆ ರಿಸ್ಕ್ ಜಾಸ್ತಿ ಇದ್ದು ಲಾಭ ಗಳಿಸುವ ಅವಕಾಶವೂ ಹೆಚ್ಚಿಗೆ ಇರುತ್ತದೆ. ದೀರ್ಘಾವಧಿ, ಅಂದರೆ 5ರಿಂದ 10 ವರ್ಷಗಳ ಅವಧಿಯ ಹೂಡಿಕೆಗೆ ಈಕ್ವಿಟಿ ಮ್ಯೂಚುವಲ್ ಫಂಡ್ ಸೂಕ್ತ. ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ಶೇ 12ರಿಂದ ಶೇ 13ರಷ್ಟು ಲಾಭಾಂಶ ನಿರೀಕ್ಷಿಸಬಹುದು.

ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಈ ಹೂಡಿಕೆಯಲ್ಲಿ ನಿಶ್ಚಿತ ಠೇವಣಿಯಲ್ಲಿ ಇರುವಂತೆ ಇಂತಿಷ್ಟೇ ಬಡ್ಡಿ ಲಾಭ ಸಿಗುತ್ತದೆ ಎನ್ನುವ ಖಾತರಿ ಇರುವುದಿಲ್ಲ. ಈಕ್ವಿಟಿ ಮ್ಯೂಚುವಲ್ ಫಂಡ್ ಅಡಿಯಲ್ಲಿ ಪ್ರಮುಖವಾಗಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ಗಳಿವೆ. ಲಾರ್ಜ್ ಕ್ಯಾಪ್ ಫಂಡ್ಗಳು ದೊಡ್ಡ ಮಟ್ಟದ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ಗಳು ಕ್ರಮವಾಗಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪನಿಗಳಲ್ಲಿ ತೊಡಗಿಸುತ್ತವೆ.

ಹೈಬ್ರೀಡ್ ಮ್ಯೂಚುವಲ್ ಫಂಡ್: ಈಕ್ವಿಟಿ ಮತ್ತು ಡೆಟ್ ಮ್ಯೂಚುವಲ್ ಫಂಡ್ಗಳ ಮಿಶ್ರಣ ಹೈಬ್ರೀಡ್ ಮ್ಯೂಚುವಲ್ ಫಂಡ್. ಅಂದರೆ ಹೆಚ್ಚು ರಿಸ್ಕ್ ಇರುವ ಕಂಪನಿ ಷೇರುಗಳು ಮತ್ತು ಕಡಿಮೆ ರಿಸ್ಕ್ ಇರುವ ಬಾಂಡ್, ಡಿಬೆಂಚರ್, ಕಾರ್ಪೊರೇಟ್ ಎಫ್.ಡಿ., ಗವರ್ನಮೆಂಟ್ ಸೆಕ್ಯೂರಿಟೀಸ್ಗಳಲ್ಲಿ ಹೈಬ್ರೀಡ್ ಮ್ಯೂಚುವಲ್ ಫಂಡ್ಗಳು ಹೂಡಿಕೆ ಮಾಡುತ್ತವೆ. ಇಲ್ಲಿ ರಿಸ್ಕ್ ಮತ್ತು ಲಾಭಾಂಶ ಎರಡೂ ಕೂಡ ಮಧ್ಯಮ ಪ್ರಮಾಣದಲ್ಲಿ ಇರುತ್ತವೆ.

ಹೈಬ್ರೀಡ್ ಫಂಡ್ಗಳ ಅಡಿಯಲ್ಲಿ ಈಕ್ವಿಟಿ ಓರಿಯಂಟೆಡ್ ಹೈಬ್ರೀಡ್ ಫಂಡ್, ಡೆಟ್ ಓರಿಯಂಟೆಡ್ ಹೈಬ್ರೀಡ್ ಫಂಡ್, ಬ್ಯಾಲೆನ್ಸ್ಡ್ ಫಂಡ್, ಮಾಸಿಕ ಆದಾಯ ಯೋಜನೆಯ ಫಂಡ್ ಮತ್ತು ಆರ್ಬಿಟ್ರೇಜ್ ಫಂಡ್ಗಳು ಇವೆ.

ಸತತ ಎರಡನೇ ವಾರ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿತ ಕಂಡಿವೆ. ಫೆಬ್ರುವರಿ 18ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಳಿಕೆಯಾಗಿವೆ. 57,832 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇಕಡ 0.55ರಷ್ಟು ಕುಸಿತವಾಗಿದೆ. 17,276 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.56ರಷ್ಟು ತಗ್ಗಿದೆ. ರಷ್ಯಾ–ಉಕ್ರೇನ್ ನಡುವಿನ ಬಿಕ್ಕಟ್ಟು, ತೈಲ ಬೆಲೆ ಹೆಚ್ಚಳ, ಅಮೆರಿಕದ ಫೆಡರಲ್ ಬ್ಯಾಂಕ್ನಿಂದ ನಿರೀಕ್ಷೆಗೂ ಮೊದಲೇ ಬಡ್ಡಿ ದರ ಹೆಚ್ಚಳ ಸಾಧ್ಯತೆ ಸೇರಿ ಹಲವು ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4.6ರಷ್ಟು, ಲೋಹ ವಲಯ ಶೇ 4ರಷ್ಟು, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.7ರಷ್ಟು ಕುಸಿದಿವೆ. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕ್ರಮವಾಗಿ ಶೇ 2ರಷ್ಟು ಮತ್ತು ಶೇ 3.2ರಷ್ಟು ತಗ್ಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 12,215.48 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 10,592.21 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಐಷರ್ ಮೋಟರ್ಸ್ ಶೇ 4ರಷ್ಟು, ಟಿಸಿಎಸ್ ಶೇ 3ರಷ್ಟು, ಹಿಂದೂಸ್ಥಾನ್ ಯುನಿಲಿವರ್ ಶೇ 2.3ರಷ್ಟು, ಹೀರೊ ಮೋಟೊಕಾರ್ಪ್ ಶೇ 2ರಷ್ಟು, ಟಾಟಾ ಕನ್ಸ್ಯೂಮರ್ ಶೇ 2.3ರಷ್ಟು ಏರಿಕೆ ಕಂಡಿವೆ. ಪವರ್ ಗ್ರಿಡ್ ಶೇ 6ರಷ್ಟು, ಜೆಎಸ್ಡಬ್ಲ್ಯೂ ಸ್ಟೀಲ್ ಶೇ 6ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 6ರಷ್ಟು, ಸಿಪ್ಲಾ ಶೇ 5.2ರಷ್ಟು ಮತ್ತು ಐಸಿಐಸಿಐ ಬ್ಯಾಂಕ್ ಶೇ 5.3ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಈ ವಾರ ಬ್ರಹ್ಮಪುತ್ರ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಎಲೆಂಟಾಬ್ ಬೆಕ್ ಇಂಡಿಯಾ ಲಿಮಿಟೆಡ್, ಮಹೀಂದ್ರ ಸಿಐಇ
ಅಟೋಮೋಟಿವ್ ಲಿಮಿಟೆಡ್, ಸೆನೋಫಿ ಇಂಡಿಯಾ ಲಿಮಿಟೆಡ್, ಕೆಎಸ್ಬಿ ಲಿಮಿಟೆಡ್, ಲಿಂದೇ ಇಂಡಿಯಾ ಲಿಮಿಟೆಡ್, ವೆಸುವಿಯಸ್ ಇಂಡಿಯಾ ಲಿಮಿಟೆಡ್, ರೈನ್ ಇಂಡಸ್ಟ್ರೀಸ್ ಲಿಮಿಟೆಡ್, ಸ್ಟೋವೆಕ್ ಇಂಡಸ್ಟ್ರೀಸ್ ಲಿಮಿಟೆಡ್, ಮೋಡರ್ಮನ್
ಸ್ಟೀಲ್ಸ್ ಲಿಮಿಟೆಡ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಮಾರ್ಚ್ 10ರಂದು ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಮಾರ್ಚ್ 11ರಂದು ಎಲ್ಐಸಿ ಐಪಿಒ ನಡೆಯುವ ನಿರೀಕ್ಷೆಯಿದೆ. ಮಾರ್ಚ್ 15-16ರಂದು ಬಡ್ಡಿ ದರ ವಿಚಾರವಾಗಿ ಅಮೆರಿಕದ ಫೆಡರಲ್ ಬ್ಯಾಂಕ್ ಸಮಿತಿಯ ಸಭೆ ಇದೆ. ಈ ಎಲ್ಲ ಬೆಳವಣಿಗೆಗಳ ಮೇಲೆ ಹೂಡಿಕೆದಾರರ ದೃಷ್ಟಿ
ನೆಟ್ಟಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.