ಹೂಡಿಕೆ ಮಾಡುವಾಗ ಸಾಮಾನ್ಯವಾಗಿ ‘ಪೋರ್ಟ್‌ಫೋಲಿಯೊ’ ಎನ್ನುವ ಪದವನ್ನು ಕೇಳುತ್ತಲೇ ಇರುತ್ತೇವೆ. ಒಂದು ಉತ್ತಮ ಪೋರ್ಟ್‌ಫೋಲಿಯೊ ರೂಪಿಸಿಕೊಂಡರೆ ಹೂಡಿಕೆದಾರ ಹೆಚ್ಚು ಲಾಭ ಗಳಿಸಬಹುದು ಎಂಬ ಲೆಕ್ಕಾಚಾರ ಇದೆ.

ಹಾಗಾದರೆ ಪೋರ್ಟ್‌ಫೋಲಿಯೊ ಅಂದರೆ ಏನು? ಅದು ಏನನ್ನು ಒಳಗೊಂಡಿರುತ್ತದೆ? ಉತ್ತಮ ಪೋರ್ಟ್‌ಫೋಲಿಯೊ ರೂಪಿಸುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ಏನಿದು ಪೋರ್ಟ್‌ಫೋಲಿಯೊ?: ವಿವಿಧ ಹಣಕಾಸು ಉತ್ಪನ್ನಗಳ ಒಂದು ಗುಚ್ಛವನ್ನು ಸರಳವಾಗಿ ಪೋರ್ಟ್‌ಫೋಲಿಯೊ ಎಂದು ಕರೆಯಬಹುದು. ಹೂಡಿಕೆ ಮೇಲೆ ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಪೋರ್ಟ್‌ಫೋಲಿಯೊ ನಿರ್ಮಾಣ ಆಗಿರುತ್ತದೆ. ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ರಿಯಲ್ ಎಸ್ಟೇಟ್, ಚಿನ್ನ, ಬ್ಯಾಂಕ್ ನಿಶ್ಚಿತ ಠೇವಣಿ ಇತ್ಯಾದಿ ಹೂಡಿಕೆಗಳನ್ನು ಪೋರ್ಟ್‌ಫೋಲಿಯೊ ಒಳಗೊಂಡಿರುತ್ತದೆ. ಹೂಡಿಕೆ ಉದ್ದೇಶಕ್ಕೆ ತಕ್ಕಂತೆಪೋರ್ಟ್‌ಫೋಲಿಯೊದಲ್ಲಿನ ಹೂಡಿಕೆಉತ್ಪನ್ನಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಹೂಡಿಕೆ ಮಾಡುವಾಗ ಹೆಚ್ಚು ರಿಸ್ಕ್ ಇರುವ ಕಡೆ ಹಣ ತೊಡಗಿಸಬಾರದು. ನಿವೃತ್ತಿ ಜೀವನಕ್ಕೆ ಹೂಡಿಕೆ ಮಾಡುವಾಗ ಹೆಚ್ಚು ರಿಸ್ಕ್ ಇರುವ ಹೂಡಿಕೆ ಅಂದರೆ, ಷೇರುಗಳಲ್ಲಿ ಹೂಡಿಕೆಯನ್ನು ಪರಿಗಣಿಸಬಹುದು. ಒಟ್ಟಿನಲ್ಲಿ ಹೂಡಿಕೆದಾರನಿಗೆ ನಷ್ಟವಾಗದಂತೆ ವಿವಿಧ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸಿ ಸಂಭಾವ್ಯ ರಿಸ್ಕ್ ನಿಭಾಯಿಸುತ್ತದೆ ಒಳ್ಳೆಯ ಪೋರ್ಟ್‌ಫೋಲಿಯೊ.

ವಿವಿಧ ಮಾದರಿಯ ಪೋರ್ಟ್‌ಫೋಲಿಯೊಗಳು:

1. ಅಗ್ರೆಸಿವ್ ಪೋರ್ಟ್‌ಫೋಲಿಯೊ: ಅತಿ ಹೆಚ್ಚು ರಿಸ್ಕ್ ತೆಗೆದುಕೊಂಡು ಅತಿ ಹೆಚ್ಚು ಲಾಭ ನಿರೀಕ್ಷೆ ಮಾಡುವುದನ್ನು, ಅದಕ್ಕೆ ಅನುಗುಣವಾಗಿ ಹೂಡಿಕೆ ಉತ್ಪನ್ನಗಳನ್ನು ಆಯ್ಕೆ ಮಾಡುವುದನ್ನು ಅಗ್ರೆಸಿವ್ ಪೋರ್ಟ್‌ಫೋಲಿಯೊ ಎಂದು ಪರಿಗಣಿಸಲಾಗುತ್ತದೆ. ರಿಸ್ಕ್ ಇದ್ದರೂ ತೊಂದರೆ
ಯಿಲ್ಲ ಹೆಚ್ಚು ಲಾಭ ನಿರೀಕ್ಷೆ ಮಾಡುತ್ತೇವೆ ಎನ್ನುವವರಿಗೆ ಈ ಮಾದರಿ ಒಪ್ಪುತ್ತದೆ. ಉದಾಹರಣೆಗೆ ಷೇರು ಹೂಡಿಕೆ, ಈಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆಗಳು ಅಗ್ರೆಸಿವ್ ಪೋರ್ಟ್‌ಫೋಲಿಯೊ ವ್ಯಾಪ್ತಿಗೆ ಬರುತ್ತವೆ.

2. ಕನ್ಸರ್ವೇಟಿವ್ ಪೋರ್ಟ್‌ಫೋಲಿಯೊ: ಹೆಚ್ಚು ಲಾಭ ಗಳಿಸದಿದ್ದರೂ ಪರವಾಗಿಲ್ಲ, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನುವ ಮಾದರಿಯನ್ನು ಕನ್ಸರ್ವೇಟಿವ್ ಪೋರ್ಟ್‌ಫೋಲಿಯೊ ಎಂದು ಪರಿಗಣಿಸಲಾಗುತ್ತದೆ. ನಮ್ಮ ಹೂಡಿಕೆ ಲಾಭ ಗಳಿಸದಿದ್ದರೂ ಪರವಾಗಿಲ್ಲ. ಆದರೆ, ಬಂಡವಾಳಕ್ಕೆ ಖಾತರಿ ಇರಬೇಕು ಎನ್ನುವವರಿಗೆ ಈ ಮಾದರಿ ಒಪ್ಪುತ್ತದೆ. ಬ್ಯಾಂಕ್ ನಿಶ್ಚಿತ ಠೇವಣಿ, ಲಾರ್ಜ್ ಕ್ಯಾಪ್ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಕನ್ಸರ್ವೇಟಿವ್ ಪೋರ್ಟ್‌ಫೋಲಿಯೊ ವ್ಯಾಪ್ತಿಗೆ ಬರುತ್ತವೆ.

3. ಇನ್‌ಕಮ್ ಪೋರ್ಟ್‌ಫೋಲಿಯೊ: ಹೂಡಿಕೆಗಳಿಂದ ನಿರ್ದಿಷ್ಟ ಆದಾಯ ನಿರೀಕ್ಷೆ ಮಾಡುವವರು ಈ ಪೋರ್ಟ್‌ಫೋಲಿಯೊ ಮೊರೆ ಹೋಗುತ್ತಾರೆ. ಅಂಚೆ ಕಚೇರಿ ಹೂಡಿಕೆಗಳು, ಬಾಂಡ್‌ಗಳು, ಸಾಲ ಪತ್ರಗಳು, ಹೆಚ್ಚು ಡಿವಿಡೆಂಡ್ (ಲಾಭಾಂಶ) ಕೊಡುವ ಷೇರುಗಳು ಈ ವ್ಯಾಪ್ತಿಗೆ ಬರುತ್ತವೆ. ಕೆಲಸದಿಂದ ನಿವೃತ್ತಿಯಾಗಿದ್ದು ನಿರ್ದಿಷ್ಟ ಆದಾಯಕ್ಕಾಗಿ ಹೂಡಿಕೆ ಮಾಡುವವರು ಇನ್‌ಕಮ್ ಪೋರ್ಟ್‌ಫೋಲಿಯೊ ಮೊರೆ ಹೋಗುತ್ತಾರೆ.

4. ಸ್ಪೆಕ್ಯುಲೇಟಿವ್ ಪೋರ್ಟ್‌ಫೋಲಿಯೊ: ಈ ಮಾದರಿಯ ಪೋರ್ಟ್‌ಫೋಲಿಯೊ ಅತಿ ಹೆಚ್ಚು ರಿಸ್ಕ್ ಒಳಗೊಂಡಿರುತ್ತದೆ. ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ (ಐಪಿಒ) ಹೂಡಿಕೆ ಮಾಡುವುದು, ಕಡಿಮೆ ರೇಟಿಂಗ್ ಇರುವ ಬಾಂಡ್‌ಗಳಲ್ಲಿ ಹಣ ತೊಡಗಿಸುವುದು, ಫ್ಯೂಚರ್ಸ್ ಆ್ಯಂಡ್ ಆಪ್ಷನ್ಸ್ ವಹಿವಾಟು ಇದಕ್ಕೆ ಉದಾಹರಣೆಯಾಗಿ ಪರಿಗಣಿಸಬಹುದು.

5. ಹೈಬ್ರೀಡ್ ಪೋರ್ಟ್‌ಫೋಲಿಯೊ: ಈ ಮಾದರಿಯ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳು ಮತ್ತು ಕಡಿಮೆ ರಿಸ್ಕ್ ಇರುವ ಹೂಡಿಕೆಗಳ ಮಿಶ್ರಣವಿರುತ್ತದೆ. ಈಕ್ವಿಟಿ ಮತ್ತು ಡೆಟ್ (ಸಾಲಪತ್ರ) ಹೂಡಿಕೆಗಳನ್ನು ಇದು ಒಳಗೊಂಡಿರುತ್ತದೆ. ಎರಡು ಮಾದರಿಯ ಹೂಡಿಕೆಗಳನ್ನು ಇದು ಒಳಗೊಂಡಿರುವುದರಿಂದ ಮಾರುಕಟ್ಟೆಯ ಏರಿಳಿತಗಳನ್ನು ಮೀರಿ ಇದರಲ್ಲಿ ಹೂಡಿಕೆ ಲಾಭಾಂಶದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಪೋರ್ಟ್‌ಫೋಲಿಯೊ ರೂಪಿಸುವಾಗ ಪರಿಗಣಿಸಬೇಕಾದ ಅಂಶಗಳು:

l ಹಣಕಾಸಿನ ಗುರಿಗಳು

l ಹೂಡಿಕೆ ವೈವಿಧ್ಯತೆ

l ಹೂಡಿಕೆ ಅವಧಿ

l ರಿಸ್ಕ್ ಪ್ರಮಾಣದ ಅಂದಾಜು

ಪೋರ್ಟ್‌ಫೋಲಿಯೊದಲ್ಲಿನ ಸಾಮಾನ್ಯ ಹೂಡಿಕೆ ಆಯ್ಕೆಗಳು:

l ಷೇರು ಹೂಡಿಕೆ

l ಮ್ಯೂಚುವಲ್ ಫಂಡ್

l ಬಾಂಡ್

l ಚಿನ್ನ

l ರಿಯಲ್ ಎಸ್ಟೇಟ್ ಇತ್ಯಾದಿ.

ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಕುಸಿತ ದಾಖಲಿಸಿವೆ. ಮಾರ್ಚ್ 17ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. 57,989 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.93ರಷ್ಟು ಇಳಿಕೆಯಾಗಿದೆ. 17,100 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.79ರಷ್ಟು ತಗ್ಗಿದೆ. ಅಮೆರಿಕದ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು, ವಿದೇಶಿ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4.5ರಷ್ಟು ಕುಸಿದಿದೆ. ವಾಹನ ಸೂಚ್ಯಂಕ ಶೇ 4ರಷ್ಟು, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 2.3ರಷ್ಟು ಮತ್ತು ಬ್ಯಾಂಕ್ ಸೂಚ್ಯಂಕ ಶೇ 2ರಷ್ಟು ಇಳಿಕೆಯಾಗಿದೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,953.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 9.233.05 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಇಂಡಸ್ ಇಂಡ್ ಬ್ಯಾಂಕ್, ಬಂಧನ್ ಬ್ಯಾಂಕ್, ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಕುಸಿತ ಕಂಡಿವೆ. ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಡಿಎಲ್‌ಎಫ್ ಮತ್ತು ಟೆಕ್ ಮಹೀಂದ್ರ ಗಳಿಸಿಕೊಂಡಿವೆ.

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 2ರಷ್ಟು ಕುಸಿದಿದ್ದು, ಇಮಾಮಿ, ಮದರ್‌ಸನ್ ಇಂಟರ್‌ನ್ಯಾಷನಲ್, ಕ್ರಿಸೆಲ್, ಜಿಲೆಟ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಂಫಸಿಸ್ ಇಳಿಕೆಯಾಗಿವೆ.

ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3ರಷ್ಟು ಕುಸಿತ ಕಂಡಿದ್ದು ಸ್ವ್ಯಾನ್ ಎನರ್ಜಿ, ಪಿಸಿ ಜ್ಯುವೆಲರ್, ಜಿಆರ್‌ಎಂ ಒವರ್ಸೀಸ್, ಬ್ರೈಟ್ ಕಾಂ ಗ್ರೂಪ್, ವಿಕಾಸ್ ಡಬ್ಲ್ಯೂಎಸ್‌ಪಿ, ರುಶಿಲ್ ಡೆಕೋರ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್, ಫ್ಯೂಚರ್ ಕನ್ಸ್ಯೂಮರ್ ಮತ್ತು ಜಿಂದಾಲ್ ಡ್ರಿಲ್ಲಿಂಗ್ ಇಂಡಸ್ಟ್ರೀಸ್ ಶೇ 15ರಿಂದ ಶೇ 22ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಅಮರಿಕದ ಬ್ಯಾಂಕಿಂಗ್ ವಲಯದಲ್ಲಿನ ತಲ್ಲಣವು ಭಾರತದ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಕಳೆದ ವಾರ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ಈ ವಾರ ಅದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳ ಜೊತೆ ದೇಶಿ ಮಾರುಕಟ್ಟೆಯಲ್ಲಾಗುವ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.