2023ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು ₹6,028 ಇತ್ತು. ಈ ವರ್ಷದ ದೀಪಾವಳಿ ವೇಳೆಗೆ ₹7,857ಕ್ಕೆ ಜಿಗಿದಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಚಿನ್ನದ ದರವು ಬರೋಬ್ಬರಿ ಶೇ 30ರಷ್ಟು ಹೆಚ್ಚಳ ಕಂಡಿದೆ.

ಕಳೆದ 10 ವರ್ಷದ ಗಳಿಕೆಯ ಲೆಕ್ಕಾಚಾರ ನೋಡಿದಾಗಲೂ ಚಿನ್ನವು ಸರಾಸರಿ ಶೇ 10 ರಿಂದ ಶೇ 11ರಷ್ಟು ಲಾಭ ಕೊಟ್ಟಿದೆ. 2025ರಲ್ಲೂ ಚಿನ್ನ ಶೇ 15ರ ವರೆಗೂ ಗಳಿಕೆ ತಂದುಕೊಡುವ ಸಾಧ್ಯತೆಯಿದೆ ಎಂದು ಪರಿಣತರು ಅಂದಾಜಿಸಿದ್ದಾರೆ. ಈ ಹೊತ್ತಿನಲ್ಲಿ ಗೋಲ್ಡ್ ಮ್ಯೂಚುವಲ್ ಫಂಡ್ಗಳ (ಎಂ.ಎಫ್) ಮೇಲೆ ಹೂಡಿಕೆ ಮಾಡಿ ಲಾಭ ಗಳಿಸುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಚಿನ್ನದ ಮೇಲೆ ಹೂಡಿಕೆ ಯಾಕೆ ಮುಖ್ಯ?

ನಮ್ಮ ಬಳಿ ಹೂಡಿಕೆಗೆ ₹100 ಇದೆ ಎಂದಾದರೆ ₹10 ರಿಂದ ₹12 ಅನ್ನು ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎನ್ನುವುದು ಒಂದು ಮಾನದಂಡ. ಸಾಮಾನ್ಯವಾಗಿ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿ ಇರುವಾಗ ಬಂಗಾರದ ಬೆಲೆ ಏರಿಕೆಯ ದಿಕ್ಕಿನಲ್ಲಿರುತ್ತದೆ. ಚಿನ್ನದ ಹೂಡಿಕೆಗೆ ಹಣದುಬ್ಬರ (ಬೆಲೆ ಏರಿಕೆ) ಮೀರಿ ಲಾಭ ತಂದುಕೊಡುವ ಸಾಮರ್ಥ್ಯವಿದೆ.

ಚಿನ್ನ ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಭಾವನೆ ಜನರಲ್ಲಿದೆ. ಒಟ್ಟಾರೆಯಾಗಿ ಮಾರುಕಟ್ಟೆಯ ಏರಿಳಿತ ನಿಭಾಯಿಸಲು ಮತ್ತು ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಚಿನ್ನದ ಮೇಲೆ ಒಂದಷ್ಟು ಹೂಡಬೇಕು.

ಯಾವ ಚಿನ್ನದ ಮೇಲೆ ಹೂಡಿಕೆ ಮಾಡಬೇಕು?

ಒಡವೆ ಖರೀದಿಯಿಂದ ನಿಮಗೆ ಖುಷಿಯಾಗುತ್ತದೆ. ಮದುವೆ, ಸಮಾರಂಭ, ಶುಭ ಕಾರ್ಯದ ಸಂದರ್ಭದಲ್ಲಿ ಅದನ್ನು ತೊಟ್ಟು ಸಂಭ್ರಮಿಸಬಹುದು. ಆದರೆ, ಆಭರಣ ಚಿನ್ನ ನಿಜವಾದ ಹೂಡಿಕೆಯಾಗುವುದಿಲ್ಲ. ಏಕೆಂದರೆ, ಒಡವೆ ಚಿನ್ನ ಖರೀದಿಸಿದಾಗ ಮೇಕಿಂಗ್ ಚಾರ್ಜಸ್ಗೆ ಶೇ 15ರಿಂದ ಶೇ 30ರಷ್ಟು ಹಣ ಹೋಗುವ ಜೊತೆಗೆ ಶೇ 3ರಷ್ಟು ಜಿಎಸ್ಟಿ ಕೂಡ ಇರುತ್ತದೆ.

ಆಭರಣದ ಗುಣಮಟ್ಟ ಖಾತರಿಯು ಮತ್ತೊಂದು ತಲೆನೋವು. ಸರಿಯಾದ ಹಾಲ್ ಮಾರ್ಕ್ ಚಿನ್ನವನ್ನು ಅಂಗಡಿಯವರು ನೀಡಿದ್ದಾರಾ ಎನ್ನುವ ಆತಂಕ ನಿಮ್ಮನ್ನು ಕಾಡುತ್ತದೆ. ಅಲ್ಲದೆ ಖರೀದಿ ನಂತರ ಚಿನ್ನವನ್ನು ಸುರಕ್ಷಿತವಾಗಿ ಇಡುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಆಗ ಬ್ಯಾಂಕ್ ಲಾಕರ್ಗಾಗಿಯೂ ನೀವು ವೆಚ್ಚ ಮಾಡಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಒಡವೆ ಚಿನ್ನ ಖರೀದಿಯನ್ನು ನಿಜವಾದ ಹೂಡಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಚಿನ್ನದ ಮೇಲೆ ಹೂಡಿಕೆ ಅಂತ ಬಂದಾಗ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್ ಮತ್ತು ಸಾವರಿನ್ ಗೋಲ್ಡ್ ಬಾಂಡ್ ಉತ್ತಮ ಆಯ್ಕೆಗಳಾಗಿವೆ.

ಗೋಲ್ಡ್ ಮ್ಯೂಚುವಲ್ ಫಂಡ್ ಎಂದರೇನು?

ಚಿನ್ನ ಅಥವಾ ಚಿನ್ನಕ್ಕೆ ಸಂಬಂಧಿಸಿದ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವ ಫಂಡ್ಗಳನ್ನು ಗೋಲ್ಡ್ ಮ್ಯೂಚುವಲ್ ಫಂಡ್ ಎನ್ನುತ್ತಾರೆ. ಗೋಲ್ಡ್ ಮ್ಯೂಚುವಲ್ ಫಂಡ್ ಅನ್ನು ಪೇಪರ್ ಗೋಲ್ಡ್ ಎಂದು ಸಹ ಕರೆಯುತ್ತಾರೆ. ಏಕೆಂದರೆ, ಇಲ್ಲಿ ಹೂಡಿಕೆದಾರನಿಗೆ ಘನ ರೂಪದ ಚಿನ್ನ ನೀಡುವುದಿಲ್ಲ.

ಬದಲಿಗೆ ಚಿನ್ನದ ಯೂನಿಟ್ಗಳನ್ನು ಎಲೆಕ್ಟ್ರಾನಿಕ್ ದಾಖಲೆ ರೂಪದಲ್ಲಿ ಒದಗಿಸಲಾಗುತ್ತದೆ. ಗೋಲ್ಡ್ ಮ್ಯೂಚುವಲ್ ಫಂಡ್ಗಳು ಮೂಲತಃ ಗೋಲ್ಡ್ ಎಕ್ಸ್ಚೇಂಜ್, ಗೋಲ್ಡ್ ಮೈನಿಂಗ್, ಚಿನ್ನದ ಮಾರ್ಕೆಟಿಂಗ್ ಅಥವಾ ಚಿನ್ನದ ಉತ್ಪನ್ನಗಳನ್ನು ಮಾರಾಟ ಮಾಡುವ ನೋಂದಾಯಿತ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತವೆ. ಚಿನ್ನದ ಬೆಲೆಯ ಏರಿಕೆ ಅಥವಾ ಇಳಿಕೆಯು ಗೋಲ್ಡ್ ಮ್ಯೂಚುವಲ್ ಫಂಡ್ಗಳ ಮೇಲೆ ಪರಿಣಾಮ ಬೀರುತ್ತದೆ.

ಉತ್ತಮ ಹೂಡಿಕೆ ಏಕೆ?

ಮ್ಯೂಚುವಲ್ ಫಂಡ್ ಹೂಡಿಕೆಯ ಮಾದರಿಯಲ್ಲೇ ಗೋಲ್ಡ್ ಮ್ಯೂಚುವಲ್ ಫಂಡ್ಗಳಲ್ಲೂ ಹೂಡಿಕೆ ಸಾಧ್ಯವಿದೆ. ಕನಿಷ್ಠ ₹100 ಮೊತ್ತದಿಂದಲೂ ಗೋಲ್ಡ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಗೋಲ್ಡ್ ಮ್ಯೂಚುವಲ್ ಫಂಡ್ಗಳಲ್ಲಿ ಆಭರಣ ಚಿನ್ನದಲ್ಲಿರುವ ಮೇಕಿಂಕ್ ಚಾರ್ಜ್, ಜಿಎಸ್ಟಿ ಮುಂತಾದ ಹೆಚ್ಚುವರಿ ವೆಚ್ಚಗಳಿರುವುದಿಲ್ಲ.

ಒಂದಷ್ಟು ಎಕ್ಸ್ಪೆನ್ಸ್ ರೇಷಿಯೊ (ವೆಚ್ಚ ಅನುಪಾತ/ ಕಮಿಷನ್) ಮಾತ್ರ ಇರುತ್ತದೆ. ಅಲ್ಲದೆ ಚಿನ್ನದ ಸುರಕ್ಷತೆ, ಗುಣಮಟ್ಟದ ಬಗ್ಗೆ ಇಲ್ಲಿ ತಲೆಕೆಡಿಸಿಕೊಳ್ಳಬೇಕಿಲ್ಲ. ಹಣ ಬೇಕಾದಾಗ ನಗದೀಕರಣ ಮಾಡಿಕೊಳ್ಳುವ ಅವಕಾಶವೂ ಗೋಲ್ಡ್ ಮ್ಯೂಚುವಲ್ ಫಂಡ್ನಲ್ಲಿ ಇದೆ. ಎಲ್ಲದಕ್ಕಿಂತಲೂ ಪ್ರಮುಖವಾಗಿ ಚಿನ್ನದ ಬೆಲೆ ಏರಿಕೆಗೆ ಅನುಗುಣವಾಗಿ ಗೋಲ್ಡ್ ಫಂಡ್ನ ಮೌಲ್ಯವೂ ವೃದ್ಧಿಸುತ್ತದೆ.

ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಅಂದರೆ ಪ್ರತಿ ತಿಂಗಳು ಗೋಲ್ಡ್ ಫಂಡ್ನಲ್ಲಿ ನಿಗದಿತ ಮೊತ್ತದ ಹೂಡಿಕೆಯನ್ನು ಮಾಡುತ್ತಾ ಸಾಗಬಹುದು. ಇಲ್ಲ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತೇವೆ ಎಂದರೆ ಅದಕ್ಕೂ ಅವಕಾಶವಿದೆ. ಜೀರೊ ಕಮಿಷನ್ ಡೈರೆಕ್ಟ್ ಮ್ಯೂಚುವಲ್ ಫಂಡ್ ಆ್ಯಪ್, ಮ್ಯೂಚುವಲ್ ಫಂಡ್ ಕಂಪನಿಗಳ ವೆಬ್ಸೈಟ್, ಷೇರು ಬ್ರೋಕಿಂಗ್ ಸಂಸ್ಥೆಗಳ ಸಹಾಯದಿಂದ, ಸೆಬಿ ನೋಂದಾಯಿತ ಮ್ಯೂಚುವಲ್ ಫಂಡ್ ವಿತರಕರ ಮೂಲಕ ಗೋಲ್ಡ್ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಸಾಧ್ಯ. ಆದರೆ ಗೊತ್ತಿರಲಿ, ಜೀರೊ ಕಮಿಷನ್ ಮ್ಯೂಚುವಲ್ ಫಂಡ್ ಆ್ಯಪ್ಗಳ ಮೂಲಕ ಮತ್ತು ಮ್ಯೂಚುವಲ್ ಫಂಡ್ ಕಂಪನಿ ವೆಬ್ಸೈಟ್ ಮೂಲಕ ಹೂಡಿಕೆ ಮಾಡಿದಾಗ ಕಮಿಷನ್ (ಎಕ್ಸ್ಪೆನ್ಸ್ ರೇಷಿಯೊ) ಕಡಿಮೆ ಇರುತ್ತದೆ. ಇನ್ನಿತರ ಮಾರ್ಗಗಳಲ್ಲಿ ಹೂಡಿಕೆ ಮಾಡಿದಾಗ ಕಮಿಷನ್ (ಎಕ್ಸ್ಪೆನ್ಸ್ ರೇಷಿಯೋ) ಸ್ವಲ್ಪ ಜಾಸ್ತಿ ಇರುತ್ತದೆ.

ಕೆಲವು ಉದಾಹರಣೆಗಳು:

ಮಾರುಕಟ್ಟೆಯಲ್ಲಿ ಹತ್ತಾರು ಗೋಲ್ಡ್ ಫಂಡ್ ಆಯ್ಕೆಗಳಿವೆ. ಎಸ್ಬಿಐ ಗೋಲ್ಡ್ ಡೈರೆಕ್ಟ್ ಪ್ಲಾನ್ ಗ್ರೋಥ್, ಎಕ್ಸಿಸ್ ಗೋಲ್ಡ್ ಪ್ಲಾನ್ ಗ್ರೋಥ್, ಎಚ್ಡಿಎಫ್ಸಿ ಗೋಲ್ಡ್ ಡೈರೆಕ್ಟ್ ಪ್ಲಾನ್ ಗ್ರೋಥ್, ಕ್ವಾಂಟಂ ಗೋಲ್ಡ್ ಸೇವಿಂಗ್ಸ್ ಪ್ಲಾನ್ ಗ್ರೋಥ್ ಕೆಲ ಉದಾಹರಣೆಗಳಾಗಿವೆ.

ಸೆನ್ಸೆಕ್ಸ್ ನಿಫ್ಟಿ ಏರಿಳಿತ

ನವೆಂಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ. 79486 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.3ರಷ್ಟು ತಗ್ಗಿದೆ. 24148 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 0.64ರಷ್ಟು ಇಳಿಕೆ ದಾಖಲಿಸಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿಗೇರಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ ಮತ್ತು ನಿಫ್ಟಿ ಪುಟಿದೆದ್ದಿದ್ದವು. ಆದರೆ ನಂತರದ ಎರಡು ದಿನಗಳಲ್ಲಿ ಸೂಚ್ಯಂಕಗಳು ಗಳಿಕೆಯತ್ತ ಸಾಗಲು ಸಾಧ್ಯವಾಗಲಿಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಸಾಮಾನ್ಯ ಸಾಧನೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಸೇರಿ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 3.85ರಷ್ಟು ಕುಸಿದಿದೆ. ಮಾಧ್ಯಮ ಶೇ 3.44 ಎನರ್ಜಿ ಶೇ 3.19 ಅನಿಲ ಮತ್ತು ತೈಲ ಶೇ 2.02 ಎಫ್ಎಂಸಿಜಿ ಶೇ 1.77 ಫಾರ್ಮಾ ಶೇ 1.11 ಲೋಹ ಶೇ 0.81 ಬ್ಯಾಂಕ್ ಶೇ 0.48 ಆಟೊ ಶೇ 0.22ರಷ್ಟು ಇಳಿಕೆಯಾಗಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.09ರಷ್ಟು ಜಿಗಿದಿದ್ದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.02ರಷ್ಟು ಏರಿಕೆ ಕಂಡಿದೆ.

ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಟ್ರೆಂಟ್ ಶೇ 11.71 ಕೋಲ್ ಇಂಡಿಯಾ ಶೇ 6.71 ಏಷ್ಯನ್ ಪೇಂಟ್ಸ್ ಶೇ 5.81 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 5.8 ಗ್ರಾಸಿಮ್ ಶೇ 5.62 ಹೀರೊ ಮೋಟೊಕಾರ್ಪ್ ಶೇ 5.12 ಟಾಟಾ ಮೋಟರ್ಸ್ ಶೇ 4.49 ಶ್ರೀರಾಮ್ ಫೈನಾನ್ಸ್ ಶೇ 4.47 ರಿಲಯನ್ಸ್ ಇಂಡಸ್ಟ್ರೀಸ್ ಶೇ 4.11 ಎಸ್ಬಿಐ ಲೈಫ್ ಇನ್ಶೂರೆನ್ಸ್ ಶೇ 3.87 ಒಎನ್ಜಿಸಿ ಶೇ 3.49 ಮತ್ತು ಎನ್ಟಿಪಿಸಿ ಶೇ 3.35ರಷ್ಟು ಕುಸಿದಿವೆ. ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 5.76 ಅಪೋಲೊ ಹಾಸ್ಪಿಟಲ್ಸ್ ಶೇ 5.22 ಟೆಕ್ ಮಹೀಂದ್ರ ಶೇ 4.96 ಎಚ್ಸಿಎಲ್ ಟೆಕ್ನಾಲಜೀಸ್ ಶೇ 4.14 ಟಿಸಿಎಸ್ ಶೇ 4 ಇನ್ಫೊಸಿಸ್ ಶೇ 3.67 ಜೆಎಸ್ಡಬ್ಲ್ಯು ಸ್ಟೀಲ್ ಶೇ 3.28 ವಿಪ್ರೊ ಶೇ 3.21 ಭಾರತ್ ಎಲೆಕ್ಟ್ರಾನಿಕ್ಸ್ ಶೇ 3.06 ಎಸ್ಬಿಐ ಶೇ 2.7 ಸಿಪ್ಲಾ ಶೇ 2.09 ಮತ್ತು ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 1.5 ರಷ್ಟು ಜಿಗಿದಿವೆ.

ಮುನ್ನೋಟ: ಈ ವಾರ ಒಎನ್ಜಿಸಿ ಹಿಂಡಾಲ್ಕೋ ಬ್ರಿಟಾನಿಯಾ ಎನ್ಎಂಡಿಸಿ ಬಿಇಎಂಎಲ್ ಗ್ರಾಫೈಟ್ ಇಂಡಿಯಾ ಫಿನೋಲೆಕ್ಸ್ ಕೇಬಲ್ಸ್ ಬಾಷ್ ಐಷರ್ ಕಲ್ಯಾಣ ಜ್ಯುವೆಲರ್ಸ್ ದೀಪಕ್ ನೈಟ್ರೇಟ್ ಅಪೋಲೊ ಟೈಯರ್ ಎಚ್ಎಎಲ್ ಹೀರೊ ಮೋಟೊಕಾರ್ಪ್ ಮುತ್ತೂಟ್ ಫೈನಾನ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತದ ಹಾದಿ ಮುಂದುವರಿಯಲಿದೆ. ಉಳಿದಂತೆ ಜಾಗತಿಕ ಹಾಗೂ ದೇಶೀಯ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.