ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 1,192 ಅಂಶಗಳಷ್ಟು ಕುಸಿದಿದ್ದು, ಈಕ್ವಿಟಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.

ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳ ಮಾರಾಟದಲ್ಲಿ ತೊಡಗಿರುವುದರಿಂದ ಮಾರುಕಟ್ಟೆ ದಿಢೀರ್ ಕುಸಿತ ದಾಖಲಿಸಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತ್ತು ಫೆಡರಲ್ ಬ್ಯಾಂಕ್ ಈ ವಾರಾಂತ್ಯಕ್ಕೆ ಬಡ್ಡಿದರ ಪರಿಷ್ಕರಣೆಗೆ ಮುಂದಾಗಿರುವ ಹಿನ್ನೆಲೆ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿದ್ದಾರೆ.

ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಂಕವು 1,192 ಅಂಶಗಳಷ್ಟು ಕುಸಿದು 78,532ರಲ್ಲಿ ವಹಿವಾಟು ಆರಂಭಿಸಿತು.

ಬಿಎಸ್ಇ ಗುಚ್ಚದ ಷೇರುಗಳ ಮೌಲ್ಯ ₹7,37,744 ಕೋಟಿಗಳಿಂದ 4,40,72,863.01 ಕೋಟಿಗೆ (ಯುಎಸ್ಡಿ 5.24 ಟ್ರಿಲಿಯನ್) ಕುಸಿದಿವೆ.

ಸೆನ್ಸೆಕ್ಸ್ನ ಸನ್ ಫಾರ್ಮಾ, ಎನ್ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಪವರ್ ಗ್ರಿಡ್, ಟಾಟಾ ಮೋಟರ್ಸ್, ಟೈಟನ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.

ಮಹೀಂದ್ರ ಅಂಡ್ ಮಹೀಂದ್ರ, ಟೆಕ್ ಮಹೀಂದ್ರ, ಎಚ್ಸಿಎಲ್ ಟೆಕ್ನಾಲಜೀಸ್ ಮತ್ತು ಇಂಡಸ್ಲ್ಯಾಂಡ್ ಬ್ಯಾಂಕ್ ಷೇರುಗಳು ಲಾಭ ಗಳಿಸಿವೆ.

ಶುಕ್ರವಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್ಐಐ) ₹211 ಕೋಟಿಯಷ್ಟು ಹೂಡಿಕೆ ಹಿಂಪಡೆದಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಪೇಟೆಯಿಂದ ₹94,000 ಕೋಟಿ ( 11.2 ಬಿಲಿಯನ್ ಡಾಲರ್) ಹೂಡಿಕೆಯನ್ನು ಹಿಂಪಡೆದಿದ್ದಾರೆ.

ಏಷ್ಯಾ ಪೇಟೆಗಳ ಪೈಕಿ ಸೋಲ್, ಶಾಂಘೈ, ಹಾಂಗ್ಕಾಂಗ್ ಏರಿಕೆ ದಾಖಲಿಸಿವೆ. ಶುಕ್ರವಾರ ಅಮೆರಿಕ ಷೇರುಪೇಟೆಯು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.