ನವದೆಹಲಿ: ದೇಶದ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಎಚ್ಡಿಎಫ್ಸಿ ಲಿಮಿಟೆಡ್, ಅತಿ ದೊಡ್ಡ ಖಾಸಗಿ ಬ್ಯಾಂಕ್ 'ಎಚ್ಡಿಎಫ್ಸಿ ಬ್ಯಾಂಕ್'ನಲ್ಲಿ ವಿಲೀನವಾಗಲಿದೆ. ಈ ಕುರಿತು ಪ್ರಕಟಣೆ ಹೊರ ಬೀಳುತ್ತಿದ್ದಂತೆ ಎಚ್ಡಿಎಫ್ಸಿ ಲಿಮಿಟೆಡ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಎರಡರ ಷೇರು ಬೆಲೆ ಶೇಕಡ 10ರಷ್ಟು ಏರಿಕೆ ದಾಖಲಿಸಿತು.

ಎಚ್ಡಿಎಫ್ಸಿ ಲಿಮಿಟೆಡ್ ಪ್ರತಿ ಷೇರು ಬೆಲೆ ₹2,636 ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಷೇರು ಬೆಲೆ ₹1,630 ತಲುಪಿದೆ. ವಿಲೀನ ಪ್ರಕ್ರಿಯ ಬಳಿಕ 25 ಎಚ್ಡಿಎಫ್ಸಿ ಲಿಮಿಟೆಡ್ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಎಚ್ಡಿಎಫ್ಸಿ ಬ್ಯಾಂಕ್ನ 42 ಷೇರುಗಳು ಜಮೆಯಾಗಲಿವೆ.

ಪ್ರಸ್ತುತ ಎಚ್ಡಿಎಫ್ಸಿ ಲಿಮಿಟೆಡ್ನ ಒಟ್ಟು ಆಸ್ತಿ ಮೌಲ್ಯ ₹6.23 ಲಕ್ಷ ಕೋಟಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ನ ಆಸ್ತಿ ಮೌಲ್ಯ ₹19.38 ಲಕ್ಷ ಕೋಟಿ ಇದೆ. ಎಚ್ಡಿಎಫ್ಸಿ ಬ್ಯಾಂಕ್ 3,000ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು 6,342 ಶಾಖೆಗಳನ್ನು ಹೊಂದಿದ್ದು, 6.8 ಕೋಟಿ ಗ್ರಾಹಕರನ್ನು ಒಳಗೊಂಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ–ವರ್ಷದಲ್ಲಿ ಕರ್ನಾಟಕಕ್ಕೆ 1,500 ವೃತ್ತಿಪರರ ನೇಮಕ: ಎಚ್ಡಿಎಫ್ಸಿ ಬ್ಯಾಂಕ್

ವಿಲೀನ ಪ್ರಕ್ರಿಯೆಯು 2023–2024ನೇ ಹಣಕಾಸು ವರ್ಷದ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.