ದೇಶದ ಅರ್ಥ ವ್ಯವಸ್ಥೆಯನ್ನು ಒಂದು ಚೌಕಟ್ಟಿನಲ್ಲಿ ಇರಿಸಿರುವುದು ಬ್ಯಾಂಕಿಂಗ್ ವಲಯ. ವಿಸ್ತೃತವಾದ ಹಾಗೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆಯನ್ನು ಸಾಧ್ಯವಾಗಿಸಿರುವುದು ಕೂಡ ಬ್ಯಾಂಕಿಂಗ್ ವಲಯವೇ. ದೇಶದಲ್ಲಿನ ಹಣಕಾಸಿನ ಕಂದಕವನ್ನು ಇಲ್ಲವಾಗಿಸುವುದು ಬ್ಯಾಂಕಿಂಗ್ ವಲಯದ ಮುಖ್ಯ ಗುರಿಗಳಲ್ಲಿ ಒಂದು.

ಹತ್ತು ಹಲವು ಸೇವೆಗಳ ಜೊತೆಯಲ್ಲೇ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಹಣವನ್ನು ಸುರಕ್ಷಿತವಾಗಿ ಇರಿಸಲು, ಹಣವನ್ನು ಹೂಡಿಕೆಯಾಗಿ ತೊಡಗಿಸಲು ಅವಕಾಶ ಕಲ್ಪಿಸುತ್ತವೆ. ಗ್ರಾಹಕರಿಂದ ಠೇವಣಿ ರೂಪದಲ್ಲಿ ಸಿಗುವ ಹಣವನ್ನು ಬ್ಯಾಂಕ್ಗಳು, ಹಣದ ಅಗತ್ಯವಿರುವ ಕಂಪನಿಗಳಿಗೆ, ವ್ಯಕ್ತಿಗಳಿಗೆ ಸಾಲದ ರೂಪದಲ್ಲಿ ನೀಡುತ್ತವೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯದ ಬೆಳವಣಿಗೆ ಪ್ರಮಾಣವು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣಕ್ಕಿಂತ ಹೆಚ್ಚು ವೇಗವಾಗಿದೆ. ದೇಶದ ಅರ್ಥ ವ್ಯವಸ್ಥೆಯು ಕೋವಿಡ್ ನಂತರದಲ್ಲಿ ಮತ್ತೆ ಚೇತರಿಕೆ ಕಾಣುತ್ತಿರುವ ಹೊತ್ತಿನಲ್ಲಿ ಬ್ಯಾಂಕಿಂಗ್ ವಲಯವು ದೇಶದ ಬೆಳವಣಿಗೆಯ ಕಥನದ ಅವಿಭಾಜ್ಯ ಅಂಗವಾಗಿ ತನ್ನ ಪಾತ್ರ ನಿಭಾಯಿಸುತ್ತದೆ. ದೇಶದ ಅರ್ಥ ವ್ಯವಸ್ಥೆ ಬೆಳವಣಿಗೆ ಕಂಡಂತೆಲ್ಲ ದೇಶದ ಬ್ಯಾಂಕಿಂಗ್ ವಲಯ ಕೂಡ ಬೆಳವಣಿಗೆ ಕಾಣುತ್ತದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಹಾಗೂ ಎನ್ಪಿಎ ಬಿಕ್ಕಟ್ಟಿನ ನಂತರದ ಸಂಕಷ್ಟಗಳಿಂದ ದೇಶದ ಬ್ಯಾಂಕಿಂಗ್ ವಲಯವು, ಅದರಲ್ಲೂ ಮುಖ್ಯವಾಗಿ ಖಾಸಗಿ ಬ್ಯಾಂಕ್ ವಲಯವು, ಹೊರಬಂದಿದೆ. ಖಾಸಗಿ ಬ್ಯಾಂಕ್ಗಳು ತಮ್ಮ ವಹಿವಾಟು ಬೆಳೆಸಲು ಈಕ್ವಿಟಿ ಬಂಡವಾಳವನ್ನು ಸುಲಭವಾಗಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಇದರ ಪರಿಣಾಮವಾಗಿ, ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ದೇಶದ ಬ್ಯಾಂಕಿಂಗ್ ವಲಯದಲ್ಲಿ ಖಾಸಗಿ ಬ್ಯಾಂಕ್ಗಳ ಪಾಲು ಶೇಕಡ 10ರಷ್ಟು ಇದ್ದಿದ್ದು ಈಗ ಶೇಕಡ 30ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಬೆಳೆದು ನಿಂತಿದೆ.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಖಾಸಗಿ ವಲಯದ ಬ್ಯಾಂಕ್ಗಳ ಆಸ್ತಿಯ ಗುಣಮಟ್ಟವು ಸುಧಾರಿಸಿದೆ. ಅವುಗಳಲ್ಲಿನ ಎನ್ಪಿಎ ಪ್ರಮಾಣ ಕೂಡ ಕಡಿಮೆ ಆಗುತ್ತ ಬಂದಿದೆ. ಸಾಲ ನೀಡುವ ಪ್ರಮಾಣ ಹೆಚ್ಚಾಗುತ್ತಿರುವ ಪರಿಣಾಮವಾಗಿ, ಕಾರ್ಪೊರೇಟ್ ವಲಯದ ಲಾಭದ ಪ್ರಮಾಣ ಜಾಸ್ತಿ ಆಗುತ್ತಿರುವ ಪರಿಣಾಮವಾಗಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಖಾಸಗಿ ವಲಯದ ಬ್ಯಾಂಕ್ಗಳು ಒಳ್ಳೆಯ ಆಯ್ಕೆಯಾಗಿ ಹೊರಹೊಮ್ಮಿವೆ.

ಹೂಡಿಕೆಯ ವಿಚಾರಕ್ಕೆ ಬಂದರೆ, ಷೇರುಗಳ ಆಯ್ಕೆ ಬಹಳ ಮುಖ್ಯವಾಗುತ್ತದೆ. ಈ ಮೊದಲೇ ಹೇಳಿರುವಂತೆ ಬ್ಯಾಂಕಿಂಗ್ ವಲಯವು ಬೆಳವಣಿಗೆಯ ಹಾದಿಯಲ್ಲಿದೆ ಹಾಗೂ ಖಾಸಗಿ ವಲಯದ ಬ್ಯಾಂಕ್ಗಳು ಹೆಚ್ಚು ಆಕರ್ಷಕವಾಗಿವೆ. ಖಾಸಗಿ ವಲಯದ ಬ್ಯಾಂಕ್ಗಳ ಪೈಕಿ ಅತ್ಯುತ್ತಮವಾದ ಬ್ಯಾಂಕ್ಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಸುಲಭದ ಕೆಲಸ ಅಲ್ಲ. ಹೀಗಾಗಿ, ನಿಫ್ಟಿ ಪ್ರೈವೇಟ್ ಬ್ಯಾಂಕ್ ಇಟಿಎಫ್ ಮೂಲಕ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾಗಬಹುದು.

ಖಾಸಗಿ ವಲಯದ ಕೆಲವು ಬ್ಯಾಂಕ್ಗಳಲ್ಲಿ ಹೂಡಿಕೆಗಾಗಿ ರಾಷ್ಟ್ರೀಯ ಷೇರುಪೇಟೆಯು (ಎನ್ಎಸ್ಇ) ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕ ರೂಪಿಸಿದೆ. ಖಾಸಗಿ ವಲಯದ ಬ್ಯಾಂಕ್ಗಳ ಷೇರುಗಳ ಏರಿಳಿತಗಳನ್ನು ಇದು ಪ್ರತಿಬಿಂಬಿಸುತ್ತದೆ. ಐಸಿಐಸಿಐ ಬ್ಯಾಂಕ್, ಬಂಧನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್ ಈ ಸೂಚ್ಯಂಕದಲ್ಲಿವೆ. ಈ ಸೂಚ್ಯಂಕವನ್ನು ಆಧರಿಸಿರುವ ಇಟಿಎಫ್ಗಳ ಮೂಲಕ ಹೂಡಿಕೆ ಮಾಡಿ, ಸಾಮಾನ್ಯ ಹೂಡಿಕೆದಾರರು ಪ್ರಯೋಜನ ಪಡೆಯಬಹುದು.

ಈ ಇಟಿಎಫ್ಗಳು ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕವನ್ನು ಅನುಕರಿಸುತ್ತವೆ. ಈ ಸೂಚ್ಯಂಕದಲ್ಲಿ ಯಾವೆಲ್ಲ ಬ್ಯಾಂಕ್ಗಳು ಇವೆಯೋ, ಸೂಚ್ಯಂಕದಲ್ಲಿ ಈ ಬ್ಯಾಂಕ್ಗಳ ಷೇರುಗಳಿಗೆ ಎಷ್ಟು ಪ್ರಾಧಾನ್ಯ ಇದೆಯೋ ಅಷ್ಟೇ ಪ್ರಾಧಾನ್ಯವನ್ನು ಇಟಿಎಫ್ಗಳ ಹೂಡಿಕೆಯಲ್ಲಿಯೂ ಇರುತ್ತದೆ. ಈ ಹೂಡಿಕೆಯಿಂದ ಹಲವು ಪ್ರಯೋಜನಗಳು ಹೂಡಿಕೆದಾರರಿಗೆ ಇವೆ.

* ದೇಶದ ಬ್ಯಾಂಕಿಂಗ್ ವಲಯದಲ್ಲಿ ಒಳ್ಳೆಯ ಸಾಧನೆ ತೋರುತ್ತಿರುವ ಕೆಲವು ಖಾಸಗಿ ಬ್ಯಾಂಕ್ಗಳು ದೇಶದಲ್ಲಿನ ಬೆಳವಣಿಗೆಯ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಿದಾಗ, ಬ್ಯಾಂಕ್ಗಳ ಬೆಳವಣಿಗೆಯಿಂದ ಸಿಗುವ ಲಾಭವು ಹೂಡಿಕೆದಾರನಿಗೂ ದೊರೆಯುತ್ತದೆ.

* ಇಟಿಎಫ್ ಮೂಲಕ ಹೂಡಿಕೆ ಮಾಡುವಾಗ ಷೇರು ಆಯ್ಕೆ ಮಾಡುವುದು ಹೇಗೆ ಎಂಬ ಚಿಂತೆ ಇರುವುದಿಲ್ಲ. ವಾಸ್ತವದಲ್ಲಿ, ಹೂಡಿಕೆ ಮಾಡುವಾಗ ಇರುವ ಅತಿದೊಡ್ಡ ಸವಾಲು ಒಳ್ಳೆಯ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದು. ಒಳ್ಳೆಯ ಷೇರುಗಳ ಆಯ್ಕೆಗೆ ಹೂಡಿಕೆದಾರರು ಬಹಳ ವ್ಯಾಪಕವಾದ ಅಧ್ಯಯನ ನಡೆಸಬೇಕಾಗುತ್ತದೆ. ಆದರೆ, ಈ ಇಟಿಎಫ್, ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕವನ್ನು ಅನುಕರಣೆ ಮಾಡುವ ಕಾರಣ ಷೇರುಗಳ ಆಯ್ಕೆಯ ತಲೆಬಿಸಿ ಹೂಡಿಕೆದಾರರಿಗೆ ಇರುವುದಿಲ್ಲ.

* ಇಟಿಎಫ್ ಮೂಲಕ ಮಾಡುವ ಹೂಡಿಕೆಗಳಿಗೆ ಆಗುವ ವೆಚ್ಚವು ಬಹಳ ಕಡಿಮೆ. ವಹಿವಾಟು ಶುಲ್ಕ ಮತ್ತು ನಿಧಿ ನಿರ್ವಹಣಾ ಶುಲ್ಕ ಇಲ್ಲಿ ಬಹಳ ಕಡಿಮೆ ಇರುತ್ತದೆ.

ಒಟ್ಟಿನಲ್ಲಿ ಹೇಳಬೇಕೆಂದರೆ, ದೇಶದ ಬ್ಯಾಂಕಿಂಗ್ ವಲಯದಲ್ಲಿ ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳಿಗೆ ನಿಫ್ಟಿ ಪ್ರೈವೇಟ್ ಬ್ಯಾಂಕ್ ಇಟಿಎಫ್ ಪರಿಗಣನೆಗೆ ಯೋಗ್ಯವಾದ ಆಯ್ಕೆ.

ಲೇಖಕ ಐಸಿಐಸಿಐ ಪ್ರುಡೆನ್ಷಿಯಲ್ ಎಎಂಸಿ ಕಂಪನಿ ಉತ್ಪನ್ನ ಅಭಿವೃದ್ಧಿ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.