ಮುಂಬೈ: ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ 14 ತಿಂಗಳ ಗರಿಷ್ಠ ಮಟ್ಟಕ್ಕೆ(6.21) ತಲುಪಿರುವುದು ಮತ್ತು ನಿರಂತರ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವುದರಿಂದ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ 1ಕ್ಕಿಂತಲೂ ಅಧಿಕ ಕುಸಿತ ಕಂಡಿವೆ.

ತ್ರೈಮಾಸಿಕ ಆದಾಯ ಕುಸಿತದ ಹಿನ್ನೆಲೆ ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ಕುಸಿತ ಕಂಡರೆ, ಅಮೆರಿಕ ಮತ್ತು ಏಷ್ಯಾ ಷೇರುಪೇಟೆಗಳ ದುರ್ಬಲ ಟ್ರೆಂಡ್ ಸಹ ಪರಿಣಾಮ ಬೀರಿದೆ.

ಬಿಎಸ್ಇ ಸೆನ್ಸೆಕ್ಸ್ 984.23 ಅಂಶಗಳಷ್ಟು ಕುಸಿದು 77,690ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನಲ್ಲಿ 77,533 ಅಂಶಗಳವರೆಗೆ ಕುಸಿತ ಕಂಡಿತ್ತು.

ಸತತ 5ನೇ ದಿನವೂ ಕುಸಿತ ದಾಖಲಿಸಿದ ನಿಫ್ಟಿ 324.40 ಅಂಶಗಳಷ್ಟು ಕುಸಿದು 23,559ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

30 ಷೇರುಗಳ ಸೆನ್ಸೆಕ್ಸ್ ಗುಚ್ಛದ ಮಹೀಂದ್ರ ಅಂಡ್ ಮಹೀಂದ್ರ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಅತಿ ಹೆಚ್ಚು ನಷ್ಟ ಕಂಡಿವೆ.

ಟಾಟಾ ಮೋಟಾರ್ಸ್, ಎನ್ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಏಷ್ಯನ್ ಪೇಂಟ್ಸ್ ಮತ್ತು ಇನ್ಫೋಸಿಸ್ ಲಾಭ ಗಳಿಸಿವೆ.

ಏಷ್ಯಾ ಷೇರುಪೇಟೆಗಳ ಪೈಕಿ ಸೋಲ್, ಟೋಕಿಯೊ, ಹಾಂಗ್ಕಾಂಗ್ ಷೇರುಪೇಟೆಗಳು ಕುಸಿತ ದಾಖಲಿಸಿದರೆ, ಶಾಂಘೈ ಷೇರುಪೇಟೆ ಏರಿಕೆ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.