ಜಗತ್ತಿನ ಆರ್ಥಿಕ ವಿದ್ಯಮಾನದ ಬಗ್ಗೆ ಆಸಕ್ತಿ ಹೊಂದಿದ ವರೆಲ್ಲ ಭಾನುವಾರ (ಜುಲೈ 5) ಗ್ರೀಸ್ನ ಜನಮತ ಸಂಗ್ರಹವನ್ನು ಆಸಕ್ತಿಯಿಂದ ಅವಲೋಕಿಸುತ್ತಿದ್ದರು.ಆರ್ಥಿಕವಾಗಿ ಬಹುತೇಕ ದಿವಾಳಿಯಾಗಿರುವ ಗ್ರೀಸ್ ದೇಶಕ್ಕೆ ಮತ್ತಷ್ಟು ಸಾಲ ನೀಡಲು ಸಾಲಗಾರರು ವಿಧಿಸಿ ರುವ ಮಿತವ್ಯಯದ ಷರತ್ತುಗಳನ್ನು ಅಲ್ಲಿನ ಜನ ಬೆಂಬಲಿ ಸುತ್ತಾರೋ ಅಥವಾ ತಮ್ಮ ನಾಯಕರು ಬಯಸಿದಂತೆ ಮತ್ತಷ್ಟು ಮಿತವ್ಯಯದ ಕ್ರಮಗಳು ಬೇಡ ಎಂದು ಮತ ಹಾಕುತ್ತಾರೋ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.

ಗ್ರೀಸ್ ಆರ್ಥಿಕ ಸಂಕಷ್ಟದಲ್ಲಿರುವ ವಿಚಾರ ಕಳೆದ ನಾಲ್ಕು ವರ್ಷಗಳಿಂದ ಆಗಾಗ ಮಾಧ್ಯಮಗಳಲ್ಲಿ ವರದಿ ಯಾಗುತ್ತಿದ್ದರೂ ಜೂನ್ 29ರಂದು ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್ ದೇಶದ ಬ್ಯಾಂಕ್ಗಳಿಗೆ ಒಂದು ವಾರ ರಜೆ ಘೋಷಿಸಿದಾಗ ಯುರೋಪ್, ಏಷ್ಯಾ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಯಿತು. ಯುರೊ ಬೆಲೆ ಏರುಪೇರಾಗಿ ಷೇರು ಸೂಚ್ಯಂಕಗಳು ಕುಸಿದವು. ಭಾರತದ ಮಾರುಕಟ್ಟೆಯ ಮೇಲೂ ಅದರ ಪರಿಣಾಮವಾಯಿತು.

ಜೂನ್ 28ರಂದು ಐರೋಪ್ಯ ಒಕ್ಕೂಟದ ನಾಯಕರು ಹಾಗೂ ಗ್ರೀಸ್ ಸರ್ಕಾರದ ನಡುವಣ ಮಾತುಕತೆ ಮುರಿದುಬಿದ್ದ ಪರಿಣಾಮ ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗಿತ್ತು.48 ಗಂಟೆಯೊಳಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಗ್ರೀಸ್, 160 ಕೋಟಿ ಯುರೊ (₹11,277 ಕೋಟಿ) ಸಾಲವನ್ನು ಮರಳಿಸಬೇಕಿತ್ತು. ಯಾವ ಕಾರಣಕ್ಕೂ ಸಾಲ ಮರಳಿಸಲು ಸಾಧ್ಯವಿಲ್ಲ. ಅಷ್ಟೊಂದು ಹಣ ತನ್ನ ಬಳಿ ಇಲ್ಲ. ಐರೋಪ್ಯ ಸೆಂಟ್ರಲ್ ಬ್ಯಾಂಕ್ ಹಾಗೂ ಯುರೋಪಿನ ಇತರ ದೇಶಗಳು ಮತ್ತಷ್ಟು ಸಾಲ ನೀಡಿದಲ್ಲಿ ಮಾತ್ರ ಸಾಲ ಮರುಪಾವತಿ ಸಾಧ್ಯ ಎಂದು ಅಲ್ಲಿನ ಸರ್ಕಾರ ಹೇಳಿತು.

ಗ್ರೀಸ್ಗೆ ಸಾಲದ ಪ್ಯಾಕೇಜ್ ನೀಡಬೇಕಾದರೆ ಅದು ಕಟ್ಟುನಿಟ್ಟಾದ ಆರ್ಥಿಕ ಕ್ರಮ ಕೈಗೊಳ್ಳಬೇಕು. ತೆರಿಗೆ ಸುಧಾರಣೆ ಹಾಗೂ ಮಿತವ್ಯಯದ ಕ್ರಮಗಳನ್ನು ಅನುಸರಿಸಬೇಕು ಎಂದು ಸಾಲಗಾರರು ಷರತ್ತು ಒಡ್ಡಿದರು. ಈ ಒತ್ತಡವನ್ನು ತಡೆದುಕೊಳ್ಳಲೋ ಎಂಬಂತೆ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್ ಜನರ ಮುಂದೆ ಹೋದರು. ಜನಮತ ಸಂಗ್ರಹವನ್ನು ಘೋಷಿಸಿದರು.

ಅಷ್ಟಕ್ಕೂ ಗ್ರೀಸ್ ಇಂತಹ ಸಾಲದ ಸುಳಿಗೆ ಸಿಲುಕಲು ಕಾರಣವೇನು?
ಯುರೊ ವ್ಯವಸ್ಥೆಯಲ್ಲಿ ಇರುವ ದೋಷ, ಅರ್ಥ ವ್ಯವಸ್ಥೆಯನ್ನು ಹಳಿಗೆ ತರಲು ವಿಫಲವಾದ ಗ್ರೀಸ್ನ ಸರ್ಕಾರಗಳು, ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ರುವ ಭ್ರಷ್ಟಾಚಾರ, ಗ್ರೀಸ್ ಸಂಸ್ಕೃತಿ, ಹೂಡಿಕೆ ಕೊರತೆ ಎಲ್ಲವೂ ಗ್ರೀಸ್ ಅನ್ನು ಈ ಸ್ಥಿತಿಗೆ ದೂಡಿವೆ.2001ರಲ್ಲಿ ಯುರೊ ವಲಯಕ್ಕೆ ಸೇರುವಾಗಲೇ ಗ್ರೀಸ್ನಲ್ಲಿ ಹಣದುಬ್ಬರವಿತ್ತು. ಯುರೊವಲಯಕ್ಕೆ ಸೇರಿದ ತಕ್ಷಣ ಭಾರಿ ಹಣ ಹರಿದುಬಂತು.

ಕಳೆದ ದಶಕದಲ್ಲಿ ಗ್ರೀಸ್ನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಸೌಲಭ್ಯ ವಿಸ್ತರಣೆಯ ಗುಂಗು ಹಿಡಿದಿತ್ತು. ಬ್ಯಾಂಕ್ಗಳು ಎಗ್ಗಿಲ್ಲದಂತೆ ಸಾಲ ನೀಡಿದವು. ಸಾಲ ವಾಪಸಾಗದಾಗ ಬ್ಯಾಂಕ್ಗಳು ದಿವಾಳಿಯಾಗದಂತೆ ತಡೆಯಲು ಗ್ರೀಸ್ ಸರ್ಕಾರ ಮತ್ತಷ್ಟು ಸಾಲ ಪಡೆಯಿತು.ಜಾಗತಿಕ ಮಾರುಕಟ್ಟೆಯಲ್ಲಿ ಗ್ರೀಸ್ ವಿಶ್ವಾಸಾರ್ಹತೆ ಕುಸಿದಿದ್ದರಿಂದ ವಿದೇಶಿ ಹೂಡಿಕೆಗಳು ಕಡಿಮೆಯಾದವು. ಹಾಸಿಗೆಗಿಂತ ಉದ್ದಕ್ಕೆ ಕಾಲು ಚಾಚಬಾರದು ಎಂಬ ನಿಯಮವನ್ನು ಮರೆತ ಗ್ರೀಸ್ ಸರ್ಕಾರ ಸಾರ್ವಜನಿಕ ವಲಯದಲ್ಲಿ ಖರ್ಚು ಕಡಿಮೆ ಮಾಡಲಿಲ್ಲ. ಕಳೆದ ಒಂದು ದಶಕದಲ್ಲಿ ಅಲ್ಲಿನ ಸರ್ಕಾರಿ ನೌಕರರ ಸಂಬಳ ಹೆಚ್ಚುಕಡಿಮೆ ದುಪ್ಪಟ್ಟಾಗಿದೆ.

ಇಡೀ ಜಗತ್ತಿನಲ್ಲಿ ಅತಿ ಉದಾರವಾದ ಪಿಂಚಣಿ ವ್ಯವಸ್ಥೆ ಗ್ರೀಸ್ನಲ್ಲಿ ಇದೆ. ಅಲ್ಲಿನ ಪಿಂಚಣಿದಾರರು ನಿವೃತ್ತಿಗಿಂತ ಮುಂಚೆ ಇದ್ದ ಸಂಬಳದ ಶೇ 92ರಷ್ಟು ಪಿಂಚಣಿ ಪಡೆಯುತ್ತಾರೆ. ಯುರೋಪ್ನಲ್ಲೇ ಅತಿ ಹೆಚ್ಚು ವೃದ್ಧರಿರುವ ದೇಶ ಗ್ರೀಸ್.2004ರ ಒಲಿಂಪಿಕ್ಸ್ ಗ್ರೀಸ್ನಲ್ಲಿ ನಡೆಯಿತು. ಅಂದಾಜು ವೆಚ್ಚದ ದುಪ್ಪಟ್ಟು ಹಣ ಆಗ ಖರ್ಚಾಯಿತು.ಸರ್ಕಾರಿ ವಲಯದ ಬಹುತೇಕ ಕಂಪೆನಿಗಳು ನಷ್ಟದಲ್ಲಿದ್ದು, ಮಾರುಕಟ್ಟೆಯಲ್ಲಿ ಯಾವ ಮೌಲ್ಯವನ್ನೂ ಹೊಂದಿಲ್ಲ. ಉದಾಹರಣೆಗೆ ಗ್ರೀಸ್ನ ರೈಲ್ವೆ ಇಲಾಖೆ ಬಹುತೇಕ ಖಾಲಿ ರೈಲುಗಳನ್ನು ಓಡಿಸುತ್ತಿದೆ. ನೌಕರರ ಸಂಬಳಕ್ಕೆ ಬಹುಪಾಲು ಹಣ ಹೋಗುತ್ತಿದೆ.

ಗ್ರೀಸ್ನಲ್ಲಿರುವ ಅತಿ ಭ್ರಷ್ಟಾಚಾರ, ಗ್ರೀಸ್ ಜನರ ಸೋಮಾರಿತನ, ತೆರಿಗೆಗಳ್ಳತನ ಎಲ್ಲವೂ ಗ್ರೀಸ್ ಆರ್ಥಿಕತೆಯ ಹಳಿ ತಪ್ಪಿಸಿವೆ.ಟ್ರಾನ್ಪರೆನ್ಸಿ ಇಂಟರ್ನ್ಯಾಷನಲ್ ಪ್ರತಿ ವರ್ಷ ಗ್ರೀಸ್ ಅನ್ನು ಅತ್ಯಂತ ಭ್ರಷ್ಟ ದೇಶಗಳ ಸಾಲಿನಲ್ಲಿ ಪಟ್ಟಿ ಮಾಡುತ್ತದೆ. ಕೇವಲ ಯುರೋಪ್ನಲ್ಲಷ್ಟೇ ಅಲ್ಲ, ಜಗತ್ತಿನ ಅತಿ ಭ್ರಷ್ಟ ದೇಶಗಳ ಪೈಕಿ ಗ್ರೀಸ್ ಸಹ ಒಂದಾಗಿದೆ. ಗ್ರೀಕರನ್ನು ಸೋಮಾರಿಗಳು, ದಕ್ಷತೆ ಇಲ್ಲದವರು ಎಂದು ಪರಿಗಣಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಯುರೋಪ್ನಲ್ಲಿ ಅತಿ ದೀರ್ಘ ಕೆಲಸದ ಅವಧಿಯನ್ನು ಗ್ರೀಸ್ ಹೊಂದಿದೆ. ಆದರೆ, ಬಹುತೇಕ ಗ್ರೀಕರು ಕಚೇರಿಗಳಲ್ಲಿ ಕೆಲಸ ಮಾಡುವುದೇ ಇಲ್ಲ.

ಸಂಚಾರ ನಿಯಮಗಳ ಉಲ್ಲಂಘನೆ ಇರಲಿ, ತೆರಿಗೆ ತಪ್ಪಿಸುವುದೇ ಆಗಲಿ ಕಾನೂನು ಉಲ್ಲಂಘಿಸುವಲ್ಲಿ ಗ್ರೀಸ್ ಜನ ಸಿದ್ಧಹಸ್ತರು.ಗ್ರೀಸ್ನ ಸಿರಿವಂತರು ಹಾಗೂ ಮಧ್ಯವರ್ಗದ ಜನ ತೆರಿಗೆ ಹಣ ಕಟ್ಟದೇ , ಸ್ವಿಟ್ಜರ್ಲೆಂಡ್, ಅಮೆರಿಕ, ಸಿಂಗಪುರ ಸೇರಿದಂತೆ ಇತರ ದೇಶಗಳ ಬ್ಯಾಂಕ್ಗಳಲ್ಲಿ ಭಾರಿ ಮೊತ್ತದ ಕಪ್ಪುಹಣವನ್ನು ಠೇವಣಿಯಾಗಿ ಇಟ್ಟಿದ್ದಾರೆ.‘ನನಗೆ ನನ್ನ ಬಾಸ್ ಸಂಬಳ ನೀಡದಿದ್ದಲ್ಲಿ ಒಳ್ಳೆಯದೇ ಆಯಿತು ನಾನು ಸಮುದ್ರ ವಿಹಾರಕ್ಕೆ ಹೋಗುತ್ತೇನೆ. ನನ್ನ ಬಿಲ್ಗಳನ್ನು ಪಾವತಿಸುವುದಿಲ್ಲ’ ಎಂದು ಸೂಪರ್ಮಾರ್ಕೆಟ್ ನೌಕರನೊಬ್ಬ ಹೇಳುವ ಮಾತು ಗ್ರೀಕ್ ಜನರ ಮನಸ್ಥಿತಿಗೆ ಕನ್ನಡಿ ಹಿಡಿದಂತೆ ಇದೆ.

ಮಾರಕವಾದ ಮಿತವ್ಯಯ ಕ್ರಮ?
2010ರಲ್ಲಿ ಮೊದಲ ಬಾರಿ ಗ್ರೀಸ್ಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದಾಗಲೇ ಯುರೊ ವಲಯ ಕಠಿಣ ಮಿತವ್ಯಯದ ಷರತ್ತು ವಿಧಿಸಿತ್ತು.ಮಿತವ್ಯಯದ ಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಕಡಿಮೆಯಾಗಿದೆ. ಸಹಜವಾಗಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಒಟ್ಟು ಜನಸಂಖ್ಯೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಶೇ 28ರಷ್ಟಾಗಿದೆ. ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಅರ್ಥ ವ್ಯವಸ್ಥೆಯಲ್ಲಿ ಮತ್ತಷ್ಟು ಹಿಂಜರಿತ ಉಂಟಾಗಿದೆ.

‘ಯುರೊ ಪರಿಕಲ್ಪನೆಯಲ್ಲೇ ದೋಷವಿದೆ. ಒಕ್ಕೂಟ ವ್ಯವಸ್ಥೆ ಹೊಂದಿರುವ ಅಮೆರಿಕ ತನ್ನ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಹಣ ಪೂರೈಸುವಂತೆ ಯುರೊ ವ್ಯವಸ್ಥೆಯಿಲ್ಲ. ಜಾಗತಿಕ ಅರ್ಥ ವ್ಯವಸ್ಥೆಗೆ ಅನುಗುಣವಾಗಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಯುರೊವನ್ನು ನಿಯಂತ್ರಿಸುತ್ತಿದ್ದರೂ ತಮ್ಮ ಆಂತರಿಕ ಅರ್ಥ ವ್ಯವಸ್ಥೆ ಹಾಗೂ ತಮ್ಮ ಕೇಂದ್ರೀಯ ಬ್ಯಾಂಕ್ಗಳನ್ನು ಆಯಾ ಸರ್ಕಾರಗಳೇ ನಿಯಂತ್ರಿಸುತ್ತಿವೆ.

‘ಅಲ್ಲದೇ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ನ ನೀತಿ ನಿರೂಪಣೆ ಅದನ್ನು ಬಹುಪಾಲು ನಿಯಂತ್ರಿಸುವ ಜರ್ಮನಿಗೆ ಸೂಕ್ತವಾಗುವ ಮಾದರಿಯಲ್ಲಿ ಇದೆ. ಈ ವ್ಯವಸ್ಥೆ ಯುರೋಪಿನ ಇತರ ದೇಶಗಳಿಗೆ ಮಾರಕವಾಗುತ್ತಿದೆ. ಗ್ರೀಸ್ ಸಂಕಷ್ಟಕ್ಕೆ ಇದು ಸಹ ಕಾರಣ. ಸ್ಪೇನ್, ಪೋರ್ಚುಗಲ್, ಇಟಲಿ ಸಹ ಆರ್ಥಿಕ ಸಂಕಷ್ಟದಲ್ಲೇ ಇವೆ’ ಎಂಬುದು ಆರ್ಥಿಕ ತಜ್ಞರು ಮುಂದಿಡುವ ಮತ್ತೊಂದು ವಾದ. ಪಾಶ್ಚಿಮಾತ್ಯ ನಾಗರಿಕತೆಯ ತೊಟ್ಟಿಲು ಎಂದು ಕರೆಯುವ ಗ್ರೀಸ್ ದೇಶ ಜಗತ್ತಿಗೆ ರಂಗಭೂಮಿ, ಪ್ರಜಾಪ್ರಭುತ್ವ, ಒಲಿಂಪಿಕ್ಸ್ ಎಲ್ಲವನ್ನೂ ಕೊಟ್ಟಿದೆ. ಆದರೆ, ಈ ದೇಶ ಈಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಗ್ರೀಕ್ ನಾಟಕಗಳ ದುರಂತವನ್ನೂ ಮೀರಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.