ಮುಖಪುಟ
ಪ್ರಸ್ತಾವನೆ
ತೀರ್ಪುಗಾರರು
ಮುಖ್ಯ ತೀರ್ಪುಗಾರರು
ತಾಂತ್ರಿಕ ತೀರ್ಪುಗಾರರು
ನಾಮನಿರ್ದೇಶಿತರು
ಗ್ಯಾಲರಿ
ವೀಡಿಯೊ
ಫೋಟೋ
ಸಿನಿ ಕಾರ್ನರ್
ನಿಯಮಗಳು
ಪಬ್ಲಿಕ್ ವೋಟಿಂಗ್
ಚಂದನವನದ ಚೆಂದದ ಸಮ್ಮಾನ
15 ವಿಭಾಗಗಳಲ್ಲಿ ಅಸಾಧಾರಣ ಪ್ರತಿಭೆಗಳ ಗುರುತಿಸುವಿಕೆ
ಮೂರು ಹಂತಗಳ ತೀರ್ಪುಗಾರರ ಮಂಡಳಿ
ಕನ್ನಡ ಚಿತ್ರರಂಗದ ದಿಗ್ಗಜರಿಗೇ ಮುಖ್ಯ ತೀರ್ಪುಗಾರರ ಹೊಣೆ
2022 ರಲ್ಲಿ ಬಿಡುಗಡೆಯಾದ ಎಲ್ಲ ಚಲನಚಿತ್ರಗಳಿಂದ ಅತ್ಯುತ್ತಮವಾದವುಗಳ ಆಯ್ಕೆ
ಜಾಗತಿಕ ಮಟ್ಟದ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡುವ ಅತ್ಯಂತ ವಿಶ್ವಾಸಾರ್ಹ ಮೌಲ್ಯಮಾಪನ ಪ್ರಕ್ರಿಯೆ
ಚಿತ್ರರಂಗದ ಸಾವಿರಕ್ಕೂ ಹೆಚ್ಚು ಮಂದಿಯಿಂದ ಮತದಾನದ ಮೂಲಕ ಪ್ರಶಸ್ತಿ ಪುರಸ್ಕೃತರ ಆಯ್ಕೆ
ಪ್ರಶಸ್ತಿ ಪುರಸ್ಕೃತರು
ಪ್ರಶಸ್ತಿ ಪುರಸ್ಕೃತರು
ಪ್ರಜಾವಾಣಿ ಸಿನಿ ಸಮ್ಮಾನ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನಟ ಅನಂತ್ನಾಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ವೀಕರಿಸಿದರು.
ಕಾಂತಾರ ಚಿತ್ರಕ್ಕಾಗಿ ವರ್ಷದ ಅತ್ಯುತ್ತಮ ಚಿತ್ರ ಟ್ರೋಫಿಯನ್ನು ರಿಷಬ್ ಶೆಟ್ಟಿ ಪರವಾಗಿ ಅವರ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಅವರು ಗಿರೀಶ ಕಾಸರವಳ್ಳಿ ಅವರಿಂದ ಸ್ವೀಕರಿಸಿದರು.
ಅತ್ಯುತ್ತಮ ನಟ ಪ್ರಶಸ್ತಿಯು 'ತಲೆದಂಡ' ಚಿತ್ರದ ನಟನೆಗಾಗಿ ದಿವಂಗತ ಸಂಚಾರಿ ವಿಜಯ್ಗೆ ದೊರಕಿದ್ದು, ಅವರ ಪರವಾಗಿ ಸಹೋದರ ಸಿದ್ದೇಶ್ ಅವರು ಸುಮನ್ ಕಿತ್ತೂರು ಅವರಿಂದ ಸ್ವೀಕರಿಸಿದರು. ತಲೆದಂಡ ಚಿತ್ರದ ಎನ್. ಮಂಗಳಾ ಹಾಜರಿದ್ದರು.
ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಗಾನವಿ ಲಕ್ಷ್ಮಣ್ (ಚಿತ್ರ:ವೇದ) ಅವರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಪ್ರಾದೇಶಿಕ ಮುಖ್ಯಸ್ಥ ಮನ್ಸೂರ್ ಮತ್ತು ನಟಿ ಪೂಜಾಗಾಂಧಿ ಅವರಿಂದ ಸ್ವೀಕರಿಸಿದರು.
ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕಿಶೋರ್ ಕುಮಾರ್ (ಚಿತ್ರ:ಕಾಂತಾರ) ಸ್ವೀಕರಿಸಿದರು.
ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ನಟಿ ಉಮಾಶ್ರೀ (ಚಿತ್ರ:ವೇದ) ಅವರೊಂದಿಗೆ ಹಿರಿಯ ನಟಿ ಬಿ. ಜಯಶ್ರೀ.
ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯು ರಿಷಬ್ ಶೆಟ್ಟಿ (ಚಿತ್ರ: ಕಾಂತಾರ) ಅವರಿಗೆ ದೊರಕಿದ್ದು, ಟಿ.ಎನ್. ಸೀತಾರಾಂ ಅವರು ಪ್ರಗತಿ ಶೆಟ್ಟಿಗೆ ಟ್ರೋಫಿ ಹಸ್ತಾಂತರಿದರು. ರಮೇಶ್ ಅರವಿಂದ್ ಜೊತೆಗಿದ್ದರು.
ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದುಕೊಂಡ ನಿರ್ದೇಶಕ ಕಿರಣ್ರಾಜ್ ಕೆ. (ಚಿತ್ರ: 777 ಚಾರ್ಲಿ)
ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ಬಿ.ಅಜನೀಶ್ ಲೋಕನಾಥ್(ಚಿತ್ರ: ಕಾಂತಾರ) ಅವರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಾದೇಶಿಕ ಮುಖ್ಯಸ್ಥ ರಿಬಿನ್ ತೌಫಿಕ್ ಮತ್ತು ನಟಿ ರಾಗಿಣಿ ದ್ವಿವೇದಿ ಅವರಿಂದ ಸ್ವೀಕರಿಸಿದರು.
ಅತ್ಯುತ್ತಮ ಛಾಯಾಚಿತ್ರಗ್ರಹಣ ಪ್ರಶಸ್ತಿ ಪಡೆದ ಭುವನ್ ಗೌಡ(ಚಿತ್ರ: ಕೆ.ಜಿ.ಎಫ್. ಚಾಪ್ಟರ್–2)
'ಕಾಂತಾರ' ಚಿತ್ರಕ್ಕಾಗಿ 'ಅತ್ಯುತ್ತಮ ಸಂಕಲನ' ಟ್ರೋಫಿಯನ್ನು ಪ್ರತೀಕ್ ಶೆಟ್ಟಿ ಅವರು ಖ್ಯಾತ ಸಿನಿಮಾ ಸಂಕಲನಕಾರ ಎಂ.ಎನ್.ಸ್ವಾಮಿ ಅವರಿಂದ ಸ್ವೀಕರಿಸಿದರು. ನಿರೂಪಕ ರಮೇಶ್ ಅರವಿಂದ್ ಇದ್ದಾರೆ.
ಕೆಜಿಎಫ್ ಸಿನಿಮಾಗೆ 'ಅತ್ಯುತ್ತಮ ಸಂಕಲನ' ಪ್ರಶಸ್ತಿಯನ್ನು ಉಜ್ವಲ್ ಕುಲಕರ್ಣಿ (ಚಿತ್ರ: ಕೆ.ಜಿ.ಎಫ್. ಚಾಪ್ಟರ್–2) ಪರವಾಗಿ ಸ್ವೀಕರಿಸಿದ ಅವರ ತಂದೆ
ಅತ್ಯುತ್ತಮ ಹಿನ್ನೆಲೆ ಗಾಯಕ ಪುರಸ್ಕೃತ ಸಿದ್ ಶ್ರೀರಾಮ್(ಹಾಡು: ಜಗವೇ ನೀನು ಗೆಳತಿಯೇ, ಚಿತ್ರ: ಲವ್ 360) ಪರವಾಗಿ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ಶಶಾಂಕ್.
ಅತ್ಯುತ್ತಮ ಹಿನ್ನೆಲೆ ಗಾಯಕಿ: ಮಂಗ್ಲಿ (ಹಾಡು: ಗಿಲ್ಲಕ್ಕೊ ಶಿವ, ಚಿತ್ರ: ವೇದ) ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಗಾಯಕಿ ಅದಿತಿ ಸಾಗರ್.
ಅತ್ಯುತ್ತಮ ಗೀತ ಸಾಹಿತ್ಯ ಪ್ರಶಸ್ತಿಯೊಂದಿಗೆ ಕೆ.ಕಲ್ಯಾಣ್ (ಹಾಡು:ಮೇಘರಾಜನ ರಾಗ, ಚಿತ್ರ: ಮಾನ್ಸೂನ್ ರಾಗ).
‘ಅತ್ಯುತ್ತಮ ಗೀತ ಸಾಹಿತ್ಯ’ ಪ್ರಶಸ್ತಿ ಸ್ವೀಕರಿಸಿದ ವಿ. ನಾಗೇಂದ್ರ ಪ್ರಸಾದ್ (ಹಾಡು: ಗಿಲ್ಲಕ್ಕೊ ಶಿವ, ಚಿತ್ರ: ವೇದ).
ಅತ್ಯುತ್ತಮ ನೃತ್ಯ ನಿರ್ದೇಶನ: ರಾಜ್ ಬಿ.ಶೆಟ್ಟಿ (ಹಾಡು: ವರಾಹರೂಪಂ, ಚಿತ್ರ: ಕಾಂತಾರ) ಪರವಾಗಿ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅವರಿಂದ ಪ್ರಶಸ್ತಿ ಪಡೆದುಕೊಂಡ ಪ್ರಗತಿ ಶೆಟ್ಟಿ ಹಾಗೂ ನಟ ಕಿಶೋರ್.
ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ 'ತಲೆದಂಡ' ಚಿತ್ರ ತಂಡ. ನಿರ್ದೇಶಕ ಯೋಗರಾಜ್ ಭಟ್, ಟಿಪಿಎಂಎಲ್ ನಿರ್ದೇಶಕಿ ಪಾರುಲ್ ಶಾ, ಚಿತ್ರ ನಿರ್ದೇಶಕ ಪ್ರವೀಣ್ ಕೃಪಾಕರ್, ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್, ನಾಯಕಿ ಚೈತ್ರಾ ಆಚಾರ್, ನಟಿ ಎನ್. ಮಂಗಳಾ, ನಟ ರಮೇಶ್ ಪಂಡಿತ್ ಇದ್ದಾರೆ.
ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಪಡೆದ 'ಕಾಂತಾರ' ಚಿತ್ರ ತಂಡದ ವಸ್ತ್ರ ವಿನ್ಯಾಸಕಿ ಪ್ರಗತಿ ಅವರಿಗೆ ನಟಿ 'ಸ್ಪರ್ಶ' ರೇಖಾ ಅವರು ಪ್ರದಾನ ಮಾಡಿದರು.
ಅತ್ಯುತ್ತಮ ವಿಎಫ್ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್ ಪ್ರಶಸ್ತಿಯನ್ನು 777 ಚಾರ್ಲಿ ಚಿತ್ರ ತಂಡದ ತಂತ್ರಜ್ಞರಾದ ಅಭಿಷೇಕ್, ರಾಹುಲ್ ಅವರಿಗೆ ನಟಿ ಶ್ರುತಿ ಹರಿಹರನ್ ಪ್ರದಾನ ಮಾಡಿದರು. ನಿರ್ದೇಶಕ ಕಿರಣ್ರಾಜ್ ಇದ್ದರು.
ಜನಮೆಚ್ಚಿದ ಸಿನಿಮಾ ಆಗಿ ಕಾಂತಾರ ಚಿತ್ರವು ಪ್ರಶಸ್ತಿ ಪಡೆಯಿತು.
ಜನಮೆಚ್ಚಿದ ನಟ ಪ್ರಶಸ್ತಿಯನ್ನು ಯಶ್ (ಚಿತ್ರ: ಕೆ.ಜಿ.ಎಫ್ ಚಾಪ್ಟರ್–2) ಪರವಾಗಿ ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚೆಲುವೇಗೌಡರು ಟಿಟಿಕೆ ಪ್ರೆಸ್ಟೀಜ್ ಉಪಾಧ್ಯಕ್ಷ ದಿನೇಶ್ ಗರ್ಗ್ ಅವರಿಂದ ಪಡೆದರು. ನಟ ರಘು ಮುಖರ್ಜಿ ಹಾಗೂ ಅನು ಪ್ರಭಾಕರ್ ಇದ್ದರು.
ಜನಮೆಚ್ಚಿದ ನಟಿ: ಅದಿತಿ ಪ್ರಭುದೇವ (ಚಿತ್ರ: Once upon a time in Jamaligudda).
ಜನಮೆಚ್ಚಿದ ಸಂಗೀತ ಟ್ರೋಫಿಯನ್ನು ಬಿ.ಅಜನೀಶ್ ಲೋಕನಾಥ್ (ಚಿತ್ರ: ಕಾಂತಾರ) ಅವರಿಗೆ ನಟ ಸುಂದರ್ರಾಜ್ ಅವರು ಪ್ರದಾನ ಮಾಡಿದರು.
×
Close
ಮುಖ್ಯ ತೀರ್ಪುಗಾರರು
ಮುಖ್ಯ ತೀರ್ಪುಗಾರರು
ಗಿರೀಶ್ ಕಾಸರವಳ್ಳಿ
ಚಲನಚಿತ್ರ ನಿರ್ದೇಶಕರು
ಎನ್. ವಿದ್ಯಾಶಂಕರ್
ಚಲನಚಿತ್ರ ವಿಮರ್ಶಕ
ಹಂಸಲೇಖ
ಸ್ವರ ಸಂಯೋಜಕ–ಚಿತ್ರಸಾಹಿತಿ
ಪ್ರಕಾಶ್ ರೈ
ನಟ–ನಿರ್ದೇಶಕ–ನಿರ್ಮಾಪಕ
ಶ್ರುತಿ ಹರಿಹರನ್
ನಟಿ–ನಿರ್ಮಾಪಕಿ
ಯೋಗರಾಜ ಭಟ್
ನಿರ್ದೇಶಕ–ಚಿತ್ರಸಾಹಿತಿ
ಸುಮನಾ ಕಿತ್ತೂರು
ನಿರ್ದೇಶಕಿ
ಎಲ್ಲಾ ವೀಕ್ಷಿಸಿ