ಮಂಗಳೂರು: ಮಂಗಳೂರು ದಸರಾ ಉದ್ಘಾಟನೆಗೆ ಭಾನುವಾರ ನಗರಕ್ಕೆ ಬಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭಾರಿ ಮಳೆ ಅಡ್ಡಿ ಉಂಟುಮಾಡಿದೆ.

ನಿಗದಿಯಂತೆ ಸಂಜೆ 6 ಗಂಟೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದು ಈ ಬಾರಿಯ ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಅವರು ದೇವಸ್ಥಾನದತ್ತ ಬರುತ್ತಿದ್ದಂತೆಯೇ ಭಾರಿ ಮಳೆಯೂ ಆರಂಭವಾಯಿತು. ಇದರಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಸುಮಾರು 15 ನಿಮಿಷ ಅವರು ರಸ್ತೆಯಲ್ಲೇ ಸಿಕ್ಕಿಹಾಕಿಕೊಳ್ಳುವಂತಾಯಿತು.

ಪೊಲೀಸ್ ಬೆಂಗಾವಲು ಇದ್ದರೂ ಮುಖ್ಯಮಂತ್ರಿ ತೆರಳುವುದಕ್ಕೇ ಮಳೆ ಅಡ್ಡಿಪಡಿಸುವ ಮೂಲಕ ಇಡೀ ಕಾರ್ಯಕ್ರಮ ಸುಮಾರು ಒಂದು ತಾಸು ವಿಳಂಬವಾಗಿದ್ದು, ಸೇರಿರುವ ಸಾವಿರಾರು ಮಂದಿ ಮುಖ್ಯಮಂತ್ರಿ ಅವರ ಬರುವಿಕೆಗಾಗಿ ಕಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.