ನಮ್ಮನ್ನು ಅಗಲಿರುವ ಹಿರಿಯರನ್ನೂ ಪೂಜ್ಯರನ್ನೂ ಸ್ಮರಿಸುವ ಪರ್ವವೇ ಮಹಾಲಯ ಅಮಾವಾಸ್ಯೆ. ಸಾಮಾನ್ಯವಾಗಿ ಭಾರತದ ಎಲ್ಲ ಭಾಗದ ಜನರೂ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಆಚರಣೆಯ ವಿವರಗಳಲ್ಲಿ ವ್ಯತ್ಯಾಸಗಳು ಇರಬಹುದಾದರೂ ಉದ್ದೇಶದಲ್ಲಿ ಏಕತೆಯನ್ನೇ ಕಾಣುತ್ತೇವೆ. ನಮ್ಮ ಪಿತೃಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ವ್ರತದ ಆಶಯ. ನಮ್ಮನ್ನು ಭೌತಿಕವಾಗಿ ಅಗಲಿರುವ ಕುಟುಂಬಸ್ಥರನ್ನೂ ಗುರು–ಹಿರಿಯರನ್ನೂ ಆತ್ಮೀಯರನ್ನೂ ಸ್ಮರಿಸಿ, ಪಿತೃರೂಪದಲ್ಲಿರುವ ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಎಳ್ಳು, ನೀರು, ಜೇನುತುಪ್ಪಗಳ ತರ್ಪಣವನ್ನು ಇಂದು ನೀಡಲಾಗುತ್ತದೆ.

ಭಾದ್ರಪದಮಾಸದ ಕೃಷ್ಣಪಕ್ಷದ ಹದಿನೈದು ದಿನಗಳನ್ನು ಮಹಾಲಯಪಕ್ಷ ಎಂದು ಕರೆಯುವ ರೂಢಿಯುಂಟು. ಈಪಕ್ಷದಲ್ಲಿ ಬರುವ ಅಮಾವಾಸ್ಯೆಯಂದು ಪಿತೃಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲು ಪ್ರಶಸ್ತವಾದ ಸಮಯ ಎಂದು ಶಾಸ್ತ್ರಗಳು ನಿರ್ದೇಶಿಸಿವೆ.

ಇದಕ್ಕೆ ಪೂರಕವಾಗಿ ಪುರಾಣಕಥನವೊಂದು ಹೀಗಿದೆ:

ತನ್ನ ಲೋಕದಲ್ಲಿರುವ ಎಲ್ಲ ಪಿತೃಗಳಿಗೂ ಮಹಾಲಯಪಕ್ಷದ ಸಮಯದಲ್ಲಿ ಯಮಧರ್ಮರಾಯನು ರಜೆಯನ್ನು ಕೊಡುತ್ತಾನಂತೆ! ‘ನಿಮ್ಮ ಮಕ್ಕಳು–ಬಂಧುಗಳು ನಿಮಗೆ ಈ ಸಂದರ್ಭದಲ್ಲಿ ಜೇನುತುಪ್ಪವನ್ನು ನೀಡುತ್ತಾರೆ. ನೀವು ಅದನ್ನು ಸವಿದು ಸಂತೋಷಪಡಿ‘ ಎಂದು ಅವರನ್ನು ಅನುಗ್ರಹಿಸಿ ಕಳುಹಿಸುತ್ತಾನಂತೆ.

ಈ ಕಲ್ಪನೆಯ ಹಿಂದಿರುವ ತತ್ತ್ವ ಸ್ಪಷ್ಟವಾಗಿಯೇ ಇದೆ. ಗತಿಸಿದ ಹಿರಿಯರಿಗೆಯಾವುದಾದರೂ ಕಾರಣಗಳಿಂದ ಶ್ರಾದ್ಧವನ್ನು ಮಾಡಲಾಗದಿದ್ದವರೂ ಮಹಾಲಯ ಅಮಾವಾಸ್ಯೆಯಂದು ಅವರಿಗೆ ತರ್ಪಣವನ್ನು ನೀಡಿದರೆ ಅದು ಶ್ರಾದ್ಧದಷ್ಟೇ ಫಲಕಾರಿ ಎಂಬ ನಂಬಿಕೆಯಿದೆ. ಗತಿಸಿರುವ ತನ್ನ ತಂದೆ–ತಾಯಿಗಳನ್ನು ಮಾತ್ರವಲ್ಲ, ತಂದೆಯ ಕಡೆ ಬಂಧುಗಳು, ತಾಯಿಯ ಕಡೆಯ ಬಂಧುಗಳು, ಸ್ನೇಹಿತರು, ಗುರು–ಹಿರಿಯರು, ಸೇವಕರು – ಹೀಗೆ ತನ್ನ ಆಪ್ತವಲಯದಲ್ಲಿ ಗತಿಸಿರುವ ಎಲ್ಲರಿಗೂ ಇಂದು ತರ್ಪಣವನ್ನು ನೀಡಬಹುದಾಗಿದೆ. ಇಡಿಯ ಸಮಾಜವೇ ನನ್ನ ಕುಟುಂಬ ಎಂಬ ಆತ್ಮವಿಸ್ತರಣವನ್ನು ಈ ವಿಧಿಯಲ್ಲಿ ನೋಡಬಹುದು.

ಗತಿಸಿದವರಿಗೆ ಇಷ್ವವಾದ ಅಡುಗೆಯನ್ನು ಮಾಡಿ ಅದನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ವಿಧಾನವೂ ಉಂಟು. ಪಿತೃಗಳೇ ಅವರ ರೂಪದಲ್ಲಿ ನಿಂತು ತೃಪ್ತರಾಗುತ್ತಾರೆ ಎನ್ನುವುದು ಇದರ ಹಿಂದಿರುವ ನಂಬಿಕೆ. ಹೀಗೆಯೇ ಹಿರಿಯರ ಸಮಾಧಿಗಳಿಗೆ ತೆರಳಿ, ಪೂಜೆ ಸಲ್ಲಿಸಿ, ಎಡೆಗಳನ್ನು ಅರ್ಪಿಸುವ ಕ್ರಮವೂ ಉಂಟು. ಒಟ್ಟಿನಲ್ಲಿ ಗುರು–ಹಿರಿಯರ ಸ್ಮರಣೆಗೆ ಮೀಸಲಾಗಿರುವ ಮಹಾಲಯ ಅಮಾವಾಸ್ಯೆಯು ನಮ್ಮ ಕುಟುಂಬ ವ್ಯವಸ್ಥೆಯ ಆದರ್ಶಗಳಲ್ಲಿ ಸೇರಿದೆ ಎನ್ನುವುದು ಸ್ಪಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.