ರಾಜ್ಯದ ವಿವಿಧೆಡೆ ಶಿವರಾತ್ರಿ ಆಚರಣೆಯ ಸಂಭ್ರಮ,ಮಹಾಶಿವರಾತ್ರಿ ನಿಮಿತ್ತ ಭಕ್ತರು ಶಿವ ದೇವಸ್ಥಾನಗಳಲ್ಲಿ ನೆರೆದಿದ್ದು, ಶಿವನ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದಾರೆ.ಶೃದ್ಧಾಭಕ್ತಿಯಿಂದ ಜನರು ಶಿವಧ್ಯಾನದಲ್ಲಿ ತೊಡಗಿದ್ದು, ಶಿವನಿಗೆ ಪ್ರಿಯವಾದ ರುದ್ರಾಭಿಷೇಕ, ಅರ್ಚನೆ ಸೇವೆ ನಡೆಸಿದರು.
ಮಹಾಶಿವರಾತ್ರಿಯ ಆಚರಣೆ ಸಲುವಾಗಿ ಮಂತ್ರಾಲಯದ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಶ್ರೀ ರುದ್ರ ದೇವರ ಶಿವಲಿಂಗಕ್ಕೆ ರುದ್ರಾಭಿಷೇಕ ನೆರವೇರಿಸಿದರು.
ADVERTISEMENT
ಶೃದ್ಧಾಭಕ್ತಿಯಿಂದ ಜನರು ಶಿವಧ್ಯಾನದಲ್ಲಿ ತೊಡಗಿದ್ದು, ಶಿವನಿಗೆ ಪ್ರಿಯವಾದ ರುದ್ರಾಭಿಷೇಕ, ಅರ್ಚನೆ ಸೇವೆ ನಡೆಸಿದರು.
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತಾದಿಗಳು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಭಕ್ತರು ಗೋಕರ್ಣನಾಥನ ದರ್ಶನ ಪಡೆದರು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ
ಮಹಾಶಿವರಾತ್ರಿ ಅಂಗವಾಗಿ ಬೆಳಗಾವಿಯ ಶಾಹೂನಗರದ ಶಿವಾಲಯದಲ್ಲಿ ಭಕ್ತರು ಶಿವನಿಗೆ ನಮಿಸಿದರು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ
ಶಿವರಾತ್ರಿಯ ಪ್ರಯುಕ್ತ ರಾಯಚೂರಿನ ಪುರಾತನ ದೇವಸ್ಥಾನಗಳಾದ ರಾಮಲಿಂಗೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಮಾಣಿಕ್ ಪ್ರಭು ದೇವಸ್ಥಾನ ಹಾಗೂ ನಂದೀಶ್ವರ ದೇವಸ್ಥಾನಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು ದರ್ಶನಕ್ಕಾಗಿ ಕಾಯುತ್ತಿದ್ದಾರೆ.