ಕಿಚಡಿ ಜೊತೆ ಊಟಕ್ಕೆ ಬಳಸುವ ಘಮ ಘಮ ಮಜ್ಜಿಗೆ ಸಾರು (ಸಂಗ್ರಹ ಚಿತ್ರ)
ಎಂಕಂಚೆಪ್ಪನ ಪರು
ಕಿಚಡಿಯನ್ನು ಸವಿದವರು ‘ಊಟ ಅಂದ್ರ ಹೀಂಗಿರಬೇಕ್ರಿ... ಇದು ಹೊಟ್ಟಿಗೂ ಹಿತ, ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳುವಾಗ ಜೋಳದ ಕಿಚಡಿಯ ಮಹತ್ವ ತಿಳಿಯುತ್ತದೆ.
ಆಧುನಿಕತೆಯ ಇಂದಿನ ವ್ಯವಸ್ಥೆಯಲ್ಲಿ ಅದೆಷ್ಟೋ ಸಾಂಪ್ರದಾಯಿಕ ಹಬ್ಬ, ಆಚರಣೆಗಳು ಮರೆಯಾಗುತ್ತಲಿದ್ದರೂ ಬೆನಕಟ್ಟಿ ಗ್ರಾಮದಲ್ಲಿ ನಿರಂತರ ಆಚರಿಸಿಕೊಂಡು ಬರಲಾಗುತ್ತಿರುವ ಈ ಆಷಾಢಪರ್ವ(ಎಂಕಂಚೆಪ್ಪನ ಪರು) ಗ್ರಾಮೀಣ ಪ್ರದೇಶದಲ್ಲಿ ಹಬ್ಬ-ಆಚರಣೆಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹೊಟ್ಟೆಗೆ ಹಿತ ನೀಡುವ ಈ ಜೋಳದ ಕಿಚಡಿ, ರುಚಿ ರುಚಿ ಸಾರು ಸವಿಯಬೇಕು ಎಂದೆನಿಸಿದರೆ ಜುಲೈ 26ರಂದು ಮರೆಯದೇ ಬೆನಕಟ್ಟಿ ಗ್ರಾಮಕ್ಕೆ ಬನ್ನಿ.