ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವಕ್ಕೆ ಬುಧವಾರ ಬೆಳಿಗ್ಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಸಮಾರಂಭದಲ್ಲಿ 680 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಅವರಲ್ಲಿ 475 ಪದವಿ, 137 ಸ್ನಾತಕೋತ್ತರ ಹಾಗೂ 45 ಪಿಎಚ್ ಡಿ ವಿದ್ಯಾರ್ಥಿಗಳು ಸೇರಿದ್ದಾರೆ.

ಇದೇ ವೇಳೆ ಮಾಜಿ ಸಚಿವರೂ ಆದ ಹಿರಿಯೂರಿನ ಪ್ರಗತಿ ಪರ ರೈತ ಎಚ್. ಏಕಾಂತಯ್ಯ ಅವರಿಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ರಾಜ್ಯಪಾಲರು ಪ್ರದಾನ ಮಾಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮಾರಂಭದಲ್ಲಿ ಜಲ ತಜ್ಞ ರಾಜಸ್ತಾನದ ಡಾ. ರಾಜೇಂದ್ರ ಸಿಂಗ್ ಪ್ರಧಾನ ಭಾಷಣ ಮಾಡಿದರು.

ಓದಿ...ಬೆಂಗಳೂರು: ಗೋಡೆಗಳ ಮೇಲೆ ‘Sorry’ ಬರಹ: ಸಿಸಿಟಿವಿಯಲ್ಲಿ ಇಬ್ಬರ ಗುರುತು ಪತ್ತೆ

ಚಿನ್ನದ ಹುಡುಗಿ ಉಮ್ಮೇಸಾರಾ:ಘಟಿಕೋತ್ಸವದಲ್ಲಿ ಚಿಕ್ಕಮಗಳೂರು ತಾಲ್ಲೂಕು ಕಾರೇಹಟ್ಟಿಯ ಉಮ್ಮೇಸಾರಾ ಅಸ್ಮತ್ ಅಲಿ ಬಿಎಸ್ಸಿ ತೋಟಗಾರಿಕೆ ವಿಷಯದಲ್ಲಿ 16 ಚಿನ್ನದ ಪದಕ ಹಾಗೂ ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ಹಾಸನದ ಮೇಘಾ ಅರುಣ್ ನಾಲ್ಕು ಚಿನ್ನದ ಪದಕಗಳ ಪಡೆದು ಗಮನ ಸೆಳೆದರು.

ಉಮ್ಮೇಸಾರಾ, ಮೇಘಾ ಅರುಣ್ ಸೇರಿದಂತೆ ಒಟ್ಟು 18 ಪದವಿ ವಿದ್ಯಾರ್ಥಿಗಳು, 12 ಸ್ನಾತಕೋತ್ತರ ಹಾಗೂ ನಾಲ್ವರು ಪಿಎಚ್ ಡಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು.

ತೋಟಗಾರಿಕೆ ಸಚಿವ ಮುನಿರತ್ನ, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ಪಾಲ್ಗೊಂಡಿದ್ದರು.

ಓದಿ...ಮಳಲಿ ಜುಮ್ಮಾ ಮಸೀದಿ ಗೊಂದಲ: ಗುರು ಸಾನ್ನಿಧ್ಯ ಗೋಚರ ಎಂದ ಕೇರಳ ಜ್ಯೋತಿಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.