ನೇಕಾರರ ಬದುಕಿನ ಬಂಡಿ ದೂಡುತ್ತಿರುವ ಗುಳೇದಗುಡ್ಡ ಖಣ ಆಧುನಿಕತೆಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗುಳೇದಗುಡ್ಡ ಪಟ್ಟಣದ ಎಂಜಿನಿಯರ್ ರಮೇಶ ಅಯೋದಿ ಖಣದಲ್ಲಿ ಡೈರಿ, ವ್ಯಾನಿಟಿ ಬ್ಯಾಗ್, ಕರವಸ್ತ್ರ, ಮೊಬೈಲ್ ಪೌಚ್ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ. ದುಡಿಮೆಗಾಗಿ ದೂರದ ಊರಿಗೆ ಹೋಗಿ ಒತ್ತಡದಲ್ಲಿಯೇ ‘ಕಳೆದು’ ಹೋಗುವುದಕ್ಕಿಂತ ಇದ್ದ ಊರಿನಲ್ಲಿಯೇ ತಮ್ಮೂರಿನ ನೇಕಾರರು ಹೆಚ್ಚು ಆದಾಯ ಗಳಿಸುತ್ತಾ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಕನಸು ರಮೇಶ ಅವರದು. ತಮ್ಮ ಸಮುದಾಯಕ್ಕೆ ತಮ್ಮದೇ ಆದ ರೀತಿಯಲ್ಲಿ ಏನಾದರೂ ಕೊಡುಗೆ ಕೊಡಬೇಕು ಎಂದು ಬಯಸುವ ಯುವಸಮೂಹಕ್ಕೆ ಹೊಸ ಪ್ರೇರಣೆ ಈ ರಮೇಶ ಅಯೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.