ಇಳಕಲ್: ʼಈಗಾಗಲೇ 42 ಎಕರೆ ಜಮೀನಿನಲ್ಲಿ 1400 ಹಕ್ಕುಪತ್ರ ಕೊಟ್ಟಿದ್ದೇನೆ. ಸಾವಿರ ಮನೆ ಕಟ್ಟಡ ಆರಂಭವಾಗಲಿದೆ. ಇನ್ನೂ 72 ಎಕರೆ ಜಮೀನು ಖರೀದಿಸಿ ಬಡವರಿಗಾಗಿ 5 ಸಾವಿರ ಮನೆ ಕಟ್ಟಿಸಿಕೊಡುತ್ತೇನೆʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ವಿಜಯ ಮಹಾಂತೇಶ್ವರ ಕರ್ತೃ ಗದ್ದುಗೆ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ₹5ಕೋಟಿ ವೆಚ್ಚದಲ್ಲಿ ಹಿರೇಹಳ್ಳಕ್ಕೆ ಚೆಕ್ಡ್ಯಾಂ ಹಾಗೂ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ʼಮೊದಲ ಬಾರಿಗೆ ಶಾಸಕನಾಗಿದ್ದಾಗ ಕೆರೆ ನಿರ್ಮಾಣಕ್ಕೆ ₹4 ಕೋಟಿ ಮಂಜೂರು ಮಾಡಿಸಿದ್ದೆ. ಹಿಂದಿನ ಶಾಸಕರು ಕೆರೆ ನಿರ್ಮಿಸಲು ಆಸಕ್ತಿ ತೋರಲಿಲ್ಲ. ಅನುದಾನ ಸರ್ಕಾರ ಹಿಂಪಡೆಯಿತು. ಈಗ ಮತ್ತೆ ಶಾಸಕನಾಗಿದ್ದು, ಆ ಕನಸು ಈಗ ನನಸಾಗುತ್ತಿದೆ. ಇದೇ ಅವಧಿಯಲ್ಲಿ ಕೆರೆ ಕಾಮಗಾರಿ ಮುಗಿಸಿ ಜನರ ಬಳಕೆಗೆ ಒದಗಿಸುತ್ತೇನೆʼ ಎಂದರು.

ʼ5ಕೋಟಿ ವೆಚ್ಚದಲ್ಲಿ ಅಲಂಪೂಪೇಟೆಗೆ ಸಂಪರ್ಕಿಸುವ ಸೇತುವೆ, ₹4 ಕೋಟಿ ವೆಚ್ಚದ ಸ್ವಿಮಿಂಗ್ ಪೂಲ್, ₹60 ಲಕ್ಷ ವೆಚ್ಚದಲ್ಲಿ ಹಾದಿ ಬಸವಣ್ಣ ಬಡಾವಣೆಗೆ ಹೆದ್ದಾರಿ ಪಕ್ಕ ಸರ್ವಿಸ್ ರಸ್ತೆ, ಕ್ರೀಡಾಂಗಣಕ್ಕಾಗಿ ಮಂಜೂರಾಗಿದ್ದ ₹2 ಕೋಟಿ ಬದಲಾಗಿ ಈಗ ಮುಖ್ಯಮಂತ್ರಿಗಳನ್ನು ವಿನಂತಿಸಿ ₹10 ಕೋಟಿ ಮಂಜೂರು ಮಾಡಿಸಿದ್ದೇನೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ವೆಂಕಟೇಶ ಸಾಕಾ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಆಮದಿಹಾಳ, ಶಾಂತಕುಮಾರ ಸುರಪುರ, ಮೌಲಪ್ಪ ಬಂಡಿವಡ್ಡರ್, ಶಬ್ಬೀರ್ ಬಾಗವಾನ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.