ವೈಜ್ಞಾನಿಕ ಕಾಮಗಾರಿ ಕುರಿತು ಪ್ರತಿಕ್ರಿಯಿಸಲು ಶಬ್ದಗಳೇ ಸಾಲುತ್ತಿಲ್ಲ. ಈ ಕಾಮಗಾರಿ ಜನತೆಯ ಅನುಕೂಲಕ್ಕೋ ಇಲ್ಲ, ಹಣ ಕೊಳ್ಳೆ ಹೊಡೆಯಲೋ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆ ಸಾರ್ವಜನಿಕರಿಗೆ ತಿಳಿಸಬೇಕು. ಫುಟ್‌ಪಾತ್ ನಿರ್ಮಿಸಬೇಕಾದವರೇ ಒಡೆದು ನೆಲಸಮಗೊಳಿಸಿದರೆ ಹೇಗೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
-ರಮೇಶ್ ಬದ್ನೂರ, ವಕೀಲರು
ನವನಗರದಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಕಡ್ಡಾಯವಾಗಿ ಪುಟ್‌ಪಾತ್ ನಿರ್ಮಿಸಲಾಗಿತ್ತು. ಇದರಿಂದ ಪಾದಚಾರಿಗಳಿಗೆ ಅನುಕೂಲವಾಗಿತ್ತು. ಈಗ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದ ಅನುದಾನ ಅನಾವಶ್ಯಕವಾಗಿ ಪೋಲಾಗುತ್ತಿದೆ. ಫುಟ್‌ಪಾತ್ ಮರು ನಿರ್ಮಾಣ ಮಾಡಲು ಕ್ರಮಕೈಗೊಳ್ಳುವ ಮೂಲಕ ಪಾದಚಾರಿಗಳಿಗೆ ಅನುಕೂಲ ಒದಗಿಸಿಕೊಡಬೇಕು