ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಅರ್ಧಗಂಟೆ ಕಾಲ ರಭಸದಿಂದ ಮಳೆ ಸುರಿಯಿತು.

ಮಳೆಯಿಂದ ಅಡಿಗಿಂತಲೂ ಅಧಿಕ ನೀರು ಹರಿದು ರಸ್ತೆ ಮತ್ತು ಚರಂಡಿಯೆಲ್ಲ ಸ್ವಚ್ಛವಾದವು. ಬೆಟ್ಟದ ಮೇಲಿಂದ ಧುಮ್ಮಿಕ್ಕಿದ ಜೋಡಿ ಜಲಧಾರೆಗಳ ನೀರು ಅಗಸ್ತ್ಯತೀರ್ಥ ಹೊಂಡದಲ್ಲಿ ಸಂಗ್ರಹವಾಯಿತು.

ಮಳೆಯಿಂದ ಮುಂಗಾರು ಜೋಳ, ಸಜ್ಜೆ, ಶೇಂಗಾ, ತೊಗರಿ, ಮೆಕ್ಕೆಜೋಳ ಬೆಳೆಗೆ ಮತ್ತು ಹಿಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಯಿತು.

ಹಿಂಗಾರು ಬಿತ್ತನೆಗೆ ಜೋಳ, ಕಡಲೆ, ಹುರುಳಿ ಮತ್ತು ಕುಸುಬಿ ಬೀಜ ಮತ್ತು ಗೊಬ್ಬರವನ್ನು ರೈತರು ಸಜ್ಜುಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.