ಹುನಗುಂದ: ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಸಂಸ್ಥೆಯೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸಂತೋಷ ಕುಮಾರ ಹೇಳಿದರು.

ಪಟ್ಟಣದ ಮರಿದೇವ ಮಠದ ಹತ್ತಿರವಿರುವ ಸಭಾಭವನದಲ್ಲಿ ಬುಧವಾರ ‘ನಡೆದ ವಿಶ್ವ ತಂಬಾಕು ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದುಶ್ಚಟಗಳಿಗೆ ದಾಸರಾದವರನ್ನು ಮುಕ್ತಿಗೊಳಿಸಲು ಸಂಸ್ಥೆ ವಿಶೇಷ ಶಿಬಿರವನ್ನು ಆಯೋಜಿಸುತ್ತಿದ್ದು ಈವರಗೆ ಒಟ್ಟು 48 ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದ್ದೇವೆ. ತಂಬಾಕು ಸೇವನೆಯಂತಹ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಪಿ.ಎಸ್. ಕಠಾಣಿ ಮಾತನಾಡಿ, ‘ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧ ಮಾಡಬೇಕು. ಇದರಿಂದ ನಿಯಂತ್ರಣ ಸಾಧ್ಯ’ ಎಂದರು.

ವಿಜಯ ಮಹಾಂತೇಶ ಮಲಗಿಹಾಳ, ಮಾಧವಿ ದೇಶಪಾಂಡೆ ಮಾತನಾಡಿದರು. ಅರುಣ ವಿ.ಎಂ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.