ಮಹಾದ್ವಾರ ಪ್ರವೇಶದ ಎದುರಿನ ಗಣೇಶ ಮೂರ್ತಿ
ಮಹಾಕೂಟೇಶ್ವರ ಗುಡಿಯ ಆವರಣದಲ್ಲಿನ ಪುಷ್ಕರಣಿಯಲ್ಲಿ ಭಕ್ತರ ಪುಣ್ಯಸ್ನಾನ
ಸಂಗಮೇಶ್ವರ ಗುಡಿಯ ಪಶ್ಚಿಮ ಗೋಡೆಯಲ್ಲಿ ಆಕರ್ಷವಾಗಿರುವ ಅರ್ಧನಾರೀಶ್ವರ ಮೂರ್ತಿ.
ವರ್ಷ ಪೂರ್ತಿ ಪುಷ್ಕರಣಿ ಭರ್ತಿ
ಈ ಎರಡೂ ಪುಷ್ಕರಣಿಗಳು 12 ತಿಂಗಳೂ ಭರ್ತಿಯಾಗಿರುತ್ತವೆ. ಸದಾ ಕಾಲುವೆಯ ಮೂಲಕ ನೀರು ಹರಿಯುತ್ತದೆ. ಮಳೆ ಕೊರತೆಯಾಗಿದ್ದರೂ ಪುಷ್ಕರಣಿಗಳು ಬತ್ತಿದ ಪ್ರಸಂಗವೇ ಇಲ್ಲ. ಭಕ್ತರು ಎರಡೂ ಪುಷ್ಕರಣಿಗಳಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಕಾಲುವೆಯಿಂದ ಹರಿಯುವ ನೀರನ್ನು ರೈತರು ನೀರಾವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಸುತ್ತ ಸದಾ ಹಸಿರನ್ನು ಕಾಣಬಹುದು.