ರಬಕವಿ ಬನಹಟ್ಟಿ: ಸಂಘ, ಸಂಸ್ಥೆಗಳು ಜನ ಸೇವೆಗೆ ಮುಂದಾಗುವ ಮೂಲಕ ಜನರ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಮುರಗೇಶ ನಿರಾಣಿ ತಿಳಿಸಿದರು.

ಸಮೀಪದ ನಾವಲಗಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರಾಣಿ ಚನ್ನಮ್ಮ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂಘದ ಬೆಳೆವಣಿಗೆಯಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಮತ್ತು ಗ್ರಾಹಕರ ಸಹಕಾರ ಮುಖ್ಯವಾಗಿದೆ. ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಸಂಘದ ಜೊತೆಗೆ ವ್ಯವಹಾರ ಮಾಡಿ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಹಣಮಂತ ಸವದಿ ಮಾತನಾಡಿ, ಸಂಘವು ಕಡಿಮೆ ಅವಧಿಯಲ್ಲಿ ₹32 ಲಕ್ಷ ಲಾಭ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಲಾಭಕ್ಕಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ನಿರಾಣಿ ಸಮೂಹ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಸಂಗಮೇಶ ನಿರಾಣಿ, ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಜನವಾಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸದಾಶಿವ ಸವದಿ, ಎಂ.ಆರ್. ವಾಲಿ, ಮಲ್ಲಪ್ಪ ಗಣಿ, ಗುರುಪಾದಯ್ಯ ಮರಡಿಮಠ, ದಾನಪ್ಪ ಆಸಂಗಿ, ಲಕ್ಷ್ಮಣ ಸವದಿ, ಬಸಪ್ಪ ಮೆಟಗುಡ್ಡ, ಕುಮಾರ ಸವದಿ, ಸದಾಶಿವ ಮಗದುಮ್, ಬಸಪ್ಪ ಶೇಗುಣಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.