ಬಾದಾಮಿ: ’10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರದ ಅಭಿವೃದ್ಧಿಯ ಜೊತೆಗೆ ದೇಶದ ರಕ್ಷಣೆ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದ ಚಾಲುಕ್ಯ ವೇದಿಕೆಯಲ್ಲಿ ನಮೋ ಬ್ರಿಗೇಡ್ ಆಶ್ರಯದಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ದಶಕದ ಸಾಧನೆ ಕುರಿತು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಮನಕಿ ಬಾತ್ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತರು. ಕಾಂಗ್ರೆಸ್ ಪಕ್ಷದ ಪ್ರಧಾನಿಗಳಾದ ಜವಾಹರಲಾಲ ನೆಹರೂ ಅವರಿಂದ ಮನಮೋಹನ ಸಿಂಗ್ವರೆಗೆ ಜನರೊಂದಿಗೆ ಯಾರೂ ಬೆರೆಯಲಿಲ್ಲ’ ಎಂದು ಆರೋಪಿಸಿದರು.

‘ರಾಷ್ಟ್ರದ ಜನರನ್ನು ಒಗ್ಗೂಡಿಸುವ ಬದಲಿಗೆ ಕಾಂಗ್ರೆಸ್ ಪಕ್ಷದವರು ಇಂದು ಜಾತಿ ಗಣತಿ ಆರಂಭಿಸಿ ಹಿಂದೂ ಜನರನ್ನು ಒಡೆಯುವ ಹುನ್ನಾರು ನಡೆಸಿದ್ದಾರೆ. ಮುಸ್ಲಿಮರನ್ನು ಒಂದು ಮಾಡಲು ಹೊರಟಿದ್ದಾರೆ. ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಸರ್ಕಾರ ರಕ್ಷಿಸುತ್ತಿದೆ ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಸಾನ್ನಿಧ್ಯ ವಹಿಸಿದ್ದ ಕೈಲಾಸಪತಿ ಸ್ವಾಮೀಜಿ, ‘ಭಾರತದಲ್ಲಿ ಹಿಂದೂ ಧರ್ಮ ಪವಿತ್ರವಾದ ಸನಾತನ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ದಯೆ ಇದೆ. ದಯೆ ನಮ್ಮನ್ನು ಕಾಯುತ್ತದೆ. 12 ಶತಮಾನದಲ್ಲಿ ಬಸವಣ್ಣನವರು ದಯಯೇ ಧರ್ಮದ ಮೂಲವೆಂದು ಹೇಳಿದ್ದರು’ ಎಂದು ಹೇಳಿದರು.

ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಶಿವನಗೌಡ ಸುಂಕದ, ನಾಗರಾಜ ಕಾಚಟ್ಟಿ, ಹುಚ್ಚಪ್ಪ ಬೆಳ್ಳಿಗುಂಡಿ, ಮಹೇಶ ಬರಗಿ, ಕುಮಾರ ಪವಾಡಶೆಟ್ಟಿ, ಬೇಲೂರಪ್ಪ ವಡ್ಡರ, ಶಿವು ಹಾದಿಮನಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.