ಬೀಳಗಿ: ತಾಲ್ಲೂಕಿನಲ್ಲಿ ದಿನೇ ದಿನೇ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಬಿರು ಬಿಸಿಲಿಗೆ ಕೋಳಿ ಸಾಕಾಣಿಕೆ ಉದ್ಯಮ ತತ್ತರಿಸುತ್ತಿದೆ.

ಅತಿಯಾದ ಬಿಸಿಲಿನ ವಾತಾವರಣದಿಂದ ಕೋಳಿಗಳು ಮೃತಪಡುತ್ತಿವೆ. ಫಾರಂಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಕೋಳಿಗಳು ಕಂಡು ಬರುತ್ತಿಲ್ಲ. ಹಾಗಾಗಿ ಸಾಕಾಣಿಕೆದಾರರು ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಕೋಳಿಗಳ ಸಾವು ಚಿಕನ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

‘ಮಳೆ ಬಾರದಿದ್ದರೆ, ಇದೇ ರೀತಿಯಲ್ಲಿ ಬಿಸಿ ಗಾಳಿ ಮತ್ತು ಬಿಸಿಲು ಮುಂದುವರಿದರೆ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಮತ್ತಷ್ಟು ಕುತ್ತು ಬರಲಿದೆ’ ಎನ್ನುತ್ತಾರೆ ಕೋಳಿ ಸಾಕಾಣಿಕೆದಾರರು.

ತಾಲೂಕಿನಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನವಿದೆ. ಪರಿಣಾಮ ಕೋಳಿ ಫಾರಂಗಳಲ್ಲಿ ಎರಡು ತಿಂಗಳಿನಿಂದ ಸಾವಿರಾರು ಕೋಳಿಗಳು ಮೃತಪಟ್ಟಿವೆ.

ಕೋಳಿ ಸಾಕಾಣಿಕೆದಾರರು ಕೋಳಿ ಫಾರಂಗೆ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್ ಅಳವಡಿಕೆ ಮಾಡುತ್ತಿದ್ದಾರೆ. ಆಗಾಗ್ಗೆ ನೀರು ಸಿಂಪಡಿಸುತ್ತ ತಂಪು ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮರಿಗಳು ಕುಡಿಯುವ ನೀರು ಬಿಸಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಆರೈಕೆಯ ಬಗ್ಗೆ ನಿತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ.

‘ಅತಿಯಾದ ಬಿಸಿಲಿನಿಂದ ಕೋಳಿಗಳು ಆಹಾರ ತಿನ್ನುವುದು ಕಡಿಮೆಯಾಗಿದೆ. ಉಸಿರಾಟದ ತೊಂದರೆಯಾಗಿದೆ. ತೂಕದಲ್ಲಿ ಇಳಿಕೆಯಾಗುತ್ತಿದೆ. ಶೆಡ್ ಸುತ್ತಲು ಮರಗಳಿದ್ದು ತಾಪಮಾನ ಕಡಿಮೆ ಮಾಡಲು ಸ್ಪಿಂಕ್ಲರ್ ಅಳವಡಿಸಿದ್ದರೂ ಕೋಳಿಗಳು ಸಾಯುತ್ತಿವೆ. ಸುಮಾರು 10 ಸಾವಿರ ಕೋಳಿಗಳು ಇರುವ ಒಂದು ಸೆಡ್ನಲ್ಲಿ ಬಿಸಿಲ ತಾಪಕ್ಕೆ ಈಗ ನಿತ್ಯ 20 ರಿಂದ 30 ಕೋಳಿಗಳು ಸಾಯುತ್ತಿವೆ. ಕಳೆದ 30 ದಿನಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಕೋಳಿಗಳು ಸತ್ತು ಹೋಗಿವೆ’ ಎಂದು ಕೋಳಿ ಸಾಕಾಣಿಕೆದಾರ ವಿಠ್ಠಲ ಕಂಬಾರ ಅಳಲು ತೋಡಿಕೊಂಡರು.

‘ಕೋಳಿಗಳನ್ನು ಉಳಿಸಿಕೊಳ್ಳಲು ಫಾರಂ ಚಾವಣಿಗೆ ತೆಂಗಿನ ಗರಿಗಳನ್ನು ಹಾಕಿ ಸ್ಪಿಂಕ್ಲರ್ ಅಳವಡಿಸಿ ನಿರಂತರ ನೀರು ಎರಚುವುದು, ಫ್ಯಾನ್ ಮೂಲಕ ಬಿಸಿಲಿನ ಝಳ ತಗ್ಗಿಸುವ ಪ್ರಯತ್ನ ನಡೆದಿದೆೆ. ಕೆಲವರು ಮಿನಿ ಕೂಲರ್ಗಳನ್ನು ಅಳವಡಿಸಿದ್ದಾರೆ. ಇದರಿಂದ ಖರ್ಚಿನ ಪ್ರಮಾಣ ಹೆಚ್ಚಾಗಿದೆ’ ಎಂದರು.

Cut-off box - ಮುನ್ನೆಚ್ಚರಿಕೆ ಅಗತ್ಯ ‘ಕೋಳಿ ಫಾರಂಗಳಿಗೆ ತೆರಳಿ ಪರಿಶೀಲಿಸಿದ್ದೇನೆ. ತಾಲ್ಲೂಕಿನಲ್ಲಿ ತಾಪಮಾನ ಹೆಚ್ಚಿರುವ ಕಾರಣ ಕೋಳಿ ಸಾಕಾಣಿಕೆ ಉದ್ದಿಮೆದಾರರು ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಕೋಳಿ ಫಾರಂಗಳಲ್ಲಿ ತಂಪು ವಾತಾವರಣ ಶುದ್ಧ ನೀರು ಒದಗಿಸಬೇಕು. ನಿಯಮಿತವಾಗಿ ಡೋಜ ಕೊಡುವುದನ್ನು ಮರೆಯಬಾರದು’ ಎಂದು ಬೀಳಗಿಯ ಪಶು ಸಂಗೋಪನಾ ಇಲಾಖೆಯ ಎಂ.ಎನ್ ಪಾಟೀಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.