ಇಲ್ಲಿಗೆ ಬಂದು 15 ವರ್ಷ ಆಗೈತಿ. ನಮಗ ಮನಿ ಕಟ್ಟಿಕೊಳ್ಳಾಗ ಜಾಗ ಕೊಟ್ಟಿಲ್ಲ. ಇಲ್ಲಿ ಹಾವು ಚೇಳಿನ ಅಂಜಿಕಿಯೊಳಗ ಮಕ್ಕಳೊಂದಿಗೆ ಶೆಡ್ಡಿನ್ಯಾಗ ಜೀವನ ನಡಿಸಿದೀವಿ. ನಮ್ಮ ಗೋಳ ಯಾರೂ ಕೇಳೋರಿಲ್ಲ.
ಹನಮವ್ವ, ಸಂತ್ರಸ್ತೆ
ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಹಲವು ವರ್ಷವಾದರೂ ಈವರೆಗೂ ಮನೆ ಕಟ್ಟಿಕೊಳ್ಳಲು ಜಾಗ ಕಲ್ಪಿಸಿಲ್ಲ. ಜಾಗ ಕೇಳಿದರೆ ಅಧಿಕಾರಿಗಳು ಲಂಚ ಕೇಳುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ತಿರಕಪ್ಪ ಹಡಪದ, ಸಂತ್ರಸ್ತ
ಬೊಮ್ಮಣಗಿ ಪುನರ್ವಸತಿ ಕೇಂದ್ರದಲ್ಲಿ 15 ವರ್ಷಗಳಿಂದ ತಗಡಿನ ಶೆಡ್‌ನಲ್ಲಿಯೇ ವಾಸಿಸುತ್ತಿರುವ ಕುಟುಂಬಗಳು
ಬೊಮ್ಮಣಗಿ ಪುನರ್ವಸತಿ ಕೇಂದ್ರದ ಶೌಚಾಲಯದ ಸುತ್ತಲೂ ಮುಳ್ಳಿನ ಕಂಟಿಗಳು ಬೆಳೆದಿರುವುದು