ಗುಳೇದಗುಡ್ಡ: ‘ನಿಜಗುಣಪ್ರಭು ತೋಂಟದಾರ್ಯ ಶ್ರೀ ಯಾರ ಮುಲಾಜಿಗೂ ಒಳಗಾಗದೆ, ಕರಾರುವಕ್ಕಾಗಿ ಬದುಕಿನ ಸಂಗತಿ ಮತ್ತು ಇಂದಿನ ವ್ಯವಸ್ಥೆ ಕುರಿತು ಇದ್ದದ್ದು ಇದ್ದಂತೆ ಹೇಳಿ, ಮೌಲ್ಯಯುತ ಬದುಕು ನಡೆಸುವ ಬಗೆ ತಿಳಿಸಿಕೊಟ್ಟರು’ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಅವರು ಶುಕ್ರವಾರ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣಸಂಗಮ ಸಮಾರಂಭ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮಾಜದಲ್ಲಿ ಜಾತಿ, ಮತ ಮೀರಿ ನಾವೆಲ್ಲರೂ ಒಂದು ಎಂಬುದನ್ನು 12ನೇ ಶತಮಾನದ ಶರಣರು ಸಾರಿದ್ದಾರೆ. ಅವರ ಆದರ್ಶಗಳು ನಮಗೆ ಆಸರೆಯಾಗಿವೆ’ ಎಂದರು.

ಗುರುಸಿದ್ಧೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ‘ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಯೋತ್ಪಾದನೆ, ಭ್ರಷ್ಟಾಚಾರ, ಜಾತಿ, ಧರ್ಮಗಳ ಕಲಹ ಉಂಟಾಗುತ್ತಿದ್ದು ನೆಮ್ಮದಿಯ ಬದುಕು ಕಷ್ಟವಾಗಿದೆ. ಇದರಿಂದ ಹೊರಬರಲು ಪ್ರವಚನ ದಾರಿದೀಪವಾಗಲಿದೆ’ ಎಂದರು.

ಮುಂಡರಗಿ, ಬೈಲೂರ ನಿಷ್ಕಲ ಮಂಟಪ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀ ಪ್ರವಚನ ನೀಡಿ, ‘ಸನ್ಯಾಸಿಗಳಾಗುವುದು ಬಹಳ ಕಷ್ಟ. ಸನ್ಯಾಸಿಗಳದ್ದು ಮುಳ್ಳಿನ ಹಾಸಿಗೆ ಇದ್ದಂತೆ. ಸಮಾಜವನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಸ್ವಾಮೀಜಿಗಳಿಗಿರುತ್ತದೆ. ದೇಶದಲ್ಲಿ ಸ್ವಾಮಿಗಳ ಸಂಖ್ಯೆ ದುರ್ಲಬವಾಗುತ್ತಿದೆ. ಮಠಾಧಿಪತಿಗಳು ಸಿಗಬಹುದು ಆದರೆ ತತ್ವನಿಷ್ಠರರು ಸಿಗುವುದಿಲ್ಲ’ ಎಂದರು.

ಕೋಟೆಕಲ್ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀ, ಮುರುಘಾಮಠದ ಕಾಶೀನಾಥ ಶ್ರೀ, ಅಮರೇಶ್ವರಮಠದ ನೀಲಕಂಠ ಶಿವಾಚಾರ್ಯ ಶ್ರೀ, ಗುರುಬಸವ ದೇವರು ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸ್ವಾಗತ ಸಮೀತಿ ಅಧ್ಯಕ್ಷ ರಾಜು ಜವಳಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಸಂಗನಬಸಪ್ಪ ಚಿಂದಿ, ನಾಗೇಶಪ್ಪ ಪಾಗಿ, ವಿ.ಪಿ.ಅರುಟಗಿ, ಶಶಿಧರ ಜಾಲಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.