ಬಳ್ಳಾರಿ:ವಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಇಬ್ಬರು ಮೃತಪಟ್ಟ ವಿಷಯ ಗಮನಕ್ಕೆ ಬಂದಿದೆ. ಇದು ಕರೆಂಟ್ ಇಲ್ಲವೆ ಜನರೇಟರ್ ಸಮಸ್ಯೆಯಿಂದ ಸಂಭವಿಸಿದ್ದಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ಆದರೂ ಈ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ತಿಳಿಸಿದರು.

ವಿಮ್ಸ್ ಐಸಿಯುನಲ್ಲಿ ಜನರೇಟರ್ ಸಮಸ್ಯೆ ಇದೆ. ಮಂಗಳವಾರ ಕೆಎಂಇಆರ್‌ಸಿ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. 500 ಕೆ.ವಿ. ಸಾಮರ್ಥ್ಯದ ಜನರೇಟರ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೆಎಂಇಆರ್‌ಸಿ ಅನುದಾನದಡಿ ವಿಮ್ಸ್‌ಗೆ ಸಾಕಷ್ಟು ಹಣ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಮ್ಸ್‌ನಲ್ಲಿರುವ ಸೌಲಭ್ಯಗಳನ್ನು ಉತ್ತಮಪಡಿಸಲಾಗುವುದು. ಅಧಿಕ ಸಾಮರ್ಥ್ಯದ ಜನರೇಟರ್ ಸೌಲಭ್ಯ ಒದಸಿಸುವುದಾಗಿ ಮಾಲಪಾಟಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.