ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ರವೀಂದ್ರನಾಥ ಹಾಗೂ ಅಮರೇಶ ಯತಗಲ್ ಅವರು ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರವೀಂದ್ರನಾಥ ಅವರಿಗೆ ‘ಸಂಶೋಧನ ಶ್ರೀ’ ಪ್ರಶಸ್ತಿಯೊಂದಿಗೆ ₹25 ಸಾವಿರ ನಗದು, ಫಲಕ ನೀಡಲಾಗುತ್ತದೆ. ಅಮರೇಶ ಅವರಿಗೆ ‘ನಾಯಕಶ್ರೀ’ ಪ್ರಶಸ್ತಿ ಮತ್ತು ₹ 15 ಸಾವಿರ ನಗದು, ಫಲಕ ನೀಡಲಾಗುವುದು. ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ 35ನೇ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ರವೀಂದ್ರನಾಥ ಅವರು ಸಂಶೋಧನೆ,ಶಾಸನ, ಹಸ್ತಪ್ರತಿ, ಹಳೆಗನ್ನಡ, ನಡುಗನ್ನಡ, ದಾಖಲು ಸಾಹಿತ್ಯ, ಶಾಸ್ತ್ರ ಸಾಹಿತ್ಯ, ಗ್ರಂಥಸಂಪಾದನೆ ಹಾಗೂ ಇತಿಹಾಸ ಸಂಸ್ಕೃತಿಯಲ್ಲಿ ಕೆಲಸ ಮಾಡಿದ್ದಾರೆ. ಅಮರೇಶ ಯತಗಲ್,ಕರ್ನಾಟಕದ ಇತಿಹಾಸ, ಸಂಸ್ಕೃತಿ, ಶಾಸನ, ಸ್ಥಳೀಯ ಚರಿತ್ರೆ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.