ಕಂಪ್ಲಿ: ‘ನನ್ನ ಅಮಾನತು ಹಿಂದಕ್ಕೆ ಪಡೆಯುವಂತೆ ಕೆ.ಪಿ.ಸಿ.ಸಿ.ಯನ್ನು ಕೇಳುವುದಿಲ್ಲ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪಕ್ಷದ ಹಿರಿಯರು, ಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯುವೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದ್ದಾರೆ.

‘ಆಪರೇಷನ್ ಕಮಲ’ದಲ್ಲಿ ಜೆ.ಎನ್. ಗಣೇಶ್ ಅವರ ಹೆಸರು ಕೇಳಿ ಬರುತ್ತಿರುವ ನಡುವೆ ಅವರಿಂದ ಈ ಹೇಳಿಕೆ ಹೊರಬಿದ್ದಿರುವುದು ಮಹತ್ವ ಪಡೆದುಕೊಂಡಿದೆ.

‘ಆನಂದಣ್ಣ (ಶಾಸಕ ಆನಂದ್ ಸಿಂಗ್) ನಾನು ಎರಡು ದಶಕಗಳಿಂದ ಚೆನ್ನಾಗಿದ್ದೇವೆ. ನಮ್ಮಿಬ್ಬರಲ್ಲಿ ಯಾವುದೇ ವೈರತ್ವವಿಲ್ಲ. ಇಂದಿಗೂ ಫೋನ್ ಸಂಪರ್ಕದಲ್ಲಿದ್ದೇವೆ. ರೆಸಾರ್ಟ್ ಗಲಾಟೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಮೂರನೆಯವರು ಲಾಭ ಮಾಡಿಕೊಳ್ಳುವುದಕ್ಕಾಗಿ ಈ ಘಟನೆ ನಡೆದಿದೆ’ ಎಂದು ತಾಲ್ಲೂಕಿನ ರಾಮಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಿನ್ನಮತೀಯರ ಗುಂಪಿನಲ್ಲಿ ನಾನಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಲೋಕಸಭೆ ಚುನಾವಣೆಯಲ್ಲಿ ನನ್ನ ಅನುಪಸ್ಥಿತಿಯಲ್ಲಿ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿದ್ದಾರೆ. ಒಂದು ವೇಳೆ ನಾನು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರೆ ಉಗ್ರಪ್ಪ ಅವರಿಗೆ ಕನಿಷ್ಠ 40 ಸಾವಿರ ಮತಗಳ ಲೀಡ್ ತಂದು ಕೊಡುತ್ತಿದ್ದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.