ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನ ಹತ್ತಿರವಿದೆ: ಜನಾರ್ದನ ರೆಡ್ಡಿ

Published : 4 ಅಕ್ಟೋಬರ್ 2024, 13:13 IST
Last Updated : 4 ಅಕ್ಟೋಬರ್ 2024, 13:13 IST
ಫಾಲೋ ಮಾಡಿ
Comments

ಸಂಡೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು.ಇದೀಗ ನಾನು ಮತ್ತೆ ವಿಧಾನಸಭೆ ಪ್ರವೇಶಿಸಿದ್ದೇನೆ. ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುವ ದಿನ ಹತ್ತಿರವಿದೆ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಪಟ್ಟಣದ‌ ವಿಜಯ ವೃತ್ತದಲ್ಲಿ ಶುಕ್ರವಾರ ಅಭಿಮಾನಿಗಳು ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಆಗಬೇಕು ಎಂಬ ಆಶಯ ನನಗಿತ್ತು. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಿದ್ದರೂ ಸಂಡೂರಿನಿಂದ ಕೂಡ್ಲಿಗಿ, ಹೊಸಪೇಟೆ, ತೋರಣಗಲ್ಲುವರೆಗೆ ₹200 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಿಸಿದ್ದೇನೆ. ಜಿಂದಾಲ್‌ನಂತಹ ಐದಾರು ಕಾರ್ಖಾನೆಗಳು ಜಿಲ್ಲೆಗೆ ಬಂದು, ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆತು ಎಲ್ಲರೂ ಚೆನ್ನಾಗಿ ಬದುಕಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ನನ್ನ ಆಸೆ, ಆಕಾಂಕ್ಷೆಗಳನ್ನು ಹಾಳು ಮಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಆ ದೇವರು ಈಗ ಅಧಿಕಾರವಿಲ್ಲದೆ ಮನೆಯಲ್ಲಿ ಕೂರಿಸಿದ್ದಾನೆ’ ಎಂದು ಟೀಕಿಸಿದರು.

‘ಒಬ್ಬರ ಜೀವನ ಹಾಳು ಮಾಡಿದರೆ ಭಗವಂತ ನಮಗೂ ಶಿಕ್ಷೆ ಕೊಡುತ್ತಾನೆ ಎಂಬುದಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಸಂಡೂರು ಕ್ಷೇತ್ರದ ಪ್ರತಿ ಹಳ್ಳಿಗೂ, ಮನೆ ಮನೆಗೂ ಬರುತ್ತೇನೆ. ಬಿಜೆಪಿಗೆ ಜನರ ಆಶೀರ್ವಾದ ಕೋರುತ್ತೇನೆ’ ಎಂದರು.

ಇದಕ್ಕೂ ಮುನ್ನ ಪಟ್ಟಣದ ವಿರಕ್ತಮಠಕ್ಕೆ ಭೇಟಿ ನೀಡಿ ಪ್ರಭು ಶ್ರೀಗಳ ಆಶೀರ್ವಾದ, ಹಾಗೂ ಬೆಟ್ಟದ ಮೇಲಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

ಬಿಜೆಪಿ ಮುಖಂಡರಾದ ಕೆ.ಎಸ್ ದಿವಾಕರ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರಿ ಹನುಮಂತ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ ಪಂಪಾಪತಿ, ಮುಖಂಡರಾದ ವಿಠಲಾಪುರ ತಿರುಮಲ, ಜಿಸಿಬಿ ರಾಮಕೃಷ್ಣ, ಹುಡೇದ ಸುರೇಶ, ಕರಡಿ ಯರ‍್ರಿಸ್ವಾಮಿ, ಗುಡೇಕೋಟೆ ನಾಗರಾಜ, ಅಂಬರೀಶ, ಚೋರನೂರು ಅಡಿವೆಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT