ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ವಿತರಿಸಲು ಸರ್ಕಾರ ಕಳುಹಿಸಿಕೊಟ್ಟಿದ್ದ ಬೈಸಿಕಲ್‌ಗಳನ್ನು ಶನಿವಾರ ಅವರಿಂದಲೇ ವಾಹನದಿಂದ ಕೆಳಗಿಳಿಸಿಕೊಂಡಿದ್ದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮಿನಿ ಟೆಂಪೋದಲ್ಲಿ ತಂದಿದ್ದ ಬೈಸಿಕಲ್‌ಗಳನ್ನು ಶಾಲೆಯ ವಿದ್ಯಾರ್ಥಿನಿಯರ ಸಹಾಯದಿಂದ ಇಳಿಸಿಕೊಳ್ಳಲಾಗಿದೆ. ಶಾಲೆಗೆ ಓದುವುದಕ್ಕೆಂದು ಕಳಿಸುವ ಮಕ್ಕಳಿಂದ ಈ ರೀತಿ ಕೆಲಸ ಮಾಡಿಸಿಕೊಳ್ಳುವುದು ಸರಿಯಲ್ಲ. ಅದು ಕೂಡ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದು ಸ್ಥಳೀಯ ನಿವಾಸಿ ರಾಚಯ್ಯ, ಬಸವರಾಜ ಅಸಮಾಧಾನ ಹೊರ ಹಾಕಿದರು.

ಈ ಕುರಿತು ಶಾಲೆಯ ಮುಖ್ಯಶಿಕ್ಷಕಿ ಸುಧಾ ಅವರನ್ನು ಸಂಪರ್ಕಿಸಿದಾಗ, ‘ಬೈಸಿಕಲ್‌ಗಳು ಬಂದಾಗ ಶಾಲೆಯಲ್ಲಿ ಸಭೆ ನಡೆಯುತ್ತಿತ್ತು. ನಾನು ಸೇರಿದಂತೆ ಇತರೆ ಸಿಬ್ಬಂದಿ ಅಲ್ಲಿದ್ದೆವು. ವಾಹನದಲ್ಲಿ ಬೈಸಿಕಲ್‌ಗಳು ಬಂದದ್ದನ್ನು ನೋಡಿ ವಿದ್ಯಾರ್ಥಿನಿಯರು ಖುಷಿಯಿಂದ ಅಲ್ಲಿ ಓಡಿ ಹೋಗಿದ್ದಾರೆ ಹೊರತು ಅವುಗಳನ್ನು ಕೆಳಗಿಳಿಸಿಕೊಂಡಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.