ಕುರುಗೋಡು: ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಿಂದ ಕಳಪೆ ಭತ್ತ ಬೀಜ ಮಾರಾಟ ಮಾಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದವರು ಆರೋಪಿಸಿರುವ ಹಿನ್ನೆಲೆ ಕೃಷಿ ಅಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮಗಳ ಭತ್ತದ ಗದ್ದೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಸೋನಾ ಮಸೂರಿ ಭತ್ತದ ಬೀಜ ಎಂದು ಮಾರಾಟ ಮಾಡಿದ್ದು, ಅದರಲ್ಲಿ ಆರ್.ಆರ್.ಸೋನಾ ಮಸೂರಿ, ಜೈಜೈ ಸೋನಾ ಮಸೂರಿ, ನೆಲ್ಲೂರು ಸೋನಾ ಮಸೂರಿ, ಗಂಗಾವತಿ ಸೋನಾ ಮಸೂರಿ ಬೀಜ ಕಲಬೆರೆಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕೆ.ಪಿ.ಆರ್.ಎಸ್ ಪದಾಧಿಕಾರಿಗಳು ದೂರಿದ್ದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ತಜ್ಞರಾದ ಗಿರೀಶ್ ಮತ್ತು ಕೃಷ್ಣಮೂರ್ತಿ, ಬಳ್ಳಾರಿ ಕೃಷಿ ಇಲಾಖೆಯ ಬಿ.ಡಿ. ಮಂಜುನಾಥ ಎಂ.ಡಿ.ಎ ದಯಾನಂದ ಮತ್ತು ದೇವರಾಜ ಅವರ ತಂಡವು ಬಾದನಹಟ್ಟಿ ಗ್ರಾಮದ ರೈತರಾದ ಗಾಳಿ ನಾರಾಯಣಪ್ಪ ಗೊರವರ ಗಾಂದಿಲಿಂಗಪ್ಪ ಅವರ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತ ವರದಿಯನ್ನು 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸುವುದಾಗಿ ರೈತರಿಗೆ ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ಕರ್ನಾಟಕ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರ ಮೂಲಕ ಕಳಪೆ ಭತ್ತದ ಬೀಜ ಮಾರಾಟವಾಗಿದ್ದು, ಸಮಗ್ರ ತನಿಖೆಗೊಳಪಡಿಸಬೇಕು. ಈ ಭತ್ತದ ಬೀಜ ಖರೀದಿಸಿ ನಾಟಿ ಮಾಡಿದ ರೈತರಿಗೆ ಎಕರೆಗೆ ರೂ. 50,000ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಕರಿಯಪ್ಪ, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.