ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ | ನದಿಪಾತ್ರದ ಜನ ಎಚ್ಚರವಹಿಸಲು ಸೂಚನೆ

Published 23 ಜುಲೈ 2024, 14:35 IST
Last Updated 23 ಜುಲೈ 2024, 14:35 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯ ಶೀಘ್ರವೇ ತುಂಬುವ ಸಾಧ್ಯತೆ ಇದೆ. ಸೋಮವಾರ ಮೂರು ಕ್ರಸ್ಟ್‌ಗೇಟ್‌ಗಳ ಮೂಲಕ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ಸಿರುಗುಪ್ಪ ತಹಶೀಲ್ದಾರ್ ಎಚ್ ವಿಶ್ವನಾಥ ತಿಳಿಸಿದ್ದಾರೆ.

ಸಮೀಪದ ತುಂಗಭದ್ರಾ ನದೀಪಾತ್ರದ ಎಂ.ಸೂಗೂರು, ನಡಿವಿ, ನಿಟ್ಟೂರು, ಉಡೆಗೋಳ ಗ್ರಾಮಗಳಿಗೆ ಭೇಟಿ ನೀಡಿದ ಅವರು ಸಾರ್ವಜನಿಕರಿಗೆ ನದಿಗೆ ಇಳಿಯದಂತೆ ಲಿಖಿತ ಹಾಗೂ ಮೌಖಿಕವಾಗಿ ಎಚ್ಚರಿಕೆ ನೀಡಿದರು.

ಈಗಾಗಲೆ ನದಿಯಲ್ಲಿ ಮೊಸಳೆಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಜಾನುವಾರುಗಳಿಗೆ ನೀರಿಗೆ ಕರೆದುಕೊಂಡು ಹೋಗುವ ರೈತರು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಎಂ. ಸೂಗೂರು ಗ್ರಾಮದ ಜಾತಿ ಪ್ರಮಾಣ ಪತ್ರ ದುರ್ಬಳಕೆಯ ಎರಡು ಪ್ರಕರಣ ಕುರಿತು ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT