ಹೊಸಪೇಟೆ: ಹೊಸ ವಿದ್ಯುದ್ದೀಪ ಅಳವಡಿಸಿದ್ದರಿಂದ ಈ ಭಾಗದ ಆರಾಧ್ಯ ದೈವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ ಬೆಳಕಿನಿಂದ ಕಂಗೊಳಿಸುತ್ತಿದೆ.

‘ಕತ್ತಲಲ್ಲಿ ಹಂಪಿ ವಿರೂಪಾಕ್ಷ ಗೋಪುರ’ ಶೀರ್ಷಿಕೆ ಅಡಿ ಶುಕ್ರವಾರ (ಅ.9) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್ ಅವರು, ಶುಕ್ರವಾರ ಹೊಸ ವಿದ್ಯುದ್ದೀಪಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಗೋಪುರದ ತುತ್ತ ತುದಿಯಲ್ಲಿ ಸದಾ ಉರಿಯುವ ವಿದ್ಯುದ್ದೀಪ ನೋಡಿ ಸುತ್ತಲಿನ ಅನೇಕ ಗ್ರಾಮಸ್ಥರು ಸಂಜೆಯಾದೊಡನೆ ಕೈಮುಗಿಯುವ ಪರಂಪರೆ ಇದೆ. ಆದರೆ, ತಿಂಗಳ ಹಿಂದೆ ವಿದ್ಯುದ್ದೀಪ ಕೆಟ್ಟು ಹೋಗಿ ಗೋಪುರದ ಮೇಲೆ ಕತ್ತಲು ಆವರಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.