ಬಳ್ಳಾರಿ: ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಲು ಕಾರಣಕರ್ತರಾದ ಆನಂದ್ಸಿಂಗ್ ಅವರಿಗೇ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸೋಮಶೇಖರ ರೆಡ್ಡಿ, ತಕ್ಷಣ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆ ಒಡೆದ ಆನಂದ್ಸಿಂಗ್ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿರುವುದಕ್ಕೆ ಜನರಿಗೆ ಸಿಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಸ್ಥಿತಿ ಅರ್ಥಮಾಡಿಕೊಂಡು ಉಸ್ತುವಾರಿಯನ್ನು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ವಹಿಸಬೇಕೆಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಆಗ್ರಹಿಸಿದರು.

ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದಾಗ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕೆಂದು ಒತ್ತಾಯಿಸಲಿಲ್ಲ. ಈ ವಿಷಯ ಚರ್ಚಿಸಲು ಅದು ಸೂಕ್ತ ಸ್ಥಳವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಜಿಲ್ಲಾ ಬಿಜೆಪಿ ಮುಖಂಡರ ಜತೆಗೂಡಿ ಶೀಘ್ರವೇ ಬೆಂಗಳೂರಿಗೆ ಹೋಗಿ ಬೊಮ್ಮಾಯಿ ಅವರ ಮುಂದೆ ಬೇಡಿಕೆ ಇಡುವುದಾಗಿ ಸೋಮಶೇಖರರೆಡ್ಡಿ ತಿಳಿಸಿದರು.

ಜಿಲ್ಲಾ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ಕೊಡುವುದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನೂರಕ್ಕೆ ನೂರರಷ್ಟು ಲಾಭವಾಗಲಿದೆ ಎಂದು ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.

ಖಾತೆ ಹಂಚಿಕೆ: ಇನ್ನೂ ತಣಿಯದ ಅಸಮಾಧಾನ, ಸಿಎಂ ಭೇಟಿಯಾಗದ ಆನಂದ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.