ಹೂವಿನಹಡಗಲಿ: ತಾಲ್ಲೂಕಿನ ಭೀತ್ಯಾನ ತಾಂಡದಲ್ಲಿ ಹಾವು ಕಚ್ಚಿ ವಿದ್ಯಾರ್ಥಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮನುಕುಮಾರ್ ರಾಮನಾಯ್ಕ(17) ಮೃತರು. ಮಂಗಳವಾರ ರಾತ್ರಿ ಹೊಲದಲ್ಲಿನ ಮೋಟಾರ್ ಚಾಲು ಮಾಡಲು ತೆರಳಿದ್ದ ವೇಳೆ ಯುವಕನಿಗೆ ವಿಷಜಂತು ಕಚ್ಚಿದ ಅನುಭವವಾಗಿದೆ. ನಂತರ ಅದನ್ನು ನಿರ್ಲಕ್ಷಿಸಿ ಮನೆಗೆ ಬಂದು ಮಲಗಿದಾಗ ಯುವಕ ತೀವ್ರ ಅಸ್ವಸ್ಥಗೊಂಡಿದ್ದಾನೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮನುಕುಮಾರ್ ಮೃತಪಟ್ಟಿದ್ದಾನೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.