ಬಳ್ಳಾರಿ: ತೀವ್ರ ಹಣಾಹಣಿಯಿಂದ ಕೂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಬೆವರಿನ ಜೊತೆ ದುಡ್ಡನ್ನೂ ಹರಿಸಿದ್ದರು. ಕ್ಷೇತ್ರದಲ್ಲಿ ಕೋಟಿ ಲೆಕ್ಕದಲ್ಲಿ ಖರ್ಚಾಗಿದೆ ಎಂದು ಪಕ್ಷಗಳ ಮುಖಂಡರೇ ಹೇಳುತ್ತಾರೆ. ಆದರೆ, ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರದಲ್ಲಿ ಮಾತ್ರ ಯಾರೂ ₹95 ಲಕ್ಷದ ಮಿತಿ ದಾಟಿಲ್ಲ.

ವಿಜೇತ ಅಭ್ಯರ್ಥಿ, ಕಾಂಗ್ರೆಸ್ನ ಇ. ತುಕಾರಾಂ ಅವರೇ ಕ್ಷೇತ್ರದಲ್ಲಿ ಹೆಚ್ಚು ವೆಚ್ಚ ಮಾಡಿದ ಅಭ್ಯರ್ಥಿ. ಅವರ ಒಟ್ಟು ವೆಚ್ಚ ₹91,93,443. ಅವರು ಸಾರ್ವಜನಿಕ ಸಭೆ, ರ್ಯಾಲಿ, ಮೆರವಣಿಗೆಗೆ ₹24,28,071 ಖರ್ಚು ಮಾಡಿದ್ದಾರೆ. ವಿಶೇಷವೆಂದರೆ, ಸಭೆ, ಸಮಾವೇಶಕ್ಕಿಂತಲೂ ಅವರು ವಾಹನಗಳಿಗಾಗಿಯೇ ಹೆಚ್ಚು ವೆಚ್ಚ (₹31,77,600) ಮಾಡಿದ್ದಾರೆ.

ತುಕಾರಾಂ ಪರವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ತಾರಾ ಪ್ರಚಾರಕರು ಪ್ರಚಾರ ಮಾಡಿದ್ದರು. ಅವರ ಕಾರ್ಯಕ್ರಮಗಳಿಗೆ ತುಕಾರಾಂ ಮಾಡಿದ ಖರ್ಚು ₹15,72,569 ಮಾತ್ರ.

ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಕೇಬಲ್ ನೆಟ್ವರ್ಕ್ಗಳ ಮೂಲಕ ನಡೆಸಿದ ಪ್ರಚಾರಕ್ಕಾಗಿ ಅವರು ₹3 ಲಕ್ಷ ಖರ್ಚು ಮಾಡಿದ್ದಾರೆ. ಒಟ್ಟು ವೆಚ್ಚದಲ್ಲಿ ಅವರು ತಮ್ಮ ಖಾತೆಯಲ್ಲಿ ₹32,39,094 ತೋರಿಸಿದ್ದರೆ, ₹59,44,349 ಹಣವನ್ನು ಇತರರ ಕಾಲಂನಲ್ಲಿ ತೋರಿಸಿದ್ದಾರೆ.

ಶ್ರೀರಾಮುಲು ವೆಚ್ಚ ₹76.75 ಲಕ್ಷ: ಲೋಕಸಭಾ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆ ಸೋಲಿನ ಕಹಿ ಮರೆಯಬೇಕು ಎಂದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಚುನಾವಣೆಗಾಗಿ ಮಾಡಿರುವ ವೆಚ್ಚ ₹76,75,154. ಇದರಲ್ಲಿ ಸಿಂಹ ಪಾಲು ತಾರಾ ಪ್ರಚಾರಕರಿದ್ದ ಸಮಾವೇಶಕ್ಕೆ ಖರ್ಚಾಗಿದೆ. ಇಂಥ ಸಮಾವೇಶಕ್ಕೆ ಅವರು ಪಕ್ಷದಿಂದ ₹26,50,353 ವ್ಯಯಿಸಿದ್ದಾರೆ. ಸಾರ್ವಜನಿಕ ಸಭೆ, ಸಮಾವೇಶ, ರ್ಯಾಲಿಗಳಿಗೆ ₹19,04,079 ಖರ್ಚು ಮಾಡಿದ್ದಾರೆ. ವಾಹನಗಳ ಬಳಕೆಗಾಗಿ ₹15,24,525 ವಿನಿಯೋಗಿಸಿದ್ದಾರೆ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ₹1,04,508 ವ್ಯಯಿಸಿದ್ದಾರೆ.

ಶ್ರೀರಾಮುಲು ಅವರು ಒಟ್ಟು ವೆಚ್ಚದಲ್ಲಿ ₹27,45,387 ಮಾತ್ರ ತಮ್ಮ ಕೈಯಿಂದ ಹಾಕಿದ್ದು, ಇನ್ನುಳಿದ ₹32,68,953 ಅನ್ನು ಬಿಜೆಪಿ ವ್ಯಯಿಸಿದೆ. ಅದನ್ನು ರಾಮುಲು ಅವರ ಲೆಕ್ಕಕ್ಕೇ ಹಾಕಲಾಗಿದೆ. ಬಾಕಿ ₹16,60,814ವನ್ನು ಇತರರ ಕಾಲಂನಲ್ಲಿ ತೋರಿಸಲಾಗಿದೆ.

ಇವೂ ಲೆಕ್ಕಕ್ಕೆ ಬರುತ್ತವೆ: ಅಭ್ಯರ್ಥಿ ನಡೆಸುವ ರ್ಯಾಲಿ, ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆಗೆ ಮಾಡುವ ಖರ್ಚು, ಪ್ರಚಾರ ಸಾಮಗ್ರಿಗಳಾದ ಕರಪತ್ರ, ಪೋಸ್ಟರ್, ವಿಡಿಯೊ ಮತ್ತು ಆಡಿಯೊ ಕ್ಯಾಸೆಟ್ಗಳು, ಧ್ವನಿವರ್ಧಕಕ್ಕೆ ಮಾಡುವ ವೆಚ್ಚ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ನೀಡುವ ಶುಲ್ಕವೂ ಚುನಾವಣಾ ವೆಚ್ಚಕ್ಕೆ ಸೇರುತ್ತದೆ. ಪ್ರಚಾರದಲ್ಲಿ ಭಾಗವಹಿಸುವ ಕಾರ್ಯಕರ್ತರ ಸಂಖ್ಯೆ, ವಾಹನಗಳ ಬಾಡಿಗೆ, ಕಟೌಟ್, ಬ್ಯಾನರ್ಗಳಿಗಾಗಿ ಮಾಡುವ ಖರ್ಚು ಸೇರಿದಂತೆ ಸಣ್ಣಪುಟ್ಟ ಖರ್ಚಿನ ಲೆಕ್ಕವನ್ನು ಇದರಲ್ಲಿ ಕೂಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.