ಬಳ್ಳಾರಿ: ಬಳ್ಳಾರಿಯ ‘ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ’ದ ವ್ಯಾಪ್ತಿಯ ಕಾಲೇಜುಗಳಲ್ಲಿ ಮಂಗಳವಾರ ನಿಗದಿಯಾಗಿದ್ದ ಬಿ.ಎ ಮೂರನೇ ಸೆಮಿಸ್ಟರ್ನ ಸಾಮಾಜಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿದೆ.

ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಒಂದನೇ ಸೆಮಿಸ್ಟರ್ನ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗಿತ್ತು. ಈ ವಿಷಯವನ್ನು ವಿ.ವಿ ವ್ಯಾಪ್ತಿಯ ಕಾಲೇಜುಗಳು ಕುಲಸಚಿವರ ಗಮನಕ್ಕೆ ತಂದಿದ್ದವು. ಹೀಗಾಗಿ, ಕೂಡಲೇ ಪರೀಕ್ಷೆ ರದ್ದು ಮಾಡಲಾಯಿತು. ಪರೀಕ್ಷೆ ನಡೆಯುವ ಮುಂದಿನ ದಿನವನ್ನು ತಿಳಿಸುವುದಾಗಿ ಕಾಲೇಜುಗಳಿಗೆ ವಿ.ವಿ ಸುತ್ತೋಲೆ ರವಾನಿಸಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ ರಮೇಶ್ ಓಲೆಕಾರ್, ‘ಪ್ರಶ್ನೆಪತ್ರಿಕೆ ದೋಷ ಕಂಡು ಬಂದ ಕೂಡಲೇ ಪರೀಕ್ಷೆ ರದ್ದು ಮಾಡಲಾಯಿತು. ನಿಗದಿತ ಎಲ್ಲ ಪರೀಕ್ಷೆಗಳೂ ಮುಗಿದ ಬಳಿಕ ಸದ್ಯ ರದ್ದಾಗಿರುವ ಸಮಾಜಶಾಸ್ತ್ರ ಪರೀಕ್ಷೆ ನಡೆಸಲಾಗುವುದು. ಲೋಪಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ವಿಜಯನಗರ ಶ್ರೀ ಕೃಷ್ಣ ದೇವರಾಯ ವಿ.ವಿ ವ್ಯಾಪ್ತಿಗೆ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ 108 ಕಾಲೇಜುಗಳು ಒಳಪಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.