ಕಂಪ್ಲಿ: ಗಲಭೆ ಪೀಡಿತ ಸಮೀಪದ ಗೋನಾಳು ಗ್ರಾಮದ ಹರಿಜಕೇರಿಯ 54ದಲಿತ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳ ವಾರ ಪಡಿತರ ವಿತರಿಸಲಾಯಿತು.

ದಲಿತ ಕುಟುಂಬಗಳ ಅನೇಕ ಹಿರಿಯರು ಗುಂಪು ಘರ್ಷಣೆ ನಂತರ ಗ್ರಾಮ ತೊರೆದಿದ್ದು, ಮಹಿಳೆ ಮಕ್ಕಳು ಮನೆಯಲ್ಲಿ ನೆಲೆಸಿದ್ದಾರೆ. ಈ ಕುರಿತು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಯ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದ ನಂತರ ಪಡಿತರ ವಿತರ ಣೆಗೆ ಇಲಾಖೆ ಕ್ರಮ ತೆಗೆದುಕೊಂಡಿದೆ.

ಗ್ರಾಮದ 54 ಕುಟುಂಬಗಳಿಗೆ ತಲಾ 10 ಕೆ.ಜಿ ಅಕ್ಕಿ ಹಾಗೂ ಪ್ರತಿ 1ಕೆ.ಜಿಯಂತೆ ಬೇಳೆ, ಸಕ್ಕರೆ, ಟೀ ಪುಡಿ, ಖಾರಪುಡಿ ಮತ್ತು ಉಪ್ಪು ವಿತರಿಸಲಾಯಿತು ಎಂದು ಹೊಸಪೇಟೆಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಹುಣಸಗಿ ತಿಳಿಸಿದರು. ಇಲಾಖೆ ಎಸ್‌ಡಿಎ ಕೊಟ್ರೇಶ್ ಹಾಜರಿದ್ದರು.

ಆಗ್ರಹ: ಗೋನಾಳು ಗ್ರಾಮದ ಹರಿಜನ ಕೇರಿಯಲ್ಲಿ ಶಿಶು, ಬಾಣಂತಿ ಮತ್ತು ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಾರಣ ತುರ್ತಾಗಿ ಸಂಬಂಧಿ ಸಿದ ವೈದ್ಯರನ್ನು ಕಳುಹಿಸಿಕೊಡುವಂತೆ ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ ಆಗ್ರಹಿಸಿದರು.

ಹಾಲಿ ಗುಂಪು ಘರ್ಷಣೆಯಲ್ಲಿ ಗಾಯಗೊಂಡ ಆರು ಜನ ದಲಿತರ ದೂರು ಸ್ವೀಕರಿಸುವಂತೆ ಮುಖಂಡರಾದ ವಸಂತರಾಜ ಕಹಳೆ, ರಾಮು, ಪೇಂಟರ್ ನೀಲಪ್ಪ, ಶಾಂತಪ್ಪ ಪೂಜಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.