ವಿಜಯಪುರ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಸಿಗುವಸಹಾಯಧನವನ್ನು ಬ್ಯಾಂಕುಗಳ ಮೂಲಕ ಸಾಲದೊಂದಿಗೆ ಪಡೆದುಕೊಂಡು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಗ್ರಾಮಾಂತರ ಜಿಲ್ಲಾ ಅಧಿಕಾರಿ ಎಚ್. ಲಕ್ಷ್ಮೀ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬಾಲೇಪುರ ಗ್ರಾಮದಲ್ಲಿ ಶನಿವಾರ ಸಿಎಂಇಜಿಪಿ (ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆ) ಯಿಂದ ಸಹಾಯಧನ ಪಡೆದುಕೊಂಡು ಅಡಿಕೆ ಎಲೆಯಿಂದ ತಟ್ಟೆ ತಯಾರಿಸುವ ಘಟಕವನ್ನು ಸ್ಥಾಪಿಸಿರುವ ರಾಧಮ್ಮ ಅವರ ಘಟಕವನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುವ ಮುನ್ನಾ ತಮ್ಮ ವ್ಯಾಪ್ತಿಗೆ ಬರುವ ಬ್ಯಾಂಕುಗಳಲ್ಲಿನ ವ್ಯವಹಾರಗಳ ಕುರಿತು ಪರಿಶೀಲನೆ ಮಾಡಿಕೊಳ್ಳಬೇಕು. ಒಂದು ವೇಳೆ ಬ್ಯಾಂಕುಗಳಿಂದ ಈ ಮೊದಲೇ ಸಾಲಗಳನ್ನು ಪಡೆದುಕೊಂಡು ಸುಸ್ತಿಯಾಗಿರುವವರು, ಇತರರಿಗೆ ಜಾಮೀನು ನೀಡಿರುವವರು, ವ್ಯವಸ್ಥಾಪಕರೊಂದಿಗೆ ಮೊದಲು ಚರ್ಚೆ ನಡೆಸಿಕೊಳ್ಳಬೇಕು.ಪ್ರತಿಯೊಬ್ಬರು ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ ಎಂದರು.

ಸಿಎಂಇಜಿಪಿ ಮತ್ತು ಪಿಎಂಇಜಿಪಿ ಎರಡೂ ಘಟಕಗಳು ಒಂದೇ ಆಗಿವೆ. ಆದ್ದರಿಂದ ಆನ್ಲೈನ್ನಲ್ಲೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ.ತರಬೇತಿಯಲ್ಲಿ ಆಯ್ಕೆಯಾಗಿರುವ ಅರ್ಜಿದಾರರ ದಾಖಲೆಯುಳ್ಳ ಕಡತಗಳನ್ನು ನೇರವಾಗಿ ಅರ್ಜಿಯಲ್ಲಿ ನಮೂದು ಮಾಡಿರುವ ಬ್ಯಾಂಕುಗಳಿಗೆ ಕಳುಹಿಸಿಕೊಡಲಾಗುತ್ತದೆ. ಬ್ಯಾಂಕುಗಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಸಾಲ ಕೊಡುವ ಪತ್ರವನ್ನು ಇಲಾಖೆಗೆ ರವಾನಿಸಿದ ನಂತರ ಸಹಾಯಧನ ಬಿಡುಗಡೆಯಾಗಲಿದೆ.

ಯಾವ ಉದ್ದೇಶಕ್ಕಾಗಿ ಸಾಲ ಪಡೆದುಕೊಳ್ಳುತ್ತಾರೋ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಘಟಕಗಳ ಸ್ಥಾಪನೆಯಾದ ನಂತರ ಪರಿಶೀಲನೆ ಮಾಡಿದ ನಂತರವೇ ಉಳಿದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು. ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರ ಸಂದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಘಟಕ ಸ್ಥಾಪನೆ ಮಾಡಿಕೊಂಡಿರುವ ರಾಧಮ್ಮ ಮಾತನಾಡಿ, ಉದ್ಯೋಗವಿಲ್ಲದೆ ಬದುಕಲು ಬೇರೆ ದಾರಿಯಿಲ್ಲದ ಕಂಗಾಲಾಗಿದ್ದೆವು. ನಾವು ಎಲ್ಲೂ ಸಾಲ ಪಡೆದುಕೊಂಡಿರಲಿಲ್ಲ, ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಸಹಾಯಧನ ಪಡೆದುಕೊಂಡು ವಿಜಯಾ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆದುಕೊಂಡು ಅಡಿಕೆ ಪಟ್ಟೆಗಳಲ್ಲಿ ತಟ್ಟೆಗಳು ಮಾಡುವ ಘಟಕ ಸ್ಥಾಪನೆ ಮಾಡಿಕೊಂಡಿದ್ದೇವೆ ಎಂದರು.

ನೂತನವಾಗಿ ಅರ್ಜಿ ಸಲ್ಲಿಸಲು ಬಯಸುವವರು : www.cmegp.kar.nic.in ಗೆ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ 9840825612 ಗೆ ಸಂಪರ್ಕ ಮಾಡಬಹುದುದಾಗಿದೆ ಎಂದು ತಿಳಿಸಿದ್ದಾರೆ.

ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿ ವೇಣುಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.