ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ.ಎಂ.ರಾಜಪ್ಪ ಹೋರಾಟಗಾರ ಬುಳ್ಳಹಳ್ಳಿ
ಹೆದ್ದಾರಿಯಲ್ಲಿ ಅಪಘಾತಗಳಾದಾಗ ಮಾತ್ರ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಇತ್ತ ಕಡೆ ಗಮನಹರಿಸುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ನ್ಯಾಯಾಲಯದ ಮೊರೆ ಹೋಗುವುದು ನಮಗೆ ಅನಿವಾರ್ಯ.ಆರ್.ಅಮರನಾಥ್ ವೆಂಕಟಗಿರಿಕೋಟೆ ಗ್ರಾ.ಪಂ.ಸದಸ್ಯ
ಹೆದ್ದಾರಿಯಲ್ಲಿ ಸ್ಕೈವಾಕ್ ನಿರ್ಮಾಣದ ಜೊತೆಗೆ ಸಿಗ್ನಲ್ ದೀಪ ಅಳವಡಿಸಿದರೆ ರಸ್ತೆ ದಾಟುವುದಕ್ಕೆ ಅನುಕೂಲವಾಗುತ್ತದೆ. ವಾಹನ ಸವಾರರೂ ನಿರ್ಭಯವಾಗಿ ಹೋಗಬಹುದು.ಆನಂದಮ್ಮ ಸ್ಥಳೀಯರು
ಬುಳ್ಳಹಳ್ಳಿ ಗೇಟ್ ನಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸುತ್ತಿದ್ದು ಅಪಘಾತಗಳ ತಡೆಗಾಗಿ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರಗಳು ಬರೆದಿದ್ದೇವೆ.ಆರ್.ಜಿ.ಸೌಮ್ಯ ಪಿಡಿಓ ಹಾರೋಹಳ್ಳಿ ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.