ಆನೇಕಲ್: ಎಡಗಾಲಿಗೆ ಪೆಟ್ಟುಬಿದ್ದಿದ್ದ, ಬನ್ನೇರುಘಟ್ಟ ಜೈವಿಕ ಉದ್ಯಾನದ ಕೃಷ್ಣಮೃಗಕ್ಕೆ ವೈದ್ಯರ ತಂಡ ಭಾನುವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ಉದ್ಯಾನದ ವೈದ್ಯರಾದ ಡಾ.ಉಮಾಶಂಕರ್ ಮತ್ತು ಡಾ.ವಿಜಯ್ ತಂಡದವರು ಶಸ್ತ್ರಚಿಕಿತ್ಸೆ ನಡೆಸಿದ್ದು, ಕೃಷ್ಣಮೃಗದ ಕಾಲಿನ ಮುರಿದಿದ್ದ ಮೂಳೆಯನ್ನು ಜೋಡಿಸಿದ್ದಾರೆ.

ಜೈವಿಕ ಉದ್ಯಾನದ ಸಸ್ಯಹಾರಿ ಸಫಾರಿಯಲ್ಲಿ 80 ಕ್ಕೂ ಹೆಚ್ಚು ಕೃಷ್ಣಮೃಗಗಳಿದ್ದು ಕೆಲವೊಮ್ಮೆ ಪರಸ್ಪರ ಕಾದಾಟದಲ್ಲಿ ಗಾಯಮಾಡಿಕೊಳ್ಳುವುದು ಸಾಮಾನ್ಯ ಸಂಗತಿ.

ಕೃಷ್ಣಮೃಗ ಗಾಯಗೊಂಡಿರುವುದು ಕಂಡು ಬರುತ್ತಿದ್ದಂತೆ ಉದ್ಯಾನದ ವೈದ್ಯರು ಪಶುವೈದ್ಯಕೀಯ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.