ಆನೇಕಲ್: ದೀಪಾವಳಿ ಅಂಗವಾಗಿ ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮಂಗಳವಾರ ಪ್ರವಾಸಿಗರ ವೀಕ್ಷಣೆಗೆ ತೆರದಿರಲಿದೆ.

ಪ್ರತಿ ಮಂಗಳವಾರ ಬನ್ನೇರುಘಟ್ಟ ಉದ್ಯಾನಕ್ಕೆ ರಜೆ ಇರುತ್ತದೆ. ಆದರೆ ನವೆಂಬರ್ 14ರ ಮಂಗಳವಾರ ದೀಪಾವಳಿ ಹಬ್ಬ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿರುವ ನಿರೀಕ್ಷೆಯಿಂದ ಮಂಗಳವಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಉದ್ಯಾನವನ, ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ತೆರೆದಿರುತ್ತವೆ. ನ.15ರ ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರಜೆ ನಿಗದಿ ಮಾಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುವುದಿಲ್ಲ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪಕ್ರಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.