ಸೂಲಿಬೆಲೆ: ಇಲ್ಲಿನ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆ ಆವರಣದಲ್ಲಿ ಸೋಮವಾರ ಮಕ್ಕಳ ಸಂತೆ ನಡೆಯಿತು.

ಸಂತೆಯಲ್ಲಿ ಮಕ್ಕಳು ಸೊಪ್ಪು, ತರಕಾರಿ, ಹಣ್ಣು, ಪಾನಿಪುರಿ, ಬೇಲ್ ಪುರಿ, ಜ್ಯೂಸ್, ಕಡಲೇ ಕಾಯಿ, ಹುರಿದ ಕಡಲೇ ಕಾಯಿ ಸೇರಿದಂತೆ ಹಲವು ರೀತಿಯ ಪದಾರ್ಥಗಳನ್ನ ಮಾರಾಟ ಮಾಡಿ ಗಮನ ಸೆಳೆದರು.

ಶಾಲೆಗಳಲ್ಲಿ ಮಕ್ಕಳ ಸಂತೆ ಆಯೋಜಿಸಿರುವುದರಿಂದ ಅವರಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚುತ್ತದೆ. ವ್ಯಾಪಾರದ ಕಲೆ, ಹಣಕಾಸಿನ ವ್ಯವಹಾರ, ಲಾಭ–ನಷ್ಟದ ಬಗ್ಗೆ ತಿಳಿಯಲು ಸಹಕಾರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎ.ಜನಾರ್ಧನ್ ರೆಡ್ಡಿ ಹೇಳಿದರು.

ಶಾಲೆಯಲ್ಲಿ ಪ್ರತಿವರ್ಷ ಮಕ್ಕಳ ಸಂತೆ ಆಯೋಜಿಸಿ ಮಕ್ಕಳಿಗೆ ಮಾರುಕಟ್ಟೆ ಮತ್ತು ವ್ಯವಹಾರಿಕ ತಿಳಿವಳಿಕೆ ನೀಡಲಾಗುತ್ತಿದೆ. ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕರು ರೈತರ ಮಕ್ಕಳಾಗಿದ್ದಾರೆ. ತಮ್ಮೂರಿನ ತೋಟಗಳಲ್ಲಿ ಬೆಳೆಯುವ ಹಣ್ಣು, ಸೊಪ್ಪು–ತರಕಾರಿ ತಂದು ಮಾರಾಟ ಮಾಡಿ ಲಾಭ, ನಷ್ಟದ ಬಗ್ಗೆ ಕಲಿತುಕೊಂಡಿದ್ದಾರೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ವೈ ನಾಗರಾಜ್ ತಿಳಿಸಿದರು.

ಶಿಕ್ಷಣ ಇಲಾಖೆ ಬಿಆರ್ಸಿ ನಾಗರಾಜ್, ಜೇನುಗೂಡು ಟ್ರಸ್ಟ್ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಗ್ರಾ.ಪಂ ಸದಸ್ಯ ಅನಿತಾ ಆನಂದ್, ಗ್ರಾಪಂ ಸದಸ್ಯೆ ಸೌಮ್ಯಶ್ರೀ, ಆಶ್ವಥ್, ಶಾಲಾಭಿವೃದ್ದಿ ಸಮಿತಿ ಸದಸ್ಯ ನರಸಿಂಹಮೂರ್ತಿ, ಶಾಲಾ ಶಿಕ್ಷಕಿಯರಾದ ರಾಧಿಕಾ, ವನಜಾ, ಲಕ್ಷ್ಮಿ, ಮಂಜುಳಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.