ಜೆದ್ದಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನ ಆರು ಆಟಗಾರರನ್ನು ಖರೀದಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಇಂದು ಇದುವರೆಗೆ 10 ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಸೌದಿ ಅರೇಬಿಯಾದ ಜೆದ್ದಾದಲ್ಲಿ ಭಾನುವಾರ ಮತ್ತು ಸೋಮವಾರ ಹರಾಜು ನಡೆಯುತ್ತಿದೆ.

ಮೊದಲ ದಿನ ಹೆಚ್ಚು ಖರ್ಚು ಮಾಡದೆ ಎಚ್ಚರಿಕೆ ಹೆಜ್ಜೆ ಹಾಕಿದ್ದ ಆರ್ಸಿಬಿಯ ಪರ್ಸ್ನಲ್ಲಿ, ಇಂದು ಹರಾಜು ಆರಂಭಕ್ಕೂ ಮುನ್ನ ₹ 83 ಕೋಟಿ ಇತ್ತು. ಹೀಗಾಗಿ, ವಿಶ್ವಾಸದಿಂದ ಖರೀದಿಯಲ್ಲಿ ಪಾಲ್ಗೊಂಡಿತು.

ಆರಂಭದಲ್ಲೇ, ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರನ್ನು ತೆಕ್ಕೆಗೆ ಹಾಕಿಕೊಂಡ ಆರ್ಸಿಬಿ, ನಂತರ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಸ್ಫೋಟಕ ಬ್ಯಾಟರ್ಗಳಾದ ಟಿಮ್ ಡೇವಿಡ್, ಜೇಕಬ್ ಬೆಥಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ಕೊಂಡುಕೊಂಡಿದೆ.

ಹರಾಜಿಗೆ ಬಿಡುಗಡೆ ಮಾಡದೆ ತನ್ನಲ್ಲೇ ಉಳಿಸಿಕೊಂಡಿದ್ದ ಆಟಗಾರರೂ ಸೇರಿದಂತೆ, ಆರ್ಸಿಬಿಯ ಆಟಗಾರರ ಸಂಖ್ಯೆ ಸದ್ಯ 19ಕ್ಕೆ ಏರಿಕೆಯಾಗಿದೆ. ಎರಡನೇ ದಿನ ಹರಾಜು ಇನ್ನೂ ಮುಗಿದಿಲ್ಲ.

ಉಳಿಸಿಕೊಂಡಿದ್ದ ಆಟಗಾರರು

ವಿರಾಟ್ ಕೊಹ್ಲಿ: ₹ 21 ಕೋಟಿ

ರಜತ್ ಪಾಟೀದಾರ್: ₹ 11 ಕೋಟಿ

ಯಶ್ ದಯಾಳ್: ₹ 5 ಕೋಟಿ

ಮೊದಲ ದಿನ ಖರೀದಿಸಿದ ಆಟಗಾರರು

ಜೋಶ್ ಹ್ಯಾಜಲ್ವುಡ್: ₹ 12.50 ಕೋಟಿ

ಫಿಲ್ ಸಾಲ್ಟ್: ₹ 11.50 ಕೋಟಿ

ಜಿತೇಶ್ ಶರ್ಮಾ: ₹ 11 ಕೋಟಿ

ಲಿಯಾಮ್ ಲಿವಿಂಗ್ಸ್ಟೋನ್: ₹ 8.75 ಕೋಟಿ

ರಸಿಕ್ ಧರ್: ₹ 6 ಕೋಟಿ

ಸುಯಾಷ್ ಶರ್ಮಾ: ₹ 2.60 ಕೋಟಿ

ಎರಡನೇ ದಿನ ಖರೀದಿಸಿದ ಆಟಗಾರರು

ಭುವನೇಶ್ವರ್ ಕುಮಾರ್: ₹ 10.75 ಕೋಟಿ

ಕೃಣಾಲ್ ಪಾಂಡ್ಯ: ₹ 5.75 ಕೋಟಿ

ಟಿಮ್ ಡೇವಿಡ್: ₹ 3 ಕೋಟಿ

ಜೇಕಬ್ ಬೆಥಲ್: ₹ 2.6 ಕೋಟಿ

ದೇವದತ್ತ ಪಡಿಕ್ಕಲ್: ₹ 2 ಕೋಟಿ

ನುವಾನ್ ತುಷಾರ: ₹ 1.60 ಕೋಟಿ

ರೊಮಾರಿಯೊ ಶೆಫರ್ಡ್: ₹ 1.5 ಕೋಟಿ

ಸ್ವಪ್ನಿಲ್ ಸಿಂಗ್: ₹ 50 ಲಕ್ಷ

ಮನೋಜ್ ಭಾಂಡಗೆ: ₹ 30 ಲಕ್ಷ

ಸ್ವಿಸ್ತಿಕ್ ಛಿಕಾರ: ₹ 30 ಲಕ್ಷ

.IPL Auction: ಮಾರಾಟವಾಗದ ಮನೀಷ್ ಪಾಂಡೆ, ಯಾರಿಗೂ ಬೇಡ ಸ್ಟೀವ್ ಸ್ಮಿತ್.IPL Auction: ಆರ್ಸಿಬಿ ಸೇರುತ್ತಿದ್ದಂತೆ ಟ್ವಿಟರ್ ಬಯೊ ಬದಲಿಸಿದ ಕೃಣಾಲ್ ಪಾಂಡ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.