ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಿವಿಧಡೆಗಳ ರಸ್ತೆ ಬದಿಗಳಲ್ಲಿ ಹಾಕಲಾಗಿರುವ ಕಸದ ರಾಶಿ
ದೊಡ್ಡಬಳ್ಳಾಪುರದ ನಾಗರಕೆರೆ ಅಂಗಳದಲ್ಲಿ ನೀರಿನಲ್ಲಿ ಕರಗದೆ ಉಳಿದಿರುವ ಪಿಒಪಿ ಬಾಂಬೆಗಣೇಶನ ಮೂರ್ತಿಗಳು
ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕಿದರೆ ತೆರವು ಮಾಡುವುದಿಲ್ಲ ಎನ್ನುವ ಸಂದೇಶವನ್ನು ನಗರಸಭೆ ನೀಡಬೇಕಿದೆ. ಪ್ರತಿ ದಿನವು ಮನೆ ಬಾಗಿಲಿಗೆ ಬರುವ ವಾಹನಗಳಿಗೆ ಹಸಿ ಒಣ ಕಸ ವಿಂಗಡಣೆ ಮಾಡಿ ಕಡ್ಡಾಯವಾಗಿ ಕೊಡುವಂತೆ ಮಾಡಬೇಕು. ಹೆಚ್ಚು ಕಸದ ರಾಶಿ ಹಾಕುವ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು. ಹಬ್ಬಗಳ ಸಂದರ್ಭದಲ್ಲಿ ಬಾಳೆಕಂದು ಹೂವು ಸೇರಿದಂತೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ವಿಳಾಸ ಪಡೆದು ಹಬ್ಬದ ವ್ಯಾಪಾರ ಮುಗಿಯುತ್ತಿದ್ದಂತೆ ಯಾವುದೇ ಕಸ ಇಲ್ಲದಂತೆ ತೆರವು ಮಾಡುವ ಅಥವಾ ಕಸ ತೆರವಿಗೆ ನಗರಸಭೆಗೆ ಇಂತಿಷ್ಟು ಹಣ ಪಾವತಿಸುವ ನಿಯಮ ಜಾರಿಯಾಗಬೇಕು.
ಮನೋಜ್‌ಕುಮಾರ್ ಚಿಕ್ಕಪೇಟೆ
ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ಹಬ್ಬದ ದಿನಗಳು ಸೇರಿದಂತೆ ಇತರೆ ದಿನಗಳಲ್ಲೂ ರಸ್ತೆ ಬದಿಗಳಲ್ಲಿ ಕಸದ ರಾಶಿ ಹೆಚ್ಚಾಗುತ್ತಿವೆ. ಸ್ವಚ್ಛ ನಗರಸಭೆ ಎಂದು ಘೋಷಣೆ ಮಾಡಿಕೊಂಡರಷ್ಟೇ ಸಾಲದು. ನಗರವನ್ನು ವಾಸ್ತವದಲ್ಲೂ ಸ್ವಚ್ಛವಾಗಿಡಲು ನಿರ್ದಿಷ್ಟ ಕಾರ್ಯಸೂಚಿ ರೂಪಿಸಬೇಕು. ನಗರದಲ್ಲಿ ಯಾರು ಪೌರಾಯುಕ್ತರು ಅಧ್ಯಕ್ಷರು ಎನ್ನುವ ಹೆಸರಷ್ಟೇ ಸಾರ್ವಜನಿಕರಿಗೆ ತಿಳಿದಿದೆ ಹೊರತು ವ್ಯಕ್ತಿಗಳ ಮುಖ ಪರಿಚಯ ಸಾರ್ವಜನಿಕರಿಗೆ ಇಲ್ಲವಾಗಿದೆ. ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರು ವಾರ್ಡ್‌ಗಳಿಗೆ ಭೇಟಿ ನೀಡಬೇಕು.