ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಮುಖ್ಯ ರಸ್ತೆ ಹದಗೆಟ್ಟಿರುವುದು
ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಯಲ್ಲಿ ನೀರು ತುಂಬಿರುವುದು
ಭಾರಿ ಮಳೆಯಿಂದಾಗಿ ಕೆರೆಯಂತಾದ ದೊಮ್ಮಸಂದ್ರ ರಸ್ತೆ
ದೊಮ್ಮಸಂದ್ರ ರಸ್ತೆಯಲ್ಲಿ ಹೆಚ್ಚಿನ ರಸ್ತೆ ಗುಂಡಿಗಳಿರುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ದೊಡ್ಡ ಸರ್ಕಸ್ ಸವಾಲಾಗಿದೆ. ಗುಂಡಿ ಮುಚ್ಚಿಸಿ ಇಲ್ಲ ಹೊಸ ರಸ್ತೆ ನಿರ್ಮಿಸಿ
ಮೋನಿಷ್ ದೊಮ್ಮಸಂದ್ರ ನಿವಾಸಿಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಾಗಿರುವುದರಿಂದ ರಸ್ತೆ ಗುಂಡಿಗಳು ಹೆಚ್ಚಾಗಿವೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದು
ಬಿ.ಶಿವಣ್ಣ ಆನೇಕಲ್ ಶಾಸಕಹೆಚ್ಚಿದ ವಾಹನ ದಟ್ಟಣೆ
ತಾಲ್ಲೂಕಿನ ದೊಮ್ಮಸಂದ್ರ-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವುದು ಸವಾಲಾಗಿದೆ. ರಸ್ತೆ ಗುಂಡಿಗಳಿಂದ ಆವರಿಸಿರುವುದರಿಂದ ಗಂಟೆಗಟ್ಟಲೆ ವಾಹನ ದಟ್ಟಣೆ ಉಂಟಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಐಟಿ ಬಿಟಿ ಉದ್ಯೋಗಿಗಳು ಕಾರುಗಳನ್ನು ಬಳಸುತ್ತಾರೆ. ಇದರಿಂದ ಪ್ರತಿನಿತ್ಯ ಬೆಳಗಿನಿಂದ ರಾತ್ರಿಯವರೆಗೂ ವಾಹನ ದಟ್ಟಣೆ ಇರುತ್ತದೆ. ನಾಲ್ಕೈದು ಕಿ.ಮೀ. ಸಾಗಲು 30-40ನಿಮಿಷಗಳು ಸಂಚರಿಸಬೇಕಾಗಿದೆ. ಒಂದೆಡೆ ರಸ್ತೆ ಗುಂಡಿಗಳು ಮತ್ತೊಂದೆಡೆ ವಾಹನ ದಟ್ಟಣೆ ನಡುವೆ ಉದ್ಯೋಗಿಗಳು ವಿದ್ಯಾರ್ಥಿಗಳು ಬಸವಳಿದ್ದಾರೆ. *** ಅಪಘಾತ ಕಟ್ಟಿಟ್ಟ ಬುತ್ತಿ ದೊಮ್ಮಸಂದ್ರ ರಸ್ತೆಯಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ರಸ್ತೆ ಗುಂಡಿಗಳು ತಪ್ಪಿಸಲು ದ್ವಿಚಕ್ರ ವಾಹನ ಸವಾರರು ವಾಹನವನ್ನು ಅತ್ತೆಡೆ ಇತ್ತೆಡೆ ತಿರುಗಿಸಿದಾಗ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಗುಂಡಿಗಳಿಂದ ಬಿದ್ದು ಸಾರ್ವಜನಿಕರು ಕೈ ಕಾಲು ಗಾಯ ಮಾಡಿಕೊಂಡಿರುವ ಘಟನೆಗಳು ಆಗ್ಗಾಗ್ಗೆ ನಡೆಯುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹಾಗಾಗಿ ರಸ್ತೆ ಗುಂಡಿಗಳನ್ನು ಸರಿಪಡಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.