ವಿಜಯಪುರ: ಮಾರ್ಚ್ ತಿಂಗಳು ಕಳೆದು ಏಪ್ರಿಲ್ ಬಂತೆಂದರೆ ಸಾಕು ಗಿಡ – ಮರಗಳಲ್ಲಿನ ಎಲೆ ಉದುರಿ, ಹೊಸ ಎಲೆಗಳು ಚಿಗುರೊಡೆಯುವುದು ಪ್ರಕೃತಿ ನಿಯಮ. ಕೆಂಪು ಬಣ್ಣದಿಂದ ಕಂಗೊಳಿಸುವ ಗುಲ್‌ಮೊಹರ್ ಹೂಗಳ ಕಲರವ ಜನರಲ್ಲಿ ಉಲ್ಲಾಸ ಉಂಟು ಮಾಡುತ್ತದೆ.

ರಸ್ತೆ ಬದಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ಗುಲ್ ಮೊಹರ್‌ನ ಬೆಡಗು, ಚಿತ್ತಾಕರ್ಷಕ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ವಿಜಯಪುರದಿಂದ ದೇವನಹಳ್ಳಿ ಕಡೆಗೆ, ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮುಖ್ಯ ರಸ್ತೆ ಇಕ್ಕೆಲುಗಳಲ್ಲಿ ಈ ಕೆಂಪು ಬಣ್ಣದ ಹೂವು ಎಲ್ಲರ ಮನಸೊರೆಗೊಳ್ಳುತ್ತಿದೆ.

ಏಪ್ರಿಲ್, ಮೇ ತಿಂಗಳಲ್ಲಿ ಮಾತ್ರ ಈ ಹೂಗಳು ಎಲ್ಲರ ಗಮನ ಸೆಳೆಯುತ್ತದೆ. ಈ ಮರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕತ್ತಿಕಾಯಿ ಮರ ಎಂದೇ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಡಿಲೊನಿಕ್ಸ್ ರೆಜಿಯ.

ಮದುವೆ, ಜಾತ್ರೆ, ಊರ ಹಬ್ಬಗಳಲ್ಲಿ ಈ ಹೂಗಳನ್ನು ಅಲಂಕಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ವಿವಿಧ ಬಗೆ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಗುಲ್‌ಮೊಹರ್ ಮೊಗ್ಗಿನಲ್ಲಿರುವ ದಳಗಳನ್ನು ಬಿಡಿಸಿ ಅದರಲ್ಲಿ ಕೋಳಿ ಜಗಳದಾಟ ಆಡುತ್ತಾರೆ. ಇದು ಎಲ್ಲ ವರ್ಗದವರ ಮೆಚ್ಚಿನ ಮರವಾಗಿದೆ.

ಈ ಗುಲ್ ಮೊಹರ್ ಹೂಗಳು ಹೆಚ್ಚಾಗಿ ಆಸ್ಟ್ರೇಲಿಯಾ, ಕೆರೆಬಿಯನ್, ದಕ್ಷಿಣ ಪ್ಲೋರಿಡಾ, ಚೀನಾ, ಥೈವಾನ್ ಸೇರಿದಂತೆ ನಾನಾ ದೇಶಗಳಲ್ಲಿ ಯಥೇಚ್ಚವಾಗಿ ಕಂಡು ಬರುತ್ತದೆ. ಭಾರತದಲ್ಲಿ ಇದು ಮೇ ಫ್ಲವರ್ ಎಂಬ ಖ್ಯಾತಿ ಪಡೆದಿದೆ ಎಂದು ಸಸ್ಯ ತಜ್ಞ ಶ್ರೀನಿವಾಸಮೂರ್ತಿ ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.